ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿವಾದಗಳು ಏಕೆ ? | ಈಚೆಗೆ ವಿವಾದಗಳು ಏಕೆ ಹೆಚ್ಚಾಗುತ್ತಿದೆ.. ?

Advertisement

ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ನಂಬರ್‌ ದೇವಸ್ಥಾನ. ದೇಶದಲ್ಲೇ ಅಪರೂಪ ಪುಣ್ಯಕ್ಷೇತ್ರ.  ನಾಗಾರಾಧನೆಯ ಪ್ರಮುಖ ಕ್ಷೇತ್ರ. ಆದರೆ ಇದೀಗ ಕೆಲವು ಸಮಯಗಳಿಂದ ವಿವಾದಗಳ ಮೂಲಕ ರಾಜ್ಯದಲ್ಲಿ ಸುದ್ದಿಯಾಗುತ್ತಿದೆ. ಈಚೆಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವರ ವರ್ಗಾವಣೆ ಹಾಗೂ ಅದಕ್ಕೆ ತಡೆಯಾಗುವುದರ ಮೂಲಕ ಮತ್ತೆ ಸುದ್ದಿಯಾಗಿತ್ತು.

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗ ದೋಷಕ್ಕೆ ಸಂಬಂಧಿಸಿ  ಸರ್ಪಸಂಸ್ಕಾರ, ಆಶ್ಲೇಷ ಬಲಿ ಪೂಜೆ ನೆರವೇರಿಸಿದರೆ  ಸರ್ಪದೋಷ ನಿವಾರಣೆಯಾಗುತ್ತದೆ. ಇದು ಧಾರ್ಮಿಕ ನಂಬಿಕೆಯೂ, ಅನೇಕರಿಗೆ ಈ ಸೇವೆಯ ಮೂಲಕ ಸಮಸ್ಯೆ ಬಗೆಹರಿದ ಉದಾಹರಣೆಗಳೂ ಇವೆ. ಕೆಲವು ನಾಗದೋಷಗಳಿಗೆ, ರಾಹು ದೋಷಗಳಿಗೆ ಸುಬ್ರಹ್ಮಣ್ಯ ಆರಾಧನೆಯೇ ಸೂಕ್ತವಾಗಿರುತ್ತದೆ. ಹೀಗಾಗಿ ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಶ್ರದ್ಧಾ ಕೇಂದ್ರ. ದೇವಸ್ಥಾನಗಳಿಗೆ ಹೆಚ್ಚು ಭಕ್ತರು ಆಗಮಿಸಲು ಆರಂಭವಾದ ಬಳಿಕ ಇಲ್ಲಿನ ಆದಾಯವೂ ಹೆಚ್ಚಾಯಿತು. ಇಂದು ಆದಾಯದ ಮೂಲಕವೂ ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ನಂಬರ್‌ ವನ್‌ ದೇವಸ್ಥಾನ. ಭಕ್ತರು ಹೆಚ್ಚು ಆಗಮಿಸುವ ಮೂಲಕ ಸುಬ್ರಹ್ಮಣ್ಯದ ಬಹುತೇಕ ಅಂಗಡಿಗಳಿಗೂ ಉತ್ತಮ ವ್ಯಾಪಾರ, ಅನೇಕ ಲಾಡ್ಜ್‌, ಹೋಟೆಲ್‌ಗಳಿಗೂ ವ್ಯಾಪಾರ ನಡೆಯುತ್ತದೆ. ಹೀಗಾಗಿ ಆರ್ಥಿಕವಾಗಿ ಕುಕ್ಕೆ ಸುಬ್ರಹ್ಮಣ್ಯ ಹೆಚ್ಚು ಬೆಳೆಯುವ ಕ್ಷೇತ್ರವೂ ಹೌದು.

Advertisement
Advertisement
Advertisement

ಆದಾಯದ ಮೂಲವಾಗಿ ಸುಬ್ರಹ್ಮಣ್ಯ ಕ್ಷೇತ್ರವು ಬೆಳೆಯಲು ಆರಂಭವಾದ ಬಳಿಕ ಇಲ್ಲಿ ವ್ಯಾಪಾರಿ ಮನೋಭಾವ ಹೆಚ್ಚಾಯಿತು. ಇದರ ಕಾರಣದಿಂದ ದೇವಸ್ಥಾನದ ಸೇವೆಗಳೂ ವ್ಯಾಪಾರಿ ಮನೋಭಾವದಿಂದ ಬೆಳೆದವು. ಸೇವೆಗಳಿಗೆ ಕಮಿಶನ್‌, ಸೇವೆಗಳಿಗೆ ಪೈಪೋಟಿ ನಡೆಯಿತು. ಚರ್ಚೆ, ವಾದ ವಿವಾದಗಳೂ ನಡೆದವು. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸೇವೆಗಳು, ಸಮೀಪದ ಮಠದಲ್ಲೂ ನಡೆಯಿತು. ಚರ್ಚೆಗಳು, ವಾದಗಳು ವಿವಾದಗಳು ಹೆಚ್ಚಾದವು. ಧಾರ್ಮಿಕವಾಗಿ ಯಾವುದು ಸರಿ ಎನ್ನುವುದನ್ನು ಹೇಳಬೇಕಾದವರು ಮೌನವಾದರು. ಸಂಘಟನೆಗಳೂ ಕೈಕಟ್ಟಿ ಕುಳಿತವು. ವೈಮನಸ್ಸು ಹೆಚ್ಚಾಯಿತು. ವಿವಾದಗಳೂ ಬೆಳೆದವು. ಇಂದು ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಶ್ರದ್ಧಾಕೇಂದ್ರ. ವಿವಾದಗಳೇ ಬೆಳೆಯುವ ಪ್ರದೇಶವಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಆರಾಧನಾ ಪದ್ಧತಿಗಳ ಬಗ್ಗೆ, ಸರ್ಪಸಂಸ್ಕಾರ, ಆಶ್ಲೇಷ ಬಲಿ,  ಗಣಪತಿ ಗುಡಿಯ ಬಗ್ಗೆ, ಶೃಂಗೇರಿ ಮಠದ ಬಗ್ಗೆ ಆರಾಧನಾ ಪದ್ಧತಿಗಳ ಚರ್ಚೆ ಅನೇಕ ಸಮಯಗಳಿಂದ ನಡೆಯುತ್ತಿದೆ, ಇದಕ್ಕೆ ತಾತ್ವಿಕವಾದ , ಧಾರ್ಮಿಕವಾದ ಮಾರ್ಗದರ್ಶನ ನೀಡಬೇಕಾದವರು ಯಾರು ಎಂಬುದು ಇಂದಿಗೂ ನಿರ್ಧಾರವಾಗಿಲ್ಲ. ಬದಲಾಗಿ ಎರಡು ತಂಡಗಳಾಗಿ ವಾದಗಳು ನಡೆಯುತ್ತದೆ, ಆಡಳಿತ ಮಂಡಳಿ ಈ ಚರ್ಚೆಯನ್ನು ಕೊನೆಗಾಣಿಸುವ ಕಡೆಗೆ ಗಮನಹಿಸಿದಂತೆ ಕಾಣುತ್ತಿಲ್ಲ.

Advertisement
Advertisement

ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿಗೆ ಅನೇಕ ಸಮಯಗಳ ಹಿಂದೆ ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿ ಕುಂಟುತ್ತಾ ಅಭಿವೃದ್ಧಿ ಸಾಗಿತು. ಆರಂಭದ ಮಾಸ್ಟರ್‌ ಪ್ಲಾನ್‌ಗಳು ಬದಲಾಗುತ್ತಾ ಸಾಗಿತು. ಇಂದಿಗೂ ಸೂಕ್ತವಾದ , ಯೋಜನಾಬದ್ಧವಾದ ನೀಲನಕಾಶೆ ಆದಂತೆ ಕಾಣುತ್ತಿಲ್ಲ. ಏಕೆಂದರೆ ಅಭಿವೃದ್ಧಿಯ ಆರಂಭದಲ್ಲಿ ಕೆಲವೊಂದು ತೊಡಕುಗಳು ಇರುತ್ತವೆ, ಆದರೆ ಇಂದಿಗೂ ಒಮ್ಮೆಲೇ ಭಕ್ತಾದಿಗಳು ಆಗಮಿಸಿದರೆ ವಸತಿಗೆ ವ್ಯವಸ್ಥೆ ಇಲ್ಲದೆ ಪರದಾಟ ನಡೆಸಿದ ಸ್ಥಿತಿ ಕಳೆದ ಎರಡು ವಾರಗಳಿಂದ ನಡೆಯುತ್ತಿದೆ. ಹಿಂದೆ ಇದ್ದ ಛತ್ರಗಳು ಈಗಿಲ್ಲ, ಹಿಂದಿನ ಯೋಜನೆಗಳು ಛತ್ರವನ್ನು ರಚಿಸಿರುವುದರ ಉದ್ದೇಶವೇ ಇದಾಗಿತ್ತು. ಭಕ್ತಾದಿಗಳಿಗೆ ಕನಿಷ್ಟ ವಸತಿಯ ವ್ಯವಸ್ಥೆಯನ್ನೂ ಕಲ್ಪಿಸುವುದಾಗಿತ್ತು. ಆದರೆ ತಾತ್ಕಾಲಿಕವಾಗಿ ಭಕ್ತಾದಿಗಳಿಗೆ ವಸತಿ, ಶೌಚಾಲಯದ ವ್ಯವಸ್ಥೆಯನ್ನು ಆಡಳಿತವು ಮಾಡದೆ ಇರುವುದು  ಕಂಡುಬಂದಿದೆ.

ಆಶ್ಲೇಷ ಬಲಿಯಂತಹ ಸೇವೆಗಳು ಆಶ್ಲೇಷ ನಕ್ಷತ್ರದಂದು ಹೆಚ್ಚಾಗಿ ಸೇವೆ ನಡೆಯುತ್ತದೆ. ಈ ಸಂದರ್ಭ ಭಕ್ತಾದಿಗಳು ರಶೀದಿಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಾರೆ, ರಶೀದಿಗಾಗಿ ಭಕ್ತಾದಿಗಳು ಮುಂಜಾನೆ 3 ಗಂಟೆಯ ಆಸುಪಾಸಿನಲ್ಲಿಯೇ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿ ಬರುತ್ತದೆ. ಇಂತಹ ಸಮಯದಲ್ಲೂ ಆಡಳಿತವು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯವಿತ್ತು.

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಡೆಯಿಂದಲೇ ಶಿಕ್ಷಣ ಸಂಸ್ಥೆಗಳು ನಡೆಯುತ್ತದೆ. ಆದರೆ ಕೆಲವು ಮೂಲಭೂತ ಸಮಸ್ಯೆಗಳ ನಿವಾರಣೆಗೆ ಹೆಚ್ಚಿನ ಮುತುವರ್ಜಿ ಬೇಕಾಗಿತ್ತು. ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ್ದು ಧಾರ್ಮಿಕ ಸಂಸ್ಥೆಗಳ ಉದ್ದೇಶಗಳಲ್ಲಿ  ಒಂದಾಗಬೇಕಿತ್ತು. ಆದರೆ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರೊಬ್ಬರು ರಾಜೀನಾಮೆ ನೀಡಬೇಕಾಗಿ ಬಂದದ್ದು ಹಾಗೂ ಆ ವಿವಾದದ ಮೂಲವೂ ಬಗೆಹರಿಯದೇ ಇರುವುದು  ಕಂಡುಬಂದಿತ್ತು.

ಮಾಸ್ಟರ್‌ ಪ್ಲಾನ್‌ ಯೋಜನೆಯಲ್ಲಿ ಆರೋಗ್ಯ ವ್ಯವಸ್ಥೆಗೆ ಆದ್ಯತೆ ಇದೆ. ಆದರೆ ಅದುವರೆಗೂ ತುರ್ತು ಆರೋಗ್ಯ ಸೇವೆಗೆ ಆಡಳಿತವು ಯಾವುದೇ ತಕ್ಷಣದ ವ್ಯವಸ್ಥೆಯನ್ನು ಕೈಗೊಳ್ಳದೇ ಇರುವುದು  ಆಡಳಿತ ಲೋಪ ಎಂದು ಸಾರ್ವಜನಿಕ ವಲಯದಲ್ಲಿ ಈ ಹಿಂದೆ ಚರ್ಚೆಯಾಗಿತ್ತು.

Advertisement

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವರನ್ನು ವರ್ಗಾವಣೆ  ಹಾಗೂ ಅದಕ್ಕೆ ತಡೆ ಇದೆರಡೂ ಕೂಡಾ ಬಹಿರಂಗವಾಗಿ ಚರ್ಚೆಯಾಗಿ, ವ್ಯವಸ್ಥಾಪನಾ ಸಮಿತಿಯ ಕೆಲವು ಸದಸ್ಯರು ರಾಜೀನಾಮೆ ನೀಡುವ ಬಗ್ಗೆಯೂ ಚರ್ಚೆಯಾಗಿ ಅದೂ ಸಾರ್ವಜನಿಕ ವಲಯದಲ್ಲಿ  ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು. ಕೊನೆಗೆ ಸರಿಯಾಗಿ ಕೆಲಸ ಮಾಡುವ ಕಾರ್ಯನಿರ್ವಹಣಾಧಿಕಾರಿಯವರು ಬೇಕು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೇ ಹೇಳಿಕೆ ನೀಡಿದ್ದರು. ಇದರ ಹಿಂದೆಯೂ ರಾಜಕೀಯ ಇರುವುದರ ಬಗ್ಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮಾಧ್ಯಮಗಳ ಮೂಲಕ ಹೇಳಿದ್ದರು.

ಕೆಲಸ ಮಾಡದೇ ಇರುವ ಕಾರ್ಯನಿರ್ವಹಣಾಧಿಕಾರಿಯವರನ್ನು  ನೇಮಕ ಮಾಡಿದ್ದು ಹಾಗೂ ಈಗ ಅವರ ವರ್ಗಾವಣೆ , ಇದರಲ್ಲಿ ರಾಜಕೀಯ ಸೇರಿದಂತೆ ಹಲವು ಸಂಗತಿಗಳು ಧಾರ್ಮಿಕ ಕೇಂದ್ರದಲ್ಲಿ ಕಂಡುಬರುತ್ತಿರುವುದು ದೇವಸ್ಥಾನದ ಅಭಿವೃದ್ಧಿ, ಕುಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಅಷ್ಟೊಂದು ಪೂರಕವಾಗಿರುವಂತೆ ಕಂಡುಬರುತ್ತಿಲ್ಲ. ಆದರೆ ಧಾರ್ಮಿಕತೆಯನ್ನು ಹೇಳಬೇಕಾದವರು ಮೌನವಾಗಿರುವುದು  ಬಹುದೊಡ್ಡ ಲೋಪವಾಗಿದೆ. ದಕ್ಷ ಅಧಿಕಾರಿಗಳೂ ಮುಜರಾಯಿ ಇಲಾಖೆಯಲ್ಲಿ ಇದ್ದೂ ಕ್ಷೇತ್ರವು ಅಭಿವೃದ್ಧಿಯಾಗದೇ ಇರುವುದೂ ಇನ್ನೊಂದು ಲೋಪವಾಗಿ ಕಂಡಿದೆ.

Advertisement

 

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿವಾದಗಳು ಏಕೆ ? | ಈಚೆಗೆ ವಿವಾದಗಳು ಏಕೆ ಹೆಚ್ಚಾಗುತ್ತಿದೆ.. ?"

Leave a comment

Your email address will not be published.


*