ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಮಲಗಿದ ಭಕ್ತಾದಿಗಳು…! | ರಾಜ್ಯದ ನಂಬರ್‌ ವನ್‌ ದೇವಸ್ಥಾನದಲ್ಲಿ ಈ ಅವ್ಯವಸ್ಥೆಯೇ ? | ಮುಜರಾಯಿ ಇಲಾಖೆ ಮೌನ ಏಕೆ ? |

Advertisement

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತಾದಿಗಳು ರಥಬೀದಿಯಲ್ಲಿ, ರಸ್ತೆಯ ಫುಟ್‌ ಪಾತ್‌ ನಲ್ಲಿ ಮಲಗಿದರು. ಇಂತಹದ್ದೊಂದು ವಿಷಾದ ಸಂಗತಿ ಸೋಮವಾರ ರಾತ್ರಿ ನಡೆದಿದೆ. ರಾಜ್ಯದ ನಂಬರ್‌ ವನ್‌ ದೇವಸ್ಥಾನದಲ್ಲಿನ ಈ ವ್ಯವಸ್ಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ, ಮುಜರಾಯಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಈ ಬಗ್ಗೆ ಗಮನಿಸಬೇಕಾಗಿದೆ. ಎರಡು ವಾರದ ಹಿಂದೆಯೂ ಇಂತಹದೇ ಸ್ಥಿತಿ ನಿರ್ಮಾಣವಾಗಿತ್ತು.

Advertisement

Advertisement
Advertisement
Advertisement

Advertisement

ರಾಜ್ಯದ ನಂಬರ್‌ ವನ್‌ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ಕಳೆದ ಎರಡು ವಾರಗಳಿಂದ ಭಕ್ತಾದಿಗಳು ಅವ್ಯವಸ್ಥೆಯನ್ನು ಅನುಭವಿಸುವಂತಾಗಿದೆ. ಕಳೆದ ವಾರ ಭಕ್ತರ ಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ವಸತಿಗೆ ವ್ಯವಸ್ಥೆ ಇಲ್ಲದೆ ರಸ್ತೆ ಬದಿ, ರಥಬೀದಿಯಲ್ಲಿ ಭಕ್ತಾದಿಗಳು ಮಲಗಿದ್ದು, ಇದೀಗ ಸೋಮವಾರ ರಾತ್ರಿಯೂ ಅಂತಹದೇ ಸ್ಥಿತಿ ಕಂಡುಬಂದಿದೆ. ವಸತಿಗೆ ವ್ಯವಸ್ಥೆ ಇಲ್ಲದೆ ಭಕ್ತಾದಿಗಳು ರಥಬೀದಿಯಲ್ಲಿ  ಹಾಗೂ ರಸ್ತೆ ಬದಿ ಮಲಗಿದರು. ಈ ಬಾರಿ ದೇವಸ್ಥಾನದ ವತಿಯಿಂದ ವಸತಿಗೆ ಡೈನಿಂಗ್‌ ಹಾಲ್‌ ಹಾಗೂ ಇತರ ಕಡೆ ವ್ಯವಸ್ಥೆ ಮಾಡಿದ್ದರೂ ಭಕ್ತರ ಸಂದಣಿ ಹೆಚ್ಚಾದ್ದರಿಂದ ಅನೇಕ ಭಕ್ತರು ಕೊಠಡಿ ಸಿಗದೆ ಪರದಾಟ ನಡೆಸಿದರು. ಈಗ ಕೊಠಡಿಗಿಂತಲೂ ಶೌಚಾಲಯದ ವ್ಯವಸ್ಥೆಗೆ ಸಂಕಷ್ಟವಾಗಿದೆ. ಸ್ನಾನಕ್ಕೆ ಕುಮಾರಧಾರಾ ನದಿಗೆ ತೆರಳಿದರೂ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಗೆ ಪರದಾಟವಾಗಿದೆ. ಅಭಿವೃದ್ಧಿಯ ಪಥದಲ್ಲಿ ಕುಕ್ಕೆಯು ಸಾಗುತ್ತಿದ್ದರೂ ಒಮ್ಮೆಲೇ ಭಕ್ತರ ಸಂಖ್ಯೆ ಅಧಿಕವಾದರೂ ತಕ್ಷಣ ವ್ಯವಸ್ಥೆಗೆ ರಾಜ್ಯದ ನಂಬರ್‌ ವನ್‌ ದೇವಸ್ಥಾನದ ಆಡಳಿತಕ್ಕೆ , ಅಧಿಕಾರಿಗಳಿಗೆ ಏಕೆ ಸಾಧ್ಯವಿಲ್ಲ ಎನ್ನುವುದು ಭಕ್ತರ ಪ್ರಶ್ನೆಯಾಗಿದೆ. ವಸತಿಗೆ ತಕ್ಷಣವೇ ಶಾಮಿಯಾನದ ವ್ಯವಸ್ಥೆ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಷ್ಟವೇ ? ಎಂಬುದೂ ಭಕ್ತರ ಪ್ರಶ್ನೆ.

Advertisement

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ಮಲಗಿದ ಭಕ್ತಾದಿಗಳು…! | ರಾಜ್ಯದ ನಂಬರ್‌ ವನ್‌ ದೇವಸ್ಥಾನದಲ್ಲಿ ಈ ಅವ್ಯವಸ್ಥೆಯೇ ? | ಮುಜರಾಯಿ ಇಲಾಖೆ ಮೌನ ಏಕೆ ? |"

Leave a comment

Your email address will not be published.


*