ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತಾದಿಗಳು ರಥಬೀದಿಯಲ್ಲಿ, ರಸ್ತೆಯ ಫುಟ್ ಪಾತ್ ನಲ್ಲಿ ಮಲಗಿದರು. ಇಂತಹದ್ದೊಂದು ವಿಷಾದ ಸಂಗತಿ ಸೋಮವಾರ ರಾತ್ರಿ ನಡೆದಿದೆ. ರಾಜ್ಯದ ನಂಬರ್ ವನ್ ದೇವಸ್ಥಾನದಲ್ಲಿನ ಈ ವ್ಯವಸ್ಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಸರ್ಕಾರ, ಮುಜರಾಯಿ ಇಲಾಖೆ ಈ ಬಗ್ಗೆ ಗಂಭೀರವಾಗಿ ಈ ಬಗ್ಗೆ ಗಮನಿಸಬೇಕಾಗಿದೆ. ಎರಡು ವಾರದ ಹಿಂದೆಯೂ ಇಂತಹದೇ ಸ್ಥಿತಿ ನಿರ್ಮಾಣವಾಗಿತ್ತು.
ರಾಜ್ಯದ ನಂಬರ್ ವನ್ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ. ಕಳೆದ ಎರಡು ವಾರಗಳಿಂದ ಭಕ್ತಾದಿಗಳು ಅವ್ಯವಸ್ಥೆಯನ್ನು ಅನುಭವಿಸುವಂತಾಗಿದೆ. ಕಳೆದ ವಾರ ಭಕ್ತರ ಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ವಸತಿಗೆ ವ್ಯವಸ್ಥೆ ಇಲ್ಲದೆ ರಸ್ತೆ ಬದಿ, ರಥಬೀದಿಯಲ್ಲಿ ಭಕ್ತಾದಿಗಳು ಮಲಗಿದ್ದು, ಇದೀಗ ಸೋಮವಾರ ರಾತ್ರಿಯೂ ಅಂತಹದೇ ಸ್ಥಿತಿ ಕಂಡುಬಂದಿದೆ. ವಸತಿಗೆ ವ್ಯವಸ್ಥೆ ಇಲ್ಲದೆ ಭಕ್ತಾದಿಗಳು ರಥಬೀದಿಯಲ್ಲಿ ಹಾಗೂ ರಸ್ತೆ ಬದಿ ಮಲಗಿದರು. ಈ ಬಾರಿ ದೇವಸ್ಥಾನದ ವತಿಯಿಂದ ವಸತಿಗೆ ಡೈನಿಂಗ್ ಹಾಲ್ ಹಾಗೂ ಇತರ ಕಡೆ ವ್ಯವಸ್ಥೆ ಮಾಡಿದ್ದರೂ ಭಕ್ತರ ಸಂದಣಿ ಹೆಚ್ಚಾದ್ದರಿಂದ ಅನೇಕ ಭಕ್ತರು ಕೊಠಡಿ ಸಿಗದೆ ಪರದಾಟ ನಡೆಸಿದರು. ಈಗ ಕೊಠಡಿಗಿಂತಲೂ ಶೌಚಾಲಯದ ವ್ಯವಸ್ಥೆಗೆ ಸಂಕಷ್ಟವಾಗಿದೆ. ಸ್ನಾನಕ್ಕೆ ಕುಮಾರಧಾರಾ ನದಿಗೆ ತೆರಳಿದರೂ ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಗೆ ಪರದಾಟವಾಗಿದೆ. ಅಭಿವೃದ್ಧಿಯ ಪಥದಲ್ಲಿ ಕುಕ್ಕೆಯು ಸಾಗುತ್ತಿದ್ದರೂ ಒಮ್ಮೆಲೇ ಭಕ್ತರ ಸಂಖ್ಯೆ ಅಧಿಕವಾದರೂ ತಕ್ಷಣ ವ್ಯವಸ್ಥೆಗೆ ರಾಜ್ಯದ ನಂಬರ್ ವನ್ ದೇವಸ್ಥಾನದ ಆಡಳಿತಕ್ಕೆ , ಅಧಿಕಾರಿಗಳಿಗೆ ಏಕೆ ಸಾಧ್ಯವಿಲ್ಲ ಎನ್ನುವುದು ಭಕ್ತರ ಪ್ರಶ್ನೆಯಾಗಿದೆ. ವಸತಿಗೆ ತಕ್ಷಣವೇ ಶಾಮಿಯಾನದ ವ್ಯವಸ್ಥೆ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಷ್ಟವೇ ? ಎಂಬುದೂ ಭಕ್ತರ ಪ್ರಶ್ನೆ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…