ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ಸೋಮವಾರ ರಾತ್ರಿ ರಥಬೀದಿಯಲ್ಲಿ ಭಕ್ತಾದಿಗಳು ಮಲಗಿರುವ ಬಗ್ಗೆ ದೇವಸ್ಥಾನದ ವತಿಯಿಂದ ಸ್ಪಷ್ಟನೆ ನೀಡಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳು ವಸತಿ ಇಲ್ಲದೇ ಇದ್ದಲ್ಲಿ ಆದಿಸುಬ್ರಹ್ಮಣ್ಯದ ಬಳಿಯ ಕಲ್ಯಾಣ ಮಂಟಪ ಹಾಗೂ ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಇದರ ಪ್ರಯೋಜನ ಪಡೆಯುವಂತೆ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಭಕ್ತಾದಿಗಳಿಗೆ ವಸತಿ ವ್ಯವಸ್ಥೆ. ಪ್ರಕಟಣೆಯ ಮೂಲಕ ಮಾಹಿತಿ ತಿಳಿಸಿದ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ. pic.twitter.com/HmlZ3FBU1J
— theruralmirror (@ruralmirror) May 3, 2022
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕೊಠಡಿ ವ್ಯವಸ್ಥೆ ಇರುತ್ತದೆ. ವಸತಿಗೃಹಗಳು ಭರ್ತಿಯಾದ ಬಳಿಕ ಆದಿಸುಬ್ರಹ್ಮಣ್ಯದ ಬಳಿಯ ಕಲ್ಯಾಣ ಮಂಟಪ ಹಾಗೂ ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೂ ಕೂಡಾ ತಡರಾತ್ರಿ ಆಗಮಿಸಿದ ಭಕ್ತಾದಿಗಳು ರಥಬೀದಿಯಲ್ಲಿ ಮಲಗಿರುವುದು ತಿಳಿದುಬಂದಿದೆ. ರಜಾ ದಿನ, ಸರ್ಕಾರಿ ರಜೆ ಹಾಗೂ ಅಕ್ಷಯ ತೃತೀಯವಾದ್ದರಿಂದ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.