Advertisement
ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಘ್ನನಾಶಕ ಗಣಪ ಉಪವಾಸದಲ್ಲಿ…!? | ಮೌನ ಪ್ರತಿಭಟನೆ ಮಾಡಿದ ಭಕ್ತರು….!! |

Share

ನಾಡಿನ ಪ್ರಸಿದ್ಧ ಹಾಗೂ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ವಿಘ್ನನಾಶಕ ಗಣಪ ಉಪವಾಸದಲ್ಲಿ..!?. ಹೀಗೊಂದು ಪ್ರಶ್ನೆ  ಎದ್ದಿದೆ. ಕಾರಣ, ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿಯ ಮೂವರು ಸದಸ್ಯರು “ವಿಘ್ನನಾಶಕ ಗಣಪ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಲಗಣಪ ಉಪವಾಸದಲ್ಲಿ ಇದ್ದಾನೆ” ಎಂದು ಶುಕ್ರವಾರ ಮೌನ ಪ್ರತಿಭಟನೆಯನ್ನು ಸಾಂಕೇತಿಕವಾಗಿ ದೇವಸ್ಥಾನದ ಗೋಪುರ ಬಳಿ ನಡೆಸಿದ್ದಾರೆ.  ಈ ಸಂದರ್ಭದಲ್ಲಿ ಮೂಲಗಣಪನ ದರ್ಶನ ಬೇಕು , ಮೂಲಗಣಪತಿಗೆ ಪೂಜೆ ಬೇಕು ಎಂದು ಒತ್ತಾಯಿಸಿದ್ದಾರೆ.

Advertisement
Advertisement

Advertisement

ಕಡಬ ತಾಲೂಕಿನಲ್ಲಿ ಬರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಡಿನ ಪ್ರಸಿದ್ಧ ದೇವಸ್ಥಾನ. ಸಾಕಷ್ಟು ಮಂದಿ ಭಕ್ತರು  ನಾಡಿನ ವಿವಿದೆಡೆಯಿಂದ ಆಗಮಿಸುತ್ತಾರೆ. ನಾಗ ದೇವರಿಗೆ ವಿವಿಧ ರೀತಿಯ ಹರಕೆಯನ್ನೂ ಒಪ್ಪಿಸುತ್ತಾರೆ, ನೆಮ್ಮದಿ ಕಾಣುತ್ತಾರೆ. ಆದರೆ ಕಳೆದ ಕೆಲವು ಸಮಯಗಳಿಂದ ಇಲ್ಲಿ ವಿವಾದಗಳು ಸಾಕಷ್ಟು ಕಂಡುಬರುತ್ತಿದೆ. ಈ ಹಿಂದೆ ಸರ್ಪಸಂಸ್ಕಾರದ ವಿಚಾರವಾಗಿ ವಿವಾದ ಎದ್ದು ಸುದ್ದಿಯಾಗಿತ್ತು, ಆ ಬಳಿಕ ಕೊರೋನಾ ಕಾರಣದಿಂದ ಸೇವೆಗಳೂ ಕಡಿಮೆಯಾದವು, ವಿವಾದವೂ ತಣ್ಣಗಾಯಿತು. ಆ ಬಳಿಕವೂ ಸಣ್ಣ ಸಣ್ಣ ವಿವಾದಗಳು ಕಂಡುಬರುತ್ತಿತ್ತು. ಇದೀಗ ಭಕ್ತರೂ ಗಮನಿಸಬೇಕಾದ ಹಾಗೂ ಗಂಭೀರವಾದ ವಿವಾದವೊಂದು ಎದ್ದಿದೆ. ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ಉಪವಾಸದಲ್ಲಿದ್ದಾರೆ ಎನ್ನುವುದು ಈಗಿನ ವಿವಾದದ ವಿಷಯ. ಈ ವಿವಾದ ಬೆಳೆದು  ದೇವಸ್ಥಾನದ ಮುಂದೆ ಸಾಂಕೇತಿಕವಾಗಿ ಮೂರು ಮಂದಿ ಧರಣಿ ಕುಳಿತುಕೊಳ್ಳುವ ಸ್ಥಿತಿಗೆ ಬಂದಿದೆ. ಅದರಲ್ಲಿ ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಭಾಗವಹಿಸಿದ್ದರು. ಹೀಗಾಗಿ ಈ ಪ್ರಕರಣ ಈಗ ಗಂಭೀರತೆ ಪಡೆದುಕೊಂಡಿದೆ.‌

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ದೇವರ ವಿಗ್ರಹವನ್ನು ಭಕ್ತರ ದರ್ಶನಕ್ಕೆ ಇಡಬೇಕು, ಒಳಾಂಗಣದಲ್ಲಿ ಸೂಕ್ತವಾದ ಗುಡಿಯನ್ನು ನಿರ್ಮಿಸಿ ಗುಡಿಯಲ್ಲಿ ಮೂಲ ಮಹಾಗಣಪತಿ ದೇವರನ್ನು ಪ್ರತಿಷ್ಟಾಪನೆ  ಮಾಡಿ ಕ್ರಮಬದ್ಧವಾದ ಪೂಜೆ ಮತ್ತು ನೈವೇದ್ಯ ನಡೆಸಬೇಕು ಎಂದು ಆಗ್ರಹಿಸಿ  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಪ್ರಮುಖರಿಂದ ಮೌನ ಧರಣಿ ಶುಕ್ರವಾರ ನಡೆಸಲಾಯಿತು. ಈ ಸಾಂಕೇತಿಕ ಧರಣಿಯಲ್ಲಿ  ಪ್ರಮುಖರಾದ ಶ್ರೀನಾಥ ಟಿಎಸ್, ಕೃಷ್ಣಮೂರ್ತಿ ಭಟ್, ಪ್ರಶಾಂತ್ ಭಟ್ ಮಾಣಿಲ ಭಾಗವಹಿಸಿದ್ದರು.

Advertisement

ಎರಡು ವಾರಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಆಡಳಿತಕ್ಕೆ ಮತ್ತು  ಸರಕಾರಕ್ಕೆ ಮನವಿ ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಪ್ರಮುಖರು,    ಕುಕ್ಕೆ ಶ್ರೀ  ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ  ದೇವರಿಗೆ ಸರಿಯಾಗಿ ಪೂಜೆ ನಡೆಯಬೇಕು ಹಾಗೂ ಮೂಲ ಗಣಪತಿ ದೇವರಿಗೆ ಪ್ರತ್ಯೇಕ ಗುಡಿ ನಿರ್ಮಾಣವಾಗಬೇಕು, ನೈವೇದ್ಯ ಸರಿಯಾಗಬೇಕು ಎಂದು ಒತ್ತಾಯಿಸಿದ್ದರು. ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ಭಗವಂತನ ಸರಿಯಾದ ಅನುಗ್ರಹ ಹಾಗೂ ಫಲ ಸದ್ಯ ಸಿಗುತ್ತಿದ್ದರೂ ಪರಿಪೂರ್ಣವಾದ ಫಲ ಸಿಗಬೇಕಾದರೆ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಸರಿಯಾಗಿರಬೇಕು ಎಂಬುದು ಹಿತರಕ್ಷಣಾ ವೇದಿಕೆ ಒತ್ತಾಯವಾಗಿತ್ತು. ಆದರೆ ಗಣೇಶ ಚೌತಿಯಂದು ಕೂಡಾ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಪ್ರಮುಖರಿಂದ ಮೌನ ಧರಣಿ ನಡೆಸಿದರು. ಸದ್ಯ ಇದು ಸಾಂಕೇತಿಕ ಧರಣಿಯಾಗಿದ್ದು, ಇಲ್ಲಿ ಯಾವುದೇ ರಾಜಕೀಯ ಇಲ್ಲ, ಧಾರ್ಮಿಕ ಹಿತಾಸಕ್ತಿ ಮಾತ್ರಾ ಎಂದು ಧರಣಿಯಲ್ಲಿ  ಭಾಗವಹಿಸಿದ ಪ್ರಶಾಂತ್‌ ಭಟ್‌ ಮಾಣಿಲ ಹೇಳಿದ್ದಾರೆ.

Advertisement

ಪ್ರಶಾಂತ್‌ ಭಟ್‌ ಮಾಣಿಲ ಧರಣಿ ಬಗ್ಗೆ ಹೀಗೆ ಹೇಳುತ್ತಾರೆ…..

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |

ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್‌…

41 mins ago

ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !

ಮಲೆನಾಡಿನ ಸೊಗಬು ಕಣ್ಮರೆಯಾಗುತ್ತಿರುವುದು ಏಕೆ? ಈ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.

4 hours ago

Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |

ಮೇ 9ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಮಳೆಯಾಗುವ ಲಕ್ಷಣಗಳಿವೆ.ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆ…

5 hours ago

ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |

ಆಹಾರ ಬದಲಾವಣೆಯ ಕಾರಣದಿಂದ ವಾತಾವರಣದ ತಾಪಮಾನ ನಿಯಂತ್ರಣ ಸಾಧ್ಯ..ಹೀಗೆಂದು ಹೇಳಿದಾಗ, ಎಲ್ಲರೂ ಅಚ್ಚರಿ…

9 hours ago

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

1 day ago