ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ವೇದಿಕೆ ಸಭೆ | ಕ್ಷೇತ್ರದ ಮೂಲ ಸೌಕರ್ಯ , ಪೂಜಾ ವಿಧಿಗಳ ಬಗ್ಗೆ ಗಮನಕ್ಕೆ ಒತ್ತಾಯ |

Advertisement

ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕ್ಷೇತ್ರದ ಭಕ್ತರ ಹಿತರಕ್ಷಣಾ ವೇದಿಕೆಯ ಸಭೆಯ  ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಆಡಳಿತ ಸಮಿತಿಯ ಸ್ವ ಹಿತಾಸಕ್ತಿ ಬದಲಾಗಿ ಕ್ಷೇತ್ರದ ಮೂಲ ಸೌಕಯ೯ದ ಅಭಿವೃಧ್ಧಿ,ಧಾಮಿ೯ಕ ವಿಚಾರಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.

Advertisement

ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ವೇದಿಕೆಯು ದೇವಸ್ಥಾನದ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಉದ್ದೇಶ ಇರಿಸಿಕೊಂಡು ಸಭೆ ನಡೆಸಿದೆ. ಸಭೆಯಲ್ಲಿ ಕ್ಷೇತ್ರದ ಆಡಳಿತ ದೇವಸ್ಥಾನದ ಅಭಿವೃದ್ಧಿ ಹಾಗೂ ಪೂಜಾ ವಿಧಿವಿಧಾನಗಳ ಬಗ್ಗೆಯಾಗಲೀ ಆಗಬೇಕಾದ ಮೂಲ ಸೌಕಯ೯ಗಳ ಬಗ್ಗೆ ಯಾವುದೇ ಗಮನ ಕೊಡದ ಆಡಳಿತವು ಕೇವಲ ಸ್ವಹಿತಾಸಕ್ತಿಯ ವಿಚಾರದಲ್ಲಿ ತೊಡಗಿಸಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ದಿನೇ ದಿನೇ ಮಾಧ್ಯಮಗಳಲ್ಲಿ ಕ್ಷೇತ್ರದ ಆಡಳಿತ ವೈಫಲ್ಯತೆ, ಮೂಲ ಸೌಕಯ೯ದ ಕೊರತೆ,ಆಡಳಿತದೊಳಗಿನ ವೈಯಕ್ತಿಕ ಕಚ್ಚಾಟಗಳೇ ವ್ಯಾಪಕವಾಗಿ ಪ್ರಚಾರವಾಗುತ್ತಿದ್ದು ಕ್ಷೇತ್ರದ ಹೆಸರಿಗೆ ಕಳಂಕ ತರುವ ಕಾಯ೯ವಾಗುತ್ತಿದೆ. ಶ್ರೀ ದೇವಳದಲ್ಲಿ ಆಗಬೇಕಾದ ಮೂಲಸೌಕಯ೯, ವ್ಯವಸ್ಥೆಯ ಬಗ್ಗೆ ಆಡಳಿತದ ಬೇಜಾವಾಬ್ದಾರಿ ಮಾಡುತ್ತಿದೆ ಎಂದು ಸಭೆಯಲ್ಲಿ  ವಿಷಯ ಪ್ರಸ್ತಾಪವಾಯಿತು.

Advertisement
Advertisement
Advertisement

ಈ ಬಗ್ಗೆ ಭಕ್ತರ ಹಿತರಕ್ಷಣಾ ವೇದಿಕೆಯು ಜಿಲ್ಲಾಧಿಕಾರಿ ಹಾಗೂ ಧಾಮಿ೯ಕ ದತ್ತಿ ಆಯುಕ್ತರನ್ನು ಭೇಟಿ ಮಾಡಿ ಈ ವಿಚಾರಗಳನ್ನು ಇಲಾಖೆಯ ಗಮನಕ್ಕೆ ತಂದು ಆಗಬೇಕಾದ ಮೂಲ ಸೌಕಯ೯ ,ಅಭಿವೃಧ್ಧಿ,ಧಾಮಿ೯ಕ ವಿಚಾರಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಹೇಳಿದರು.

ಕ್ಷೇತ್ರದ ಮೂಲಗಣಪತಿ, ಕ್ಷೇತ್ರದಲ್ಲಿ ಅಜೀ೯ವಾಸ್ಥೆಯಲ್ಲಿರುವ ಶೃಂಗೇರಿ ಮಠದ ಪುನರ್ ನಿಮಾ೯ಣ, ದೇವಾಲಯದ ಹಾಗೂ ಶ್ರೀ ದೇವರ ಆಸ್ತಿಯ ರಕ್ಷಣೆ, ಪರಿವಾರ ದೇವರ ಹೆಸರಿನಲ್ಲಿರುವ ಎಲ್ಲಾ ಆಸ್ತಿಗಳ ರಕ್ಷಣೆ, ಮೂಲ ಸೇವೆ ಆಶ್ಲೇಷಾ ಬಲಿಗೆ ಸೂಕ್ತ ವ್ಯವಸ್ಥೆ, ಸಪ೯ಸಂಸ್ಕಾರ ಪೂಜಾ ವಿಚಾರದಲ್ಲಿ ಸೂಕ್ತ ಸುಧಾರಣೆಗಳು, ದೇವಳದ ಪೂಜಾ ಪರಿಕರಗಳಾದ ತೆಂಗಿನಕಾಯಿ, ತುಪ್ಪ ಮೊದಲಾದವುಗಳಲ್ಲಿ ನಡೆಯುತ್ತಿರುವ ಅವ್ಯವಹಾರಗಳ  ಶಂಕೆಗೆ ತಡೆ, ಅನಧಿಕೃತವಾಗಿ ದೇವಳಕ್ಕೆ, ದೇವಳದ ಸಹಸಂಸ್ಥೆಗಳಿಗೆ ನೇಮಕ ಮಾಡಿರುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ  ಒತ್ತಾಯ ನಡೆಯಿತು. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಧಾಮಿ೯ಕ ದತ್ತಿ ಆಯುಕ್ತರನ್ನು ಭೇಟಿಮಾಡಿ ಒತ್ತಾಯಿಸುವ ಬಗ್ಗೆ ನಿಣ೯ಯ ಕೈಗೊಳ್ಳಲಾಯಿತು.

Advertisement
Advertisement

ಸಭೆಯಲ್ಲಿ ಹಿತರಕ್ಷಣಾ ವೇದಿಕೆ ಕಾಯ೯ದಶಿ೯ ಶ್ರೀನಾಥ್, ಸದಸ್ಯರಾದ ಪ್ರಶಾಂತ್ ಭಟ್ ಮಾಣಿಲ, ಮೋನಪ್ಪ ಮಾನಾಡು, ರವಿಂದ್ರಕುಮಾರ್ ರುದ್ರಪಾದ, ಶಿವರಾಮ ರೈ, ವೆಂಕಟೇಶ್, ಕರುಣಾಕರ ಬಿಳಿಮಲೆ, ಗುರುಪ್ರಸಾದ್ ಪಂಜ ಮೊದಲಾದವರು  ಉಪಸ್ಥಿತರಿದ್ದರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ವೇದಿಕೆ ಸಭೆ | ಕ್ಷೇತ್ರದ ಮೂಲ ಸೌಕರ್ಯ , ಪೂಜಾ ವಿಧಿಗಳ ಬಗ್ಗೆ ಗಮನಕ್ಕೆ ಒತ್ತಾಯ |"

Leave a comment

Your email address will not be published.


*