ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ಈ ಕ್ಷೇತ್ರದಲ್ಲಿ ಹಲವು ಸೇವೆಗಳು, ನಿರ್ವಹಣೆ ಟೆಂಡರ್ ಮೂಲಕ ನಡೆಯುತ್ತದೆ. ಟೆಂಡರ್ ಆಹ್ವಾನಿಸಿ ಆ ಮೂಲಕವೇ ನಿರ್ವಹಣೆಗೆ ನೀಡಲಾಗುತ್ತದೆ. ಇದೀಗ ಕುಕ್ಕೆ ಸುಬ್ರಹ್ಮಣ್ಯದ ಶೌಚಾಲಯ ನಿರ್ವಹಣೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಎರಡು ಬಾರಿ ಟೆಂಡರ್ ಆಹ್ವಾನವಾಗಿ ಕೊನೆ ಕ್ಷಣದಲ್ಲಿ ರದ್ದಾಗಿ, ಇದೀಗ ಮೂರನೇ ಬಾರಿಯೂ ರದ್ದಾಗಿದೆ. ಈ ಟೆಂಡರ್ ಪ್ರಕ್ರಿಯೆಗೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶೌಚಾಲಯ ಚರ್ಚೆ…!
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶೌಚಾಲಯ ನಿರ್ವಹಣೆಯನ್ನು ಟೆಂಡರ್ ಮೂಲಕ ನೀಡಲಾಗುತ್ತದೆ. ಕಳೆದ ಕೆಲವು ಸಮಯಗಳಿಂದ ಒಬ್ಬರೇ ವ್ಯಕ್ತಿ ನಿರ್ವಹಣೆ ಮಾಡುತ್ತಿದ್ದರು. ಆದರೆ ಈಗ ಟೆಂಡರ್ ಪ್ರಕ್ರಿಯೆ ಬಗ್ಗೆ ಮಾಹಿತಿ ತಿಳಿಯುತ್ತಲೇ ಹಲವು ಮಂದಿ ಆಗಮಿಸಲು ತೊಡಗಿದರು. ಹೀಗಾಗಿ ಇದೀಗ ಚರ್ಚೆ, ಪೈಪೋಟಿ ಆರಂಭವಾಗಿದೆ.
ಕುಕ್ಕೆ ಸುಬ್ರಹ್ಮಣ್ಯದ ಸ್ನಾನಗೃಹ ಮತ್ತು ಶೌಚಾಲಯ ನಿರ್ವಹಣೆಗೆ ಮೊದಲ ಬಾರಿಗೆ ಟೆಂಡರ್ ಆಹ್ವಾನಿಸಿ ದೇವಳದ ನೋಟೀಸ್ ಬೋರ್ಡಿನಲ್ಲಿ ಹಾಕಲಾಗಿತ್ತು, ಇದನ್ನು ಗಮನಿಸಿ ಕೆಲವರು ಟೆಂಡರ್ ಸಲ್ಲಿಸಿದರು. ಅದು ರದ್ದಾಯಿತು. ಎರಡನೇ ಬಾರಿಗೆ ಟೆಂಡರ್ ಆಹ್ವಾನಿಸಿದಾಗ ಯಾವ ಮಾಹಿತಿಯೂ ಇರಲಿಲ್ಲ, ಆದರೆ ಕಚೇರಿಯಿಂದ ಮಾಹಿತಿ ಪಡೆದು ಟೆಂಡರ್ ದಾರರು ಅರ್ಜಿ ಹಾಕಿದರು. ಅದೂ ರದ್ದಾಯಿತು. ಇದೀಗ ಮೂರನೇ ಬಾರಿಗೆ ಆಹ್ವಾನಿಸಿದ ಟೆಂಡರ್ ಫೆ.24 ರಂದು ತೆರೆಯಬೇಕಿತ್ತು, ಈ ನಡುವೆಯೇ ನ್ಯಾಯಾಲಯದಿಂದ ಈ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆಯನ್ನು ತರಲಾಗಿದೆ.
ಒಟ್ಟು ಎಂಟು ಶೌಚಾಲಯಗಳಲ್ಲಿ ಈಗ 6 ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿತ್ತು, ಈಗಾಗಲೇ ಎರಡು ಶೌಚಾಲಯ ನಿರ್ವಹಣೆಗೆ ಟೆಂಡರ್ ನೀಡಲಾಗಿದೆ. ಶೌಚಾಲಯ ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆ ನಡೆಸಬೇಕು. ಆದರೆ ಇಲ್ಲಿ ಟೆಂಡರ್‌ದಾರರು ಇರುವುದೇ ಸಮಸ್ಯೆ ಎನ್ನುವುದು ಟೆಂಡರ್ ಹಾಕಿದವರ ಆರೋಪ. ಆರು ಶೌಚಾಲಯಗಳ ನಿರ್ವಹಣೆಗೆ ತಿಂಗಳಿಗೆ 13000 ನೀಡುವ ಪ್ರಯತ್ನ ದೇವಸ್ಥಾನದ ಕಡೆಯಿಂದ ನಡೆಯುತ್ತಿದೆ ಎನ್ನುವ ಆರೋಪ ಟೆಂಡರ್ ದಾರರದು. ಒಂದು ಶೌಚಾಲಯದ ನಿರ್ವಹಣೆಗೆ ತಿಂಗಳಿಗೆ 10,000 ರೂಪಾಯಿಯಂತೆ ದೇವಸ್ಥಾನಕ್ಕೆ ನೀಡಲು ಬದ್ದರಾಗಿದ್ದಾಗಲೂ ಏಕೆ ಟೆಂಡರ್ ಪ್ರಕ್ರಿಯೆ ನಡೆಸುತ್ತಿಲ್ಲ ಎಂದು ಟೆಂಡರ್‌ದಾರರು ಹೇಳಿದ್ದಾರೆ.
ಇದೀಗ ಶೌಚಾಲಯ ನಿರ್ವಹಣೆಯ ಸಂಗತಿ ನ್ಯಾಯಾಲಯದ ಮೆಟ್ಟಿಲೇರಿದೆ. ಟೆಂಡರ್ ಅರ್ಜಿ ಹಾಕಿದವರೂ ಹೋರಾಟದ ಹಾದಿಯಲ್ಲಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಒಬ್ಬರಿಗೇ ಹೇಗೆ ಟೆಂಡರ್ ಸಿಗುತ್ತದೆ, ಇದರ ಹಿಂದೆ ಕಾಣದ ಕೈ ಕೆಲಸ ಮಾಡುತ್ತಿದೆ ಎಂದು ಟೆಂಡರ್‌ದಾರ ಬೇಲೂರಿನ ಮನು ಹೇಳುತ್ತಾರೆ. ಈ ಬಗ್ಗೆ ಟೆಂಡರ್ ದಾರರೆಲ್ಲರೂ ಸೇರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ ಹಾಗೂ ಮುಂದಿನ ಕ್ರಮದ ಕಡೆಗೆ ಹೆಜ್ಜೆ ಇರಿಸುತ್ತೇವೆ ಎಂದು ಹೇಳುತ್ತಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…