ದೇಶದ ಅತ್ಯಂತ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ(Kukke subrahmanya) ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ ಸೇವಾ ದರವನ್ನು ಹೆಚ್ಚಳ ಮಾಡಲಾಗಿದೆ.ಪರಿಷ್ಕೃತ ದರದಂತೆ ಈ ಹಿಂದಿನ ದರಕ್ಕಿಂತ ದರವನ್ನು ಭಾರೀ ಹೆಚ್ಚಳ ಮಾಡಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾಗಿರುವ ಸರ್ಪ ಸಂಸ್ಕಾರ (Sarpa samskara) ಸೇವಾ ದರವನ್ನು ಪರಿಷ್ಕರಿಸಲಾಗಿದೆ. ಈ ಮೊದಲು 3,200 ರೂಪಾಯಿ ಇದ್ದ ಸರ್ಪ ಸಂಸ್ಕಾರ ಸೇವೆಯ ದರವನ್ನು 4,200ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಸರ್ಪ ಸಂಸ್ಕಾರ ದರದಲ್ಲಿ ಒಂದು ಸಾವಿರ ಹೆಚ್ಚಿಸಲಾಗಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ದೇವಳದಿಂದ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಲಾಗಿದೆ.
ಈ ಹಿಂದಿನ ಸೇವಾ ದರದಲ್ಲಿಯೇ ಹಲವು ದೇವಸ್ಥಾನದ ಹೊರತಾಗಿಯೂ ಹಲವು ಕಡೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ನಡೆಯುತ್ತಿತ್ತು. ನಾಗ ದೋಷ ನಿವಾರಣೆಗೆ ದೇಶದ ಹಲವಾರು ಮಂದಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸುತ್ತಾರೆ. ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ ನೀಡಿ ಸರ್ಪಸಂಸ್ಕಾರ ಸೇವೆ ಮಾಡಿಸಿದ ಬಳಿಕ ದೇಶದಾದ್ಯಂತ ಕುಕ್ಕೆ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಸೇವೆ ಮತ್ತಷ್ಟು ವ್ಯಾಪಕವಾಗಿ ಪ್ರಚಾರವಾಗಿತ್ತು.
ಸರ್ಪ ಹತ್ಯೆ ದೋಷ ಇದ್ದವರು ಮಾತ್ರವೇ ಈ ಹಿಂದೆ ಈ ಸೇವೆ ಮಾಡುತ್ತಿದ್ದರೂ ಈಚೆಗೆ ಎಲ್ಲಾ ಭಕ್ತರೂ ದೋಷ ನಿವಾರಣೆಗಾಗಿ ಸರ್ಪಸಂಸ್ಕಾರ ನಡೆಸುತ್ತಿದ್ದಾರೆ. ಆಶ್ಲೇಷ ಬಲಿ ಪೂಜೆಯು ಸುಮಾರು 10 ವರ್ಷಗಳ ಹಿಂದೆ ಸರ್ಪದೋಷ ನಿವಾರಣೆಗೆ ನಡೆಸುತ್ತಿದ್ದ ಸೇವೆಯಾಗಿತ್ತು. ಇದೀಗ ಸಾರ್ವತ್ರಿಕವಾಗಿ ಸರ್ಪಸಂಸ್ಕಾರ ನಡೆಸುವುದರಿಂದ ಕುಕ್ಕೆ ಸುಬ್ರಹ್ಮಣ್ಯದ ಹಲವು ಕಡೆಗಳಲ್ಲಿ ಖಾಸಗಿಯಾಗಿಯೂ ಸೇವೆಗಳು ನಡೆಯುತ್ತಿವೆ. ಈಗ ಸೇವಾ ದರ ಹೆಚ್ಚಿರುವುದರಿಂದ ಖಾಸಗಿಯಾಗಿ ನಡೆಯುವ ಸೇವೆಗಳಿಗೆ ಹೆಚ್ಚಿನ ಮಹತ್ವ ನೀಡಿದಂತಾಗಿದೆ ಎಂದು ಭಕ್ತರು ಅಭಿಪ್ರಾಯ ಪಟ್ಟಿದ್ದಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…