ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಕುಕ್ಕೆ ಲಿಂಗ ದೇವರು, ಶ್ರೀ ಕಾಲಭೈರವ ದೇವರು, ಶ್ರೀ ಚಂದ್ರಮೌಳೀಶ್ವರ ದೇವರುಗಳಿಗೆ ನಿತ್ಯ ಮೂರು ಹೊತ್ತು ಪೂಜೆ ಮತ್ತು ನೈವೇದ್ಯ ನಡೆಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ವತಿಯಿಂದ ಮುಜರಾಯಿ ಇಲಾಖೆಗೆ, ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಭಕ್ತಾದಿ ಟಿ ಎಸ್ ಶ್ರೀನಾಥ್ ಎಂಬವರು ದೂರು ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕವಾಗಿ 95 ಕೋಟಿಗಿಂತಲೂ ಅಧಿಕ ಆದಾಯ ಬರುತ್ತಿದೆ. ಆದರೆ ಕುಕ್ಕೆ ದೇವಸ್ಥಾನದ ಒಳಾಂಗಣದಲ್ಲಿರುವ ಪರಿವಾರ ದೇವರುಗಳಾದ ಶ್ರೀ ಕುಕ್ಕೆ ಲಿಂಗ ದೇವರು, ಶ್ರೀ ಕಾಲಭೈರವ ದೇವರು ಹಾಗೂ ಹೊರಾಂಗಣದಲ್ಲಿರುವ ಶ್ರೀ ಚಂದ್ರಮೌಳೀಶ್ವರ ದೇವರುಗಳಿಗೆ ಸದ್ಯ ಬೆಳಗಿನ ಪೂಜೆ ಮಾತ್ರಾ ನಡೆಯುತ್ತಿದೆ, ಇದು ಸರಿಯಲ್ಲ, ಮೂರು ಹೊತ್ತಿನ ಪೂಜೆ ನಡೆಯಬೇಕು ಎಂದು ಟಿ ಎಸ್ ಶ್ರೀನಾಥ್ ಒತ್ತಾಯಿಸಿದ್ದಾರೆ. ಎಲ್ಲಾ ಪರಿವಾರ ದೇವರುಗಳಿಗೂ ಮೂರು ಹೊತ್ತು ಪೂಜೆ ನಡೆಯಬೇಕು ಎಂಬುದು ಭಕ್ತರ ಆಶಯವಾಗಿದ್ದು ಒಂದು ಹೊತ್ತಿನ ಪೂಜೆ ಮಾತ್ರವೇ ಮಾಡಿ ಭಕ್ತರ ವಿಶ್ವಾಸ, ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ದಿಟ್ಟಂನಲ್ಲಿ ಕೂಡಾ ಮೂರು ಹೊತ್ತಿನ ಪೂಜೆ ನಡೆಸಬೇಕು ಎಂದು ಉಲ್ಲೇಖಿಸಲಾಗಿದೆ.ಆದರೆ ಇಲ್ಲಿನ ಅರ್ಚಕರು ಇದರ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮೇ 6ರಿಂದ ರಾಜ್ಯದ ವಿವಿದಡೆ ಮಳೆಯಾಗುವ ಲಕ್ಷಣಗಳಿವೆ.
ಪಹಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠವು…
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಮಂಡ್ಯ ಜಿಲ್ಲೆಯ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ ಸುತ್ತಮುತ್ತ ಭಾಗಗಳಲ್ಲಿ ಒಂದೆರಡು ಕಡೆ ಹಾಗೂ…
ಉದ್ಯೋಗದ ಪರೀಕ್ಷೆಗಳಿಗೂ ಧಾರ್ಮಿಕ ಸಂಕೇತಗಳಿಗೂ ಯಾಕೆ ಹೊಂದಿ ಬರುವುದಿಲ್ಲ? ಇದೊಂದು ಮಿಲಿಯನ್ ಡಾಲರ್…