Advertisement
ಸುದ್ದಿಗಳು

ಪಿತೃಪಕ್ಷ ಮತ್ತು ಶ್ರಾದ್ಧವಿಧಿ | “ಶಾಸ್ತ್ರ ಮತ್ತು ಸಂದೇಹ ನಿವಾರಣೆ” ವಿಶೇಷ ಸಂವಾದದಿಂದ ಮಹತ್ವಪೂರ್ಣ ಮಾರ್ಗದರ್ಶನ ! |

Share

ಹಿಂದೂ ಧರ್ಮದಲ್ಲಿ ಈಶ್ವರಪ್ರಾಪ್ತಿಗಾಗಿ ‘ದೇವಋಣ’, ಋಷಿಋಣ’, ‘ಪಿತೃಋಣ’ ಮತ್ತು ‘ಸಮಾಜ ಋಣ’ ಹೀಗೆ 4 ಪ್ರಕಾರಗಳ ಋಣಗಳನ್ನು ತೀರಿಸಲು ಹೇಳಲಾಗಿದೆ. ಇದರಲ್ಲಿ ‘ಪಿತೃಋಣ’ ತೀರಿಸಲು ಪೂರ್ವಜರಿಗೆ ಮುಕ್ತಿ ದೊರಕಿಸಿಕೊಡಲು ಪ್ರಯತ್ನಿಸುವುದು ಅಗತ್ಯವಿರುತ್ತದೆ. ‘ಶ್ರಾದ್ಧ’ ಮಾಡುವುದು ಇದು ಪೂರ್ವಜರ ಮುಕ್ತಿಗಾಗಿ ಮಹತ್ವದ್ದಾಗಿದೆ. ಯಾರಿಗೆ ಸಾಧ್ಯವಿದೆಯೋ, ಅವರು ಪಿತೃಪಕ್ಷದಲ್ಲಿ ಪುರೋಹಿತರನ್ನು ಕರೆದು ಶ್ರಾದ್ಧವಿಧಿಯನ್ನು ಮಾಡಬೇಕು; ಆದರೆ ಎಲ್ಲಿ ಕೊರೊನಾದಿಂದ ಪುರೋಹಿತರ ಹಾಗೂ ಶ್ರಾದ್ಧದ ವಸ್ತುಗಳ ಕೊರತೆಯಿಂದ ಶ್ರಾದ್ಧ ಮಾಡಲು ಸಾಧ್ಯವಿಲ್ಲವೋ ಅಲ್ಲಿ ಆಪದ್ಧರ್ಮ ಎಂದು ಸಂಕಲ್ಪಪೂರ್ವಕವಾಗಿ ಆಮಶ್ರಾದ್ಧ, ಹಿರಣ್ಯಶ್ರಾದ್ಧ ಅಥವಾ ಗೋಗ್ರಾಸವನ್ನು ಅರ್ಪಿಸಬೇಕು.

ಅದೇ ರೀತಿ ಪೂರ್ವಜರಿಗೆ ಮುಂದಿನ ಗತಿ ಸಿಗಲು ಹಾಗೂ ಅತೃಪ್ತ ಪೂರ್ವಜರಿಂದ ತೊಂದರೆಯಾಗದಿರಲು, ನಿಯಮಿತವಾಗಿ ಸಾಧನೆ ಮಾಡುವುದೂ ಅಗತ್ಯವಿದೆ. ಅದಕ್ಕಾಗಿ ಶ್ರಾದ್ಧ ವಿಧಿಯೊಂದಿಗೆ ಪಿತೃಪಕ್ಷದಲ್ಲಿ ಹೆಚ್ಚೆಚ್ಚು ಸಮಯ, ಅದೇ ರೀತಿ ಇತರ ಸಮಯದಲ್ಲಿಯೂ ಪ್ರತಿದಿನ ಕಡಿಮೆ ಪಕ್ಷ 1 ರಿಂದ 2 ಗಂಟೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಎಲ್ಲರೂ ಮಾಡಬೇಕು, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ಗಣೇಶೋತ್ಸವದ ನಂತರ ಆರಂಭವಾಗುವ ಪಿತೃಪಕ್ಷದ ನಿಮಿತ್ತ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಪಿತೃಪಕ್ಷ ಮತ್ತು ಶ್ರಾದ್ಧವಿಧಿ : ಶಾಸ್ತ್ರ ಮತ್ತು ಸಂದೇಹ ನಿವಾರಣೆ’ ಈ ವಿಷಯದ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.

ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ‘ಹಿಂದೂಗಳಲ್ಲಿ ಧರ್ಮಶಿಕ್ಷಣದ ಅಭಾವ, ಪಾಶ್ಚಾತ್ಯರ ಅಂಧಾನುಕರಣೆ ಹಾಗೂ ಹಿಂದೂ ಧರ್ಮವನ್ನು ಕೀಳಾಗಿ ಪರಿಗಣಿಸುವ ವೃತ್ತಿ ಇವುಗಳಿಂದಾಗಿ ಹಲವಾರು ಬಾರಿ ಶ್ರಾದ್ಧವಿಧಿಯನ್ನು ನಿರ್ಲಕ್ಷಿಸಲಾಗುತ್ತದೆ; ಆದರೆ ಇಂದೂ ಕೂಡ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಸಾವಿರಾರು ಜನರು ಭಾರತದ ತೀರ್ಥಕ್ಷೇತ್ರಗಳಿಗೆ ಬಂದು ಪೂರ್ವಜರಿಗೆ ಮುಂದಿನ ಗತಿ ಸಿಗಬೇಕು, ಎಂದು ಶ್ರದ್ಧೆಯಿಂದ ಶ್ರಾದ್ಧವಿಧಿ ಮಾಡುತ್ತಾರೆ. ‘ಮನು’ ಇವರು ಮೊದಲ ಬಾರಿ ಶ್ರಾದ್ಧವಿಧಿಯನ್ನು ಮಾಡಿದ್ದಾರೆ. ‘ಭಗೀರಥ ರಾಜ’ನು ಪೂರ್ವಜರ ಮುಕ್ತಿಗಾಗಿ ಮಾಡಿದ ಕಠೋರ ತಪಸ್ಸು, ಅದೇ ರೀತಿ ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರ ಇವರ ಕಾಲದಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿಯೂ ಶ್ರಾದ್ಧವಿಧಿ ಮಾಡಿರುವ ಉದಾಹರಣೆಗಳು ಇವೆ. ಆದ್ದರಿಂದ ತಥಾಕಥಿತ ಪ್ರಗತಿಪರರು ಶ್ರಾದ್ಧವಿಧಿಯ ಬಗ್ಗೆ ಮಾಡುತ್ತಿರುವ ಅಪಪ್ರಚಾರಕ್ಕೆ ಬಲಿಯಾಗದೇ ಕೊರೊನಾದ ಸೋಂಕಿನ ಕಾಲದಲ್ಲಿಯೂ ತಮ್ಮ ಕ್ಷಮತೆಗನುಸಾರ ಪಿತೃಋಣ ತೀರಿಸಲು ಶ್ರದ್ಧೆಯಿಂದ ‘ಶ್ರಾದ್ಧವಿಧಿ’ ಮಾಡಿ, ಎಂದು ಪೂ. ರಮಾನಂದ ಗೌಡ ಇವರು ಹೇಳಿದರು.

ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಭಾವಪೂರ್ಣವಾಗಿ ಮಾಡಿದರೆ ಯಶಸ್ಸು, ಧನ, ಕೀರ್ತಿ ಲಭಿಸುತ್ತದೆ. ಪೂರ್ವಜರಿಗೆ ಮರ್ತ್ಯ ಲೋಕದಿಂದ ಮುಂದೆ ಹೋಗಲು ಶ್ರಾದ್ಧವಿಧಿಯಿಂದ ಶಕ್ತಿ ಸಿಗುತ್ತದೆ. ಮೃತ್ಯುವಿನ ನಂತರವೂ ಸದ್ಗತಿಗಾಗಿ ಶ್ರಾದ್ಧವಿಧಿ ಹೇಳುವಂತಹ ಏಕೈಕ ಧರ್ಮವೆಂದರ ಹಿಂದೂ ಧರ್ಮ. ಸದ್ಯ ಸಮಾಜದಲ್ಲಿ ಧರ್ಮಶಿಕ್ಷಣದ ಅಭಾವದಿಂದ ‘ಶ್ರಾದ್ಧ ಮಾಡುವ ಬದಲು ಸಾಮಾಜಿಕ ಸಂಸ್ಥೆಗಳಿಗೆ ಅಥವಾ ಅನಾಥಾಲಯಗಳಿಗೆ ದೇಣಿಗೆ ನೀಡಿ’, ಎಂಬ ಅಯೋಗ್ಯ ಪರಿಕಲ್ಪನೆಯನ್ನು ಪ್ರಸಾರ ಮಾಡಲಾಗುತ್ತದೆ; ಆದರೆ ಹೀಗೆ ಮಾಡುವುದು ಅಯೋಗ್ಯವಾಗಿದೆ. ಧಾರ್ಮಿಕ ಕೃತಿಗಳು ಧರ್ಮಶಾಸ್ತ್ರಾಕ್ಕನುಸಾರ ಆಗುವುದು ಅಗತ್ಯವಿರುತ್ತದೆ. ಅದಕ್ಕನುಸಾರ ಕೃತಿ ಮಾಡಿದರೆ ಮಾತ್ರ ಪಿತೃಋಣ ತೀರುತ್ತದೆ, ಎಂದೂ ಪೂ. ರಮಾನಂದ ಗೌಡ ಇವರು ಹೇಳಿದರು.

# ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

4 hours ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

5 hours ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

5 hours ago

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

12 hours ago

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

17 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

1 day ago