ಕುಕ್ಕೆ ಸುಬ್ರಹ್ಮಣ್ಯ | ನೀರುಬಂಡಿ ಉತ್ಸವದಲ್ಲಿ ತುಂಟಾಟವಾಡಿದ ಆನೆ…! | ನೀರಿಗೆ ಬಿದ್ದ ಸೆಕ್ಯುರಿಟಿ….! | ಮಕ್ಕಳ ಆಟಕ್ಕೂ ಬೇಕಿದೆ ಎಚ್ಚರಿಕೆ… |

December 28, 2023
9:27 AM
ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರಮುಖ ಉತ್ಸವಗಳ ವೇಳೆ ಸಾಕಷ್ಟು ಮುಂಜಾಗ್ರತಾ ಕ್ರಮಗಳ ಅಗತ್ಯ ಇದೆ. ನೀರು ತುಂಬಿರುವ ಕುಕ್ಕೆ ಸುಬ್ರಹ್ಮಣ್ಯದ ಹೊರಾಂಗಣದಲ್ಲಿ ನಡೆದ ಉತ್ಸವದಲ್ಲಿ ಆನೆ ಮಹಿಳಾ ಸೆಕ್ಯರಿಟಿ ಒಬ್ಬರನ್ನು ಎಳೆದು ಹಾಕಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮಗಳು ಹೆಚ್ಚಾಗಿ ಬೇಕಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಟಿ ಉತ್ಸವದ ಬಳಿಕ ಕೊಪ್ಪರಿಗೆ ಇಳಿದ ನಂತರ ರಾತ್ರಿ ನೀರು ಬಂಡಿ ಉತ್ಸವ ನಡೆಯುತ್ತದೆ. ನೀರಿನಲ್ಲಿ ನಡೆಯುವ ಈ ಉತ್ಸವದ ವೇಳೆ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯದ ಆನೆ “ತುಂಟಾಟ”ವಾಡಿದೆ. ಮಹಿಳಾ ಸೆಕ್ಯುರಿಟಿ ಒಬ್ಬರನ್ನು ಸೊಂಡಿಲಿನಿಂದ ಎಳೆದು ನೀರಿಗೆ ಹಾಕಿದೆ..!. ವಿಪರೀತ ಜನ ಸೇರುವ “ಮಕ್ಕಳಾಟ” ಉತ್ಸವ ಆಗುತ್ತಿರುವ ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯವಿದೆ.

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಉತ್ಸವದ  ಬಳಿಕ ಕೊಪ್ಪರಿಗೆ ಇಳಿದ ನಂತರ ರಾತ್ರಿ ನೀರು ಬಂಡಿ ಉತ್ಸವ ನಡೆಯುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಉತ್ಸವಕ್ಕೆ ಮಕ್ಕಳಿಂದ ತೊಡಗಿ ಅನೇಕರು ಈ ಉತ್ಸವಕ್ಕೆ ಆಗಮಿಸಿ ನೀರು ಬಂಡಿ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈಚೆಗೆ ಇದೊಂದು ಸೇವೆಯ ಜೊತೆಗೆ “ಮಕ್ಕಳಾಟ”ದ ಉತ್ಸವವೂ ಆಗುತ್ತಿದೆ. ಆನೆಯೂ ನೀರಿನಲ್ಲಿ ಕುಣಿದು ಕುಪ್ಪಳಿಸುವ ವಿಡಿಯೋ, ಫೋಟೋ ವೈರಲ್‌ ಆಗುವ ಕಾರಣದಿಂದ ಈ ಉತ್ಸವ  ನೋಡಲೆಂದೇ ಜನರು ಬರುತ್ತಾರೆ. ಬಂದವರು ಸಹಜವಾಗಿಯೇ ನೀರಿನ ಮೋಜಿಗೆ ಸೆಳೆತಗೊಂಡು ಮಕ್ಕಳೂ ಈ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆನೆಯ ಮೇಲೆ ನೀರು ಎರಚುವುದಿಂದ ತೊಡಗಿಕೊಂಡು ಬಂದವರ ಮೇಲೆಲ್ಲಾ ನೀರೇ ನೀರು. ಇದು ಉತ್ಸವ ಆದ್ದರಿಂದ ಸಂಭ್ರಮ…

ವಿಡಿಯೋ….

ಆದರೆ ಈ ಬಾರಿ ಆನೆಯು ನೀರಿನಲ್ಲಿ ಆಟವಾಡುವುದರ ಜೊತೆಗೆ ಮಹಿಳಾ ಸೆಕ್ಯುರಿಟಿ ಒಬ್ಬರನ್ನು ಎಳೆದು ಹಾಕಿದೆ..!. ಇದು ಆನೆಯ ತುಂಟಾಟವೇನೋ ಹೌದು. ಸಾವಿರಾರು ಜನರು ಈ ಉತ್ಸವದಲ್ಲಿ ಇರುತ್ತಾರೆ, ಆನೆಯ ತುಂಟಾಟವು ನೂಕುನುಗ್ಗಲಿಗೂ ಕಾರಣವಾಗಬಹುದು, ಇಂತಹ ಸಂದರ್ಭದಲ್ಲಿ ನೀರು ತುಂಬಿರುವ ಹೊರಾಂಗಣದಲ್ಲಿ ಓಡುವುದೂ ಕಷ್ಟ, ಈ ಸಮಯ ನೀರಿಗೆ ಬಿದ್ದರೂ ಅಪಾಯವೇ ಸರಿ. ಪುಣ್ಯ ಸ್ಥಳದಲ್ಲಿ ಇಂತಹ ಅವಘಡಗಳಿಗೆ ಕಾರಣವಾಗುವ ಮೊದಲು ಆಡಳಿತ ಮಂಡಳಿ ಎಚ್ಚರಿಗೆ ವಹಿಸಬೇಕಿದೆ. ಮುಂದಿನ ವರ್ಷದಿಂದ ನೀರಿನ ಆಟಕ್ಕೆ ನಿಯಂತ್ರಣ ಹೇರಬೇಕಿದೆ. ಉತ್ಸವವು ಆಟದ ಸ್ವರೂಪ ಹೋಗುವುದಕ್ಕೆ ಆಡಳಿತ ವ್ಯವಸ್ಥೆ ನಿಯಂತ್ರಣ ಹೇರಬೇಕಿದೆ.

Nirubandi Utsav held after the Champa Shashti Utsav at the Kukke Subrahmanya Temple. In this utsav   Subrahmanya’s elephant ,dragged a women security guard into the water. So caution is needed in such festivals.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ
ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group