ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಟಿ ಉತ್ಸವದ ಬಳಿಕ ಕೊಪ್ಪರಿಗೆ ಇಳಿದ ನಂತರ ರಾತ್ರಿ ನೀರು ಬಂಡಿ ಉತ್ಸವ ನಡೆಯುತ್ತದೆ. ನೀರಿನಲ್ಲಿ ನಡೆಯುವ ಈ ಉತ್ಸವದ ವೇಳೆ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯದ ಆನೆ “ತುಂಟಾಟ”ವಾಡಿದೆ. ಮಹಿಳಾ ಸೆಕ್ಯುರಿಟಿ ಒಬ್ಬರನ್ನು ಸೊಂಡಿಲಿನಿಂದ ಎಳೆದು ನೀರಿಗೆ ಹಾಕಿದೆ..!. ವಿಪರೀತ ಜನ ಸೇರುವ “ಮಕ್ಕಳಾಟ” ಉತ್ಸವ ಆಗುತ್ತಿರುವ ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯವಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಉತ್ಸವದ ಬಳಿಕ ಕೊಪ್ಪರಿಗೆ ಇಳಿದ ನಂತರ ರಾತ್ರಿ ನೀರು ಬಂಡಿ ಉತ್ಸವ ನಡೆಯುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಉತ್ಸವಕ್ಕೆ ಮಕ್ಕಳಿಂದ ತೊಡಗಿ ಅನೇಕರು ಈ ಉತ್ಸವಕ್ಕೆ ಆಗಮಿಸಿ ನೀರು ಬಂಡಿ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈಚೆಗೆ ಇದೊಂದು ಸೇವೆಯ ಜೊತೆಗೆ “ಮಕ್ಕಳಾಟ”ದ ಉತ್ಸವವೂ ಆಗುತ್ತಿದೆ. ಆನೆಯೂ ನೀರಿನಲ್ಲಿ ಕುಣಿದು ಕುಪ್ಪಳಿಸುವ ವಿಡಿಯೋ, ಫೋಟೋ ವೈರಲ್ ಆಗುವ ಕಾರಣದಿಂದ ಈ ಉತ್ಸವ ನೋಡಲೆಂದೇ ಜನರು ಬರುತ್ತಾರೆ. ಬಂದವರು ಸಹಜವಾಗಿಯೇ ನೀರಿನ ಮೋಜಿಗೆ ಸೆಳೆತಗೊಂಡು ಮಕ್ಕಳೂ ಈ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆನೆಯ ಮೇಲೆ ನೀರು ಎರಚುವುದಿಂದ ತೊಡಗಿಕೊಂಡು ಬಂದವರ ಮೇಲೆಲ್ಲಾ ನೀರೇ ನೀರು. ಇದು ಉತ್ಸವ ಆದ್ದರಿಂದ ಸಂಭ್ರಮ…
ವಿಡಿಯೋ….
ಆದರೆ ಈ ಬಾರಿ ಆನೆಯು ನೀರಿನಲ್ಲಿ ಆಟವಾಡುವುದರ ಜೊತೆಗೆ ಮಹಿಳಾ ಸೆಕ್ಯುರಿಟಿ ಒಬ್ಬರನ್ನು ಎಳೆದು ಹಾಕಿದೆ..!. ಇದು ಆನೆಯ ತುಂಟಾಟವೇನೋ ಹೌದು. ಸಾವಿರಾರು ಜನರು ಈ ಉತ್ಸವದಲ್ಲಿ ಇರುತ್ತಾರೆ, ಆನೆಯ ತುಂಟಾಟವು ನೂಕುನುಗ್ಗಲಿಗೂ ಕಾರಣವಾಗಬಹುದು, ಇಂತಹ ಸಂದರ್ಭದಲ್ಲಿ ನೀರು ತುಂಬಿರುವ ಹೊರಾಂಗಣದಲ್ಲಿ ಓಡುವುದೂ ಕಷ್ಟ, ಈ ಸಮಯ ನೀರಿಗೆ ಬಿದ್ದರೂ ಅಪಾಯವೇ ಸರಿ. ಪುಣ್ಯ ಸ್ಥಳದಲ್ಲಿ ಇಂತಹ ಅವಘಡಗಳಿಗೆ ಕಾರಣವಾಗುವ ಮೊದಲು ಆಡಳಿತ ಮಂಡಳಿ ಎಚ್ಚರಿಗೆ ವಹಿಸಬೇಕಿದೆ. ಮುಂದಿನ ವರ್ಷದಿಂದ ನೀರಿನ ಆಟಕ್ಕೆ ನಿಯಂತ್ರಣ ಹೇರಬೇಕಿದೆ. ಉತ್ಸವವು ಆಟದ ಸ್ವರೂಪ ಹೋಗುವುದಕ್ಕೆ ಆಡಳಿತ ವ್ಯವಸ್ಥೆ ನಿಯಂತ್ರಣ ಹೇರಬೇಕಿದೆ.
Nirubandi Utsav held after the Champa Shashti Utsav at the Kukke Subrahmanya Temple. In this utsav Subrahmanya’s elephant ,dragged a women security guard into the water. So caution is needed in such festivals.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…