Advertisement
ಜಿಲ್ಲೆ

’ಬಸವನಮೂಲ’’ ಬಸವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಅತಿರುದ್ರ ಮಹಾಯಾಗ | ಮೇ 6 ರಂದು ಸಂಕಲ್ಪ ಆರಂಭ |

Share

ಜಗತ್ತಿನ ಬೇರೆಲ್ಲೂ ಇಲ್ಲದ ಅತ್ಯಂತ ಅಪರೂಪದ ಮಹಾಶಿವನ ಆಲಯ. ಹಣೆಯ ಮೇಲೆ ಶಿವಲಿಂಗವನ್ನು ಹೊತ್ತ ನಂದಿಯ ರೂಪದ ವಿಗ್ರಹಕ್ಕೆ ಆರಾಧನೆ ನಡೆಯುವ ಏಕೈಕ ದೇವಸ್ಥಾನ. ಅರ್ಥಾತ್ ಬಸವನ ರೂಪದ ಮಹಾದೇವನೇ ಅಲ್ಲಿನ ಆರಾಧ್ಯ ಮೂರ್ತಿ. ಸುಮಾರು 800 ವರ್ಷಗಳ ಪ್ರಾಚೀನ ಇತಿಹಾಸವುಳ್ಳ, ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಲ್ಕುಂದ ‘’ಬಸವನಮೂಲ’’ ಎಂದೇ ಪ್ರಸಿದ್ಧಿಯಾಗಿರುವ ಬಸವೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಅತಿ ಪ್ರಿಯ ಎನ್ನಲಾದ ಸಾಮೂಹಿಕ ಅತಿರುದ್ರ ಮಹಾಯಾಗ ನಡೆಸಲಾಗುತ್ತಿದೆ.

Advertisement
Advertisement
Advertisement

ತಾರಕಾಸುರನ ವಧೆಗಾಗಿ ಸುಬ್ರಹ್ಮಣ್ಯ ಸ್ವಾಮಿ ಮಹಾದೇವನ ಕುರಿತು ತಪಸ್ಸು ಮಾಡಿದಾಗ, ಸಾಕ್ಷಾತ್ ಮಹಾದೇವನೇ ನಂದಿ ರೂಪದಲ್ಲಿ ಒಲಿದ ಸ್ಥಳ ಇದು ಎನ್ನುವುದು ಇಲ್ಲಿನ ಐತಿಹ್ಯ. ಅರಣ್ಯ ಮಧ್ಯದ ಇಂತಹ ಅದ್ಭುತ ಪ್ರದೇಶದಲ್ಲಿ ಲೋಕಕಲ್ಯಾಣ ಸಲುವಾಗಿ ವಿಶೇಷ ರೀತಿಯ ಅತಿರುದ್ರ ಯಾಗ ನಡೆಸಲು ಭಗವದ್ಬಕ್ತರು ಸೇರಿ ಸಂಕಲ್ಪಿಸಿದ್ದಾರೆ. ಲಕ್ಷಕ್ಕೂ ಹೆಚ್ಚು ಮಂದಿ ಸಂಕಲ್ಪದ ಮೂಲಕ ಅತಿರುದ್ರ ಮಹಾಯಾಗ ನಡೆಸಬೇಕೆಂದು ನಿಶ್ಚಯಿಸಿದ್ದು, ಇದಕ್ಕಾಗಿ ಸಾಮೂಹಿಕ ಸಹಭಾಗಿತ್ವಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ.

Advertisement

ಆನ್ಲೈನ್ ನೋಂದಣಿಗೆ ಅವಕಾಶ : ಅತಿರುದ್ರ ಮಹಾಯಾಗವನ್ನು ಹಣ ಇದ್ದವರು ಮಾತ್ರ ಕೈಗೊಳ್ಳಲು ಸಾಧ್ಯ. ಜನಸಾಮಾನ್ಯರಿಗೂ ಅತಿರುದ್ರ ಮಹಾಯಾಗದ ಪ್ರಸಾದ ಸಿಗಬೇಕು ಮತ್ತು ಶಿವನ ಅನುಗ್ರಹ ಲಭಿಸಬೇಕೆಂದು ಬಸವನಮೂಲ ಬಸವೇಶ್ವರ ದೇವಸ್ಥಾನದಲ್ಲಿ 2025 ರ ನವೆಂಬರ್ 17 ರಂದು ಅತಿರುದ್ರ ಮಹಾಯಾಗ ನಡೆಸಲಾಗುತ್ತಿದ್ದು, ಬಡವ, ಬಲ್ಲಿದರೆಲ್ಲರೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಅತಿರುದ್ರ ಮಹಾಯಾಗ ಮಾಡುವ ಪ್ರತಿಯೊಬ್ಬ ಭಕ್ತನ ಹೆಸರಿನಲ್ಲಿಯೂ ರುದ್ರಾಕ್ಷಿಯನ್ನು ಸಂಕಲ್ಪಿಸಿ ಭಕ್ತರ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು. ಅತಿ ಹೆಚ್ಚು ಜನರು ಸೇರಬೇಕು ಮತ್ತು ಸರ್ವರಿಗೂ ಶಿವನ ಅನುಗ್ರಹ ಲಭಿಸುವ ದೃಷ್ಟಿಯಿಂದ ಅತಿರುದ್ರ ಯಾಗ ಸೇವೆಗೆ ಕೇವಲ ರೂ. 353 ನಿಗದಿ ಪಡಿಸಲಾಗಿದ್ದು, ಆನ್ಲೈನ್ / ವಾಟ್ಸಪ್ ಮೂಲಕವೂ ನೋಂದಣಿಗೆ ಅವಕಾಶ ಇದೆ.

Advertisement

ಇದೇ ಮೇ 6ರಂದು ಸಂಕಲ್ಪ ಆರಂಭ : ಆರಂಭಿಕವಾಗಿ ಯಾಗ ನೋಂದಣಿ ನೆರವೇರಿಸುವ 14,641 ಭಕ್ತರ ಹೆಸರಲ್ಲಿ ಇದೇ ಮೇ 6ರಂದು ಬಸವನಮೂಲ ಬಸವೇಶ್ವರ ಕ್ಷೇತ್ರದಲ್ಲಿ ಯಾಗ ಸಂಕಲ್ಪ ನೆರವೇರಲಿದ್ದು, ಅಷ್ಟೂ ಮಂದಿ ಇಚ್ಛಿಸಿದಲ್ಲಿ ಕ್ಷೇತ್ರದಲ್ಲಿ ಸಾಮೂಹಿಕ ಸಂಕಲ್ಪ ಕೈಗೊಳ್ಳಲು ಅವಕಾಶ ಮಾಡಲಾಗಿದೆ. ಅತಿರುದ್ರ ಯಾಗ ನಡೆಸುವುದಕ್ಕೂ ಮುನ್ನ ಮಹಾರುದ್ರ ಯಾಗವನ್ನು ಇದೇ ಕಾರ್ತಿಕ ಮಾಸದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಅತಿರುದ್ರ ಮಹಾಯಾಗ ಅತ್ಯಂತ ಅಪರೂಪದ ಕೈಂಕರ್ಯವಾಗಿದ್ದು, ಯಾಗಕ್ಕೆ ನೋಂದಾಯಿಸಿದ ಭಕ್ತರ ಹೆಸರಲ್ಲಿ ಬೆಳಗ್ಗೆ ಎಂಟು ಗಂಟೆಗೆ ಸಂಕಲ್ಪ ನೆರವೇರಲಿದೆ. ಇದನ್ನು ಯೌಟ್ಯೂಬ್ ಲೈವ್ ಮುಖಾಂತರ ಪ್ರತಿಯೊಬ್ಬರಿಗೂ ನೋಡುವ ವ್ಯವಸ್ಥೆ ಮಾಡಲಾಗಿದೆ. ದೂರದ ಊರಿನಲ್ಲಿ ಇರುವ ಭಕ್ತರೂ ಈ ಸೇವೆ ಮಾಡಬಹುದಾಗಿದ್ದು, ಆನ್ಲೈನಲ್ಲಿ ನೋಂದಣಿ ಮಾಡಿದವರಿಗೆ ಯಾಗದ ಪ್ರಸಾದರೂಪವಾಗಿ ರುದ್ರಾಕ್ಷಿ, ರಕ್ಷೆ ಮತ್ತು ಭಸ್ಮವನ್ನು ಪೋಸ್ಟ್ ಮೂಲಕ ತಲುಪಿಸಲಾಗುವುದು. ಶಿವನ ಪ್ರೀತ್ಯರ್ಥ ಮೊದಲ ಬಾರಿಗೆ ಅತಿರುದ್ರ ಮಹಾಯಾಗ ನೆರವೇರಲಿದ್ದು, ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಸಂಪರ್ಕ : ಗಣೇಶ್‌ ದೀಕ್ಷಿತ್‌ ಭಟ್-‌ 6362148620

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

2 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

2 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

21 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

21 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

21 hours ago