ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಮಾರಧಾರಾ, ನೇತ್ರಾವತಿ, ಪಯಸ್ವಿನಿ ನದಿಗಳಲ್ಲಿ ಜೀವವೈವಿಧ್ಯ ಮಂಡಳಿ 5 ಸ್ಥಳಗಳನ್ನು ಮತ್ಸ್ಯ ತಾಣ ಎಂದು ಗುರುತಿಸಿದೆ. ಮೀನುಗಾರಿಕೆ ಇಲಾಖೆ ಸಹಕಾರದಲ್ಲಿ ಈ ಸ್ಥಳಗಳಲ್ಲಿ ಅಪರೂಪದ ಮೀನು ವೈವಿಧ್ಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.
ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಬಳಿಕ ಈ ಮಾಹಿತಿ ನೀಡಿದ್ದಾರೆ. ದ ಕ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ , 2 ಗಾಂಧೀ ಜಯಂತಿ ದಿನದಿಂದ 3 ದಿನ ಕಾಲ ಕುಮಾರಧಾರಾ ನದಿ ಸಂರಕ್ಷಣಾ ಅಭಿಯಾನದ ನೇತೃತ್ವ ವಹಿಸಿದ್ದರು.ಕರ್ನಾಟಕ ಜೀವವೈವಿಧ್ಯ ಮಂಡಳಿ, ಪಂಚಾಯತ್ ಜೀವವೈವಿಧ್ಯ ಸಮಿತಿಗಳು, ಅರಣ್ಯ ಇಲಾಖೆ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆದಿತ್ತು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನದೀಮಾಲಿನ್ಯ ಸಮಸ್ಯೆ ನಿವಾರಣೆ ಬಗ್ಗೆ ನಾಗರೀಕರು, ಪಂಚಾಯತ್, ದೇವಾಲಯ ಆಡಳಿತದ ಜೊತೆ ಸಮಾಲೋಚನಾ ಸಭೆ ನಡೆಸುವುದರೊಂದಿಗೆ ನದಿ ತೀರಕ್ಕೆ ಹಾಗೂ ಭೇಟಿ, ವೃಕ್ಷಾರೋಪಣಾ ಕಾರ್ಯಕ್ರಮಗಳು ನಡೆದವು. ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಮುಂದಾಗಿ ಮಾಲಿನ್ಯ ತಡೆ ಕ್ರಮ ತ್ವರಿತವಾಗಿ ಜಾರಿ ಮಾಡಲು ಸೂಚಿಸಿದರು. ಹೋಟೆಲ್ ಅಡಿಗೆ ತ್ಯಾಜ್ಯಾದಿಂದ ಬಯೋಗ್ಯಾಸ್ ತಯಾರಿಸಿ, ತ್ಯಾಜ್ಯಾ ಸಮಸ್ಯೆ ನಿವಾರಿಸಿ ಎಂದು ಸುಬ್ರಹ್ಮಣ್ಯದ ಹೋಟೆಲ್ ಉದ್ಯಮಿಗಳಿಗೆ ಹೇಳಿದರು.
ಕುಮಾರಧಾರ ನದಿ ತೀರ ಉರುಂಬಿಯಲ್ಲಿ ರೈತರು ಹಾಗೂ ಪರಿಸರ ಕಾರ್ಯಕರ್ತರ ಜೊತೆ ನದಿ ಪೂಜೆ ಮಾಡಿ ನದಿಗೆ ಬಾಗಿನ ಅರ್ಪಿಸಿದರು. ಉರುಂಬಿ ನದಿ ಪ್ರದೇಶವನ್ನು ಸೂಕ್ಷ್ಮ ಜೀವ ಸಂಕುಲ ತಾಣ ಎಂದು ಕಡಬ ತಾಲೂಕು ಪಂಚಾಯತ್ ಸಮಿತಿ ಸಭೆಯಲ್ಲಿ ಗುರುತಿಸಲಾಯಿತು. ಸುಳ್ಯ ತಾಲ್ಲೂಕು ಮಡಪ್ಪಾಡಿ ಗ್ರಾಮ ಪಂಚಾಯತ್ ಸಮಿತಿ ಸಭೆಯಲ್ಲಿ ತಜ್ಞರ ತಂಡ ಮಾಯಿಲ ಕೋಟೆ ಗುಡ್ಡ ಪ್ರದೇಶಕ್ಕೆ ಸಂರಕ್ಷಣಾ ಕವಚ ತೊಡಿಸಲು ನಿರ್ಧರಿಸಿತು.
ಸುಳ್ಯ ತಾಲೂಕು ಪಂಚಾಯತ್ ಸಮಿತಿ ಸಭೆಯಲ್ಲಿ ನದಿ ಕಣಿವೆಗಳಲ್ಲಿರುವ ಮಿರಿಸ್ವಿಕಾ ಸ್ವಾಂಪ್ಸ್‍ಗಳನ್ನು ಗುರುತಿಸಿ ಸಂರಕ್ಷಣೆ ಮಾಡಲು ನಿರ್ಧರಿಸಲಾಯಿತು. ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿರಿ, ಜಿಲ್ಲಾ ಅರಣ್ಯಾಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಕುಮಾರಧಾರಾ ನೇತ್ರಾವತಿ ನದೀ ಕಣಿವೆಗಳಲ್ಲಿ ಇರುವ ಡೀಮ್ಡ್ ಅರಣ್ಯಗಳ ಸಂರಕ್ಷಣಾ ಯೋಜನೆಯನ್ನು ರೂಪಿಸಿ ಜಾರಿ ಮಾಡಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷರು ಸೂಚನೆ ನೀಡಿದರು.
ನದೀ ಸಂರಕ್ಷಣಾ ಅಭಿಯಾನದಲ್ಲಿ ತಜ್ಞರಾದ ಪ್ರಸನ್ನ, ಕಾರ್ತಿಕ್, ಡಾ.ದೇವಿ ಪ್ರಸಾದ್, ಡಾ. ಶೆಣೈ, ಪ್ರೊ|| ಸ್ಮಿತಾ, ಡಾ.ರೇವತಿ ಉಪಸ್ಥಿತದ್ದರು.
ರೈತರು ಬೆಳೆ ವಿಮೆ ಮಾಡಿಸುವುದರಿಂದ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನೂ ಮುಂತಾದ ಪ್ರಕೃತಿ…
ಮಯೂರ.ಕೆ, 7ನೇ ತರಗತಿ, ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ | -…
ಜುಲೈ 9 ರಂದು ಭಾರತ್ ಬಂದ್ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ದೇಶವ್ಯಾಪಿ…
ಮಗು ಗರ್ಭದಲ್ಲಿದ್ದಾಗಲೇ ಕೆಲವು ಘಟನೆಗಳಿಗೆ ಪ್ರತಿಕ್ರಿಯಿಸುವ ಬಗ್ಗೆ ಕೆಲವು ವೈಜ್ಞಾನಿಕ ಅಧ್ಯಯನಗಳು ಹೇಳಿವೆ.…
ಶಿಕ್ಷಣ ಸಂಸ್ಥೆಗಳಲ್ಲಿ ಹಾಸ್ಟೆಲ್ ವ್ಯವಸ್ಥೆ ಸರ್ವೇ ಸಾಮಾನ್ಯ. ಹೀಗೆ ಹಾಸ್ಟೆಲ್ ಇದೆ ಅಂದ…
ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ…