ಡಿಸೆಂಬರ್‌ನಲ್ಲಿ ಇರಬೇಕಾದ ನದಿ ನೀರಿನ ಮಟ್ಟ ಸಪ್ಟಂಬರ್‌ ಮೊದಲ ವಾರದಲ್ಲೇ ತಲುಪಿದೆ…!

September 4, 2023
11:41 AM
ಗ್ರಾಮೀಣ ಭಾಗ ಅದರಲ್ಲೂ ಮಲೆನಾಡು ತಪ್ಪಲಿನ ಭಾಗದಲ್ಲೂ ನೀರಿನ ಮಟ್ಟ ಕುಸಿತವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದಂತಹ ಪ್ರದೇಶದಲ್ಲೂ ನದಿಯ ನೀರಿನ ಮಟ್ಟ ಇಳಿಕೆಯಾಗಿದೆ.

ಮಳೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಹೊಳೆ, ನದಿಯ ನೀರಿನ ಮಟ್ಟ ಈಗಲೇ ಕುಸಿತ ಆರಂಭವಾಗಿದೆ. ಹಲವಾರು ಗ್ರಾಮೀಣ ಭಾಗಗಳಲ್ಲೂ ನೀರಿನ ವರತೆ ಈಗಲೃ ಬರಿದಾಗಿದೆ. ಸಾಮಾನ್ಯವಾಗಿ ಡಿಸೆಂಬರ್‌ ಹೊತ್ತಿನಲ್ಲಿ ಇರಬೇಕಾದ ನೀರಿನ ಮಟ್ಟ ಈಗಲೇ ತಲುಪಿದೆ. ಹೀಗಾಗಿ ಇನ್ನುಳಿದ ದಿನಗಳಲ್ಲಿ ಮಳೆಯಾಗದೇ ಇದ್ದರೆ ಹೇಗೆ ಎನ್ನುವ ಆತಂಕ ಹಲವು ಕಡೆಗಳಲ್ಲಿ ಕೇಳಿಬರುತ್ತಿದೆ.

Advertisement
Advertisement

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಶಿಶಿಲಾ ನದಿಯಲ್ಲಿ ಕೂಡಾ ನೀರಿನ ಮಟ್ಟ ಇಳಿಕೆಯಾಗಿದೆ. ನೇರವಾಗಿ ಕಾಡಿನಿಂದಲೇ ಆರಂಭವಾಗುವ ಈ ನದಿಯ ಆರಂಭವೇ ಶಿಶಿಲ ದೇವಸ್ಥಾನದ ಪಕ್ಕದಲ್ಲಿದೆ. ಇಲ್ಲಿ ಕೂಡಾ ಈಗಲೇ  ನೀರಿನ ಮಟ್ಟ ಇಳಿಕೆಯಾಗಿರುವುದು ಹಾಗೂ ಡಿಸೆಂಬರ್‌ ಸಮಯಕ್ಕೆ ಇರಬೇಕಾದ ನೀರಿನ ಮಟ್ಟ ಈಗ ಇದೆ ಎಂದು ಹೇಳುತ್ತಾರೆ ಇಲ್ಲಿನ ನಿವಾಸಿಗಳು. ಇಲ್ಲಿ ದೇವರ ಮೀನಿಗಳು ಸಾಕಷ್ಟು ಇದೆ, ನೀರಿನ ಕೊರತೆಯಾದರೆ ಮೀನಿಉಗಳಿಗೂ ಸಂಕಷ್ಟವಾಗಲಿದೆ. ಹೀಗಾಗಿ ನೀರಿನ ಕೊರತೆಯಾಗದಂತೆ ಇಲ್ಲಿ ಬಹಳ ಎಚ್ಚರಿಕೆ ವಹಿಸಬೇಕಿದೆ. ಇದಕ್ಕಾಗಿ ದೇವಸ್ಥಾನ ಹಾಗೂ ಆಸುಪಾಸಿನ ಜನರಿಗೂ ನೀರಿನ ಮಟ್ಟ ಇಳಿಕೆಯಾಗಿರುವುದು  ಆತಂಕವೇ ಹೌದು. ಗ್ರಾಮೀಣ ಭಾಗದಲ್ಲಿ ಈ ರೀತಿಯಾಗಿ ನೀರಿನ ಮಟ್ಟ ಇಳಿಕೆಯಾಗುವುದು  ಆತಂಕಕ್ಕೆ ಕಾರಣ.

Advertisement

ಈಗ ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಮಧ್ಯಾಹ್ನದ ಹೊತ್ತಿಗೆ ವಾತಾವರಣದ ಉಷ್ಣತೆ ತೀವ್ರವಾಗಿ ಏರಿಕೆಯಾಗುತ್ತಿದೆ. ಸುಮಾರು 33 ಡಿಗ್ರಿಯಿಂದಲೇ ಆರಂಭವಾಗುತ್ತದೆ. ಇದು ಕೂಡಾ ಕೃಷಿಯ ಮೇಲೆ ಪರಿಣಾಮ ಬೀರುತ್ತದೆ. ಭತ್ತದ ಗದ್ದೆಗಳಿಗೆ ನೀರುಣಿಸಬೇಕಾದ ಸ್ಥಿತಿ ಹಲವು ಕಡೆ ಇದೆ. ಗ್ರಾಮೀಣ ಭಾಗಗಳಲ್ಲಿ ಈಗಲೇ ನೀರಿನ ಕೊರತೆ ಹೀಗಾದರೆ ನಗರ ಪ್ರದೇಶಗಳ ಕತೆ ಏನಾಗಬೇಡ ಎಂಬುದು ಹಲವು ಕಡೆ ಚರ್ಚೆಯಾಗುವ ಸಂಗತಿ. ಎಲ್ಲಾ ಕಡೆಯೂ ಈಗ ಮಾತು, “ಮಳೆಯ ಅವಸ್ಥೆ ಎಂತ” ಅಂತಲೇ…!.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror