ರಾಜ್ಯದ ಬಹಳಷ್ಟು ಕೆರೆಗಳು ಮುಖ್ಯವಾಗಿ ನಗರ ಕೆರೆಗಳು ಕಟ್ಟಡ ತ್ಯಾಜ್ಯಗಳಿಂದ ನಲುಗಿವೆ. ನಗರಗಳಲ್ಲಿ ಖಾಸಗಿ ಜಾಗಗಳಲ್ಲಿ ಈ ತ್ಯಾಜ್ಯದ ಸುರಿಯಲು ಅವಕಾಶ ಕೊಡದಿರುವುದರಿಂದ ಜನ ಓಡಾಟ ಕಡಿಮೆ ಇರುವ ರಸ್ತೆಗಳು, ಇಂತಹ ಕೆರೆಗಳಂತ ಸಾರ್ವಜನಿಕ ಸ್ಥಳಗಳಲ್ಲಿ ಇವುಗಳನ್ನು ಸುರಿಯುತ್ತಾರೆ. ಬಹಳಷ್ಟು ಕಡೆ Wetland ತಾಣಗಳಾದ ಕೆರೆಗಳನ್ನು Waste Land ಎಂದು ಬೇಕಾಬಿಟ್ಡಿ ಬಳಸುವ ಕೆಟ್ಟ ಚಾಳಿ ಇದೆ.
ರಸ್ತೆ ಬದಿಗಳಲ್ಲಿ ಕೇವಲ ತ್ಯಾಜ್ಯದ ಸಮಸ್ಯೆ ಎದುರಾದರೆ, ಕೆರೆಗಳಲ್ಲಿ ಇತ್ತೀಚಿನ ಅತ್ಯಂತ ಕಡಿಮೆಯಾಗಿರುವ ಅಮೂಲ್ಯ, ಅಪರೂಪದ ಕೆರೆಗಳು ಮುಚ್ಚಿ ಹೋಗುವ ಅಪಾಯ ಎದುರಾಗುತ್ತದೆ. ಅಲ್ಲದೆ ತ್ಯಾಜ್ಯಗಳನ್ನು ತುಂಬುವುದರಿಂದ ಅವುಗಳ ಒತ್ತುವರಿಗೆ ಸುಲಭವಾಗಿ ಅವಕಾಶ ಸಿಗುತ್ತದೆ. Infact ಕೆಲವು ಒತ್ತುವರಿದಾರರು, ಒತ್ತುವರಿ ಮಾಡುವ ಉದ್ದೇಶದಿಂದಲೇ ಈ ಕಟ್ಟಡ ತ್ಯಾಜ್ಯಗಳನ್ನು ಕೆರೆಗಳಿಗೆ ಸುರಿಯುತ್ತಾರೆ.
ರಾಜ್ಯದಲ್ಲಿ ಹೆಚ್ಚಿನ ಕೆರೆಗಳು ಸಣ್ಣ ನೀರಾವರಿ ಇಲಾಖೆ/ ಕಂದಾಯ ಇಲಾಖೆ/ ನಗರ ಪಾಲಿಕೆ/ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಬರುತ್ತವೆ. ಕೆಲವು ಕೆರೆಗಳು ಅವುಗಳು ಇರುವ ಜಾಗದ ಸಂಸ್ಥೆ/ಇಲಾಖೆಗಳ ವ್ಯಾಪ್ತಿಗೆ ಬರುತ್ತವೆ. (ಉದಾ: ಮೈಸೂರಿನ ಕುಕ್ಕರಹಳ್ಳಿ ಕೆರೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ, ಕಾರಂಜಿ ಕೆರೆ ಮೈಸೂರು ಮೃಗಾಲಯದ ವ್ಯಾಪ್ತಿಗೆ ಬರುತ್ತವೆ) ಹಾಗಾಗಿ ಸಂಬಂಧಪಟ್ಟ ಇಲಾಖೆ/ ಸಂಸ್ಥೆ/ ಪ್ರಾಧಿಕಾರಗಳು ಈ Debris ಸುರಿಯುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಕೆರೆಗಳನ್ನು ರಕ್ಷಿಸಬೇಕು.
ಮೂಲ- ಪರಿಸರ ಪರಿವಾರ
ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗಿದ್ದು, ಇಂದು ರಾತ್ರಿ ಮಧ್ಯಪ್ರದೇಶ ತಲುಪುವ ನಿರೀಕ್ಷೆ…
ತೆಂಗು ಬೆಳೆ ಬಾಧಿಸುವ ಕೀಟಗಳನ್ನು ಹತೋಟಿಗೆ ತರಲು ಕ್ರಮವಹಿಸುವುದಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ…
ಕೋಲಾರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಪ್ರತಿದಿನ 10 ಲಕ್ಷಕ್ಕೆ ಏರಿಸುವುದು ನೂತನ ಆಡಳಿತ…
ಪ್ರಣಾಮ್ ಎಂ ಪಿ, ಮಠದಗದ್ದೆ, 4 ನೇ ತರಗತಿ, ಕೆಪಿಎಸ್ ಶಾಲೆ, ಬೇಗಾರ್, …
ನಿರ್ವಿ ಜಿ ಎಂ, 2 ನೇ ತರಗತಿ, ಸರ್ಕಾರಿ ಶಾಲೆ , ಬಳ್ಪ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490