ಎಗ್ರಿಟೂರಿಸಂ ಬೆಳೆಸುವ ಬಗ್ಗೆ ಹಲವು ಯೋಚನೆಗಳು ಇವೆ. ಕೃಷಿಕ ತಾನು ಬೆಳೆಯುವ ಕೃಷಿಯ ಜೊತೆಗೆ ಆದಾಯ ದ್ವಿಗುಣ ಮಾಡುವ ಯೋಜನೆಗಳನ್ನು ತಾನೇ ಹಾಕಿಕೊಳ್ಳಬೇಕು. ಅದಕ್ಕೆ ಮುಖ್ಯವಾಗಿ ಕಾಣಿಸುವುದು ಎಗ್ರಿಟೂರಿಸಂ. ಬೇರೆ ಬೇರೆ ವಿಧದಲ್ಲಿ ಈ ಕೃಷಿ ಟೂರಿಸಂ ಬೆಳೆಸಲು ಸಾಧ್ಯವಿದೆ. ಅಂತಹದ್ದರಲ್ಲಿ ಸೂರ್ಯಕಾಂತಿ ಬೆಳೆಯುವ ಕೃಷಿಕ ಹೊಸದೊಂದು ಯೋಜನೆ ಹಾಕಿದ್ದಾರೆ. ನೂರಾರು ಮಂದಿಯ ಗಮನ ಸೆಳೆದಿದ್ದಾರೆ.
ಈಗ ಆಂಡ್ರಾಯ್ಡ್ ಮೊಬೈಲ್ ಯುಗದಲ್ಲಿ ಫೋಟೊ ತೆಗೆಯುವ ಆಸಕ್ತರು ಎಲ್ಲರೂ. ಮೊಬೈಲ್ ಇದ್ದರೆ ಸಾಕೇ ಮುದ ನೀಡುವ ಪರಿಸರ, ಪ್ರಕೃತಿ, ಗೆಳೆಯರು, ಮಳೆ, ಒಳ್ಳೆ ಸ್ಥಳ ಸಿಕ್ಕಿದಾಗ ಫೋಟೋ ಕ್ಲಿಕ್ಕಿಸದೆ ಇರುವವರು ಯಾರು ಹೇಳಿ. ಅದರಲ್ಲೂ ಈಗಿನ ಯುವ ಜನತೆ ಸೆಲ್ಫಿ ಪ್ರಿಯರು. ಫೋಟೋ ತೆಗೆದು ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಹಾಕದಿದ್ದರೆ ಸಮಾಧಾನನೇ ಇಲ್ಲ. ರಸ್ತೆಯಲ್ಲಿ ಸಂಚರಿಸುವಾಗ ಚಂದದ ಹೂದೂಟ ಸಿಕ್ಕರೆ ಕೇಳಬೇಕೇ..? ಎಂಥವರಿಗಾದರು ಒಮ್ಮೆ ಫೋಟ ತೆಗೆಯದೆ ಮುಂದೆ ಹೋಗಲು ಮನಸ್ಸು ಬರಲ್ಲ. ಇದೀಗ ಚಾಮರಾಜನಗರದ ರೈತರ ಸೂರ್ಯಕಾಂತಿ, ಚೆಂಡು ಹೂವು ಬೆಳೆ ಅಲ್ಲಿ ಓಡಾಡುವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪೇ ಮಾಡಿ ಸೆಲ್ಪೀ ತೆಗೆಯುವ ಐಡಿಯಾ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಪೂರ್ವಮುಂಗಾರು ಮಳೆ ಬಹಳ ಉತ್ತಮವಾಗಿ ಬಿದ್ದಿದೆ. ಹಾಗಾಗಿ ಗುಂಡ್ಲುಪೇಟೆ ತಾಲೂಕಿನಲ್ಲಿ ಭರ್ಜರಿ ಸೂರ್ಯಕಾಂತಿ, ಚೆಂಡು ಹೂ ಬೆಳೆದು ನಿಂತಿದೆ. ಅದರಲ್ಲೂ ಗುಂಡ್ಲುಪೇಟೆಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 67 ಹಾಗೂ ಇನ್ನೊಂದೆಡೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766 ರ ಇಕ್ಕೆಲದ ಜಮೀನುಗಳಲ್ಲಿ ರೈತರು ಬೆಳೆದಿರುವ ಸೂರ್ಯಕಾಂತಿ ಬೆಳೆ ಬಂಗಾರದ ಲೋಕದಂತೆ ಕಂಗೊಳಿಸುತ್ತಿವೆ.
ಸೂರ್ಯಕಾಂತಿ ಹೂವು ಅರಳಿ ನಿಂತಿರುವುದನ್ನು ನೋಡಿದರೆ ಎಂಥವರ ಮನಸ್ಸಿಗೂ ಮುದ ನೀಡುತ್ತದೆ. ಹಾಗಾಗಿ ಪ್ರವಾಸಿಗರೆಲ್ಲ ಸೂರ್ಯಕಾಂತಿ ಬೆಳೆದಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯ ಸೂರ್ಯಕಾಂತಿ ಜಮೀನುಗಳಿಗೆ ಅತಿಕ್ರಮವಾಗಿ ಪ್ರವೇಶಿಸಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೀಗಾಗಿ ಜಮೀನಿನ ಮಾಲೀಕ ಫೋಟೋ ಕ್ಲಿಕ್ಕಿಸಿಕೊಳ್ಳಲು ದರ ನಿಗದಿ ಮಾಡಿದ್ದಾರೆ.ಮೈಸೂರು-ಊಟಿ-ಕೇರಳ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜಮೀನಿನಲ್ಲಿ ಈ ರೈತ ಸೂರ್ಯಕಾಂತಿ ಬೆಳೆ ಬೆಳೆದಿದ್ದು, ಇದು ಈಗ ಸುಂದರವಾದ ಹೂ ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಫೋಟೋ ಕ್ಲಿಕ್ಕಿಸಿಕೊಳ್ಳಲು ಬರುತ್ತಿರುವ ಪ್ರತಿಯೊಬ್ಬರಿಗೂ ಜಮೀನು ಮಾಲೀಕ 10 ರೂ ಸಂಗ್ರಹ ಮಾಡುತ್ತಿದ್ದಾರೆ . ಇನ್ನೂ ಪ್ರವಾಸಿಗರು ಸೆಲ್ಪಿ ಹೊಡೆದುಕೊಳ್ಳುವ ವೇಳೆ ಗಿಡಗಳು ಹಾನಿಗೀಡಾಗುವ ಸಂಭವವಿದೆ. ಫೋಟೋ ಹಾಗೂ ಸೆಲ್ಪಿ ತೆಗೆದುಕೊಳ್ಳುಲು ಬರುವವರಿಂದ ಸೂರ್ಯಕಾಂತಿ ಗಿಡಗಳು ಮುರಿದು ಹಾಳಾಗಿ ರೈತರಿಗೆ ನಷ್ಟವಾಗುವ ಸಂಭವ ಇದೆ. ಹಾಗಾಗಿ ಈ ನಷ್ಟ ತಪ್ಪಿಸಿಕೊಳ್ಳಲು ರೈತರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ.
ಯಾರೇ ಆಗಲಿ ಸೂರ್ಯಕಾಂತಿ ಹೊಲದಲ್ಲಿ ಫೋಟೋ ಅಥವಾ ಸೆಲ್ಪಿ ತೆಗೆದುಕೊಳ್ಳಲು ಜಮೀನಿನ ರೈತನಿಗೆ ತಲಾ ಹತ್ತು ರೂಪಾಯಿ ನೀಡಬೇಕು. ಸೆಲ್ಪಿಗೆ ದರ ನಿಗದಿಪಡಿಸಿರುವುದರಿಂದ ಒಂದೆಡೆ ರೈತರಿಗೆ ವರಮಾನವೂ ಬಂದಂತೆ ಆಗುತ್ತಿದೆ. ಇನ್ನೊಂದೆಡೆ ರೈತರಿಗೆ ತಮ್ಮ ಬೆಳೆಯನ್ನು ಕಾದು ರಕ್ಷಣೆ ಮಾಡಿದಂತೆ ಆಗುತ್ತಿದೆ. ಈ ಬಾರಿ ಉತ್ತಮವಾಗಿ ಬೆಳೆದಿರುವ ಸೂರ್ಯಕಾಂತಿ ಬೆಳೆ ತನ್ನ ಅಂದ ಚಂದದಿಂದ ಪ್ರವಾಸಿಗರಿಗೆ ಮುದ ನೀಡಿದರೆ, ಬೆವರು ಸುರಿಸಿ ಬೆಳೆದ ರೈತನಿಗೂ ಲಾಭ ಮಾಡಿಕೊಡುತ್ತಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…