ಕರಾವಳಿ ಹಾಗೂ ಮಲೆನಾಡಿನಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಘಾಟ್ ಪ್ರದೇಶಗಳ ರಸ್ತೆಗಳು ಭೂ ಕುಸಿತದಿಂದ(Land Slide) ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಕರಾವಳಿಯನ್ನು ಸಂಪರ್ಕಿಸುವ ಬಹುತೇಕ ಭೂ ಸಾರಿಗೆ ವ್ಯವಸ್ಥೆ ಕೈಕೊಟ್ಟಿದೆ. ಚಾರ್ಮಾಡಿ(Charmadi), ಶಿರಾಡಿ(Shiradi), ಮಡಿಕೇರಿ(Madikeri) ರಸ್ತೆಗಳ ಬಡಿಯಲ್ಲಿ ಗುಡ್ಡ ಕುಸಿಯುತ್ತಿರುವ ಹಿನ್ನೆಲೆ ಅಡಚಣೆ ಉಂಟಾಗಿದೆ. ಇದೀಗ ಮಂಗಳೂರು ಬೆಂಗಳೂರು(Mangaluru-Bengaluru) ರೈ ಸಂಚಾರದಲ್ಲೂ(Railway) ಹಳಿಗಳ ಮೇಲೆ ಮಣ್ಣು ಬಿದ್ದಿರುವ ಹಿನ್ನೆಲೆ ವತ್ಯಯ ಉಂಟಾಗಿದೆ. ಸಕಲೇಶಪುರ-ಸುಬ್ರಹ್ಮಣ್ಯ(Sakaleshapura-Subramanya) ರಸ್ತೆ ಘಾಟ್ ವಿಭಾಗದಲ್ಲಿ ಭೂಕುಸಿತದಿಂದ ಹಾನಿಗೊಳಗಾಗಿರುವ ಹಳಿಗಳ ಮರು ನಿರ್ಮಾಣ(Track Repair) ಕಾರ್ಯ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಮೂರು ದಿನಗಳ ಕಾಲ ಬೆಂಗಳೂರು-ಮಂಗಳೂರು ಸೆಕ್ಟರ್‌ನಲ್ಲಿ ಎಲ್ಲಾ ಸೇವೆಗಳನ್ನು ರದ್ದುಗೊಳಿಸಿದೆ.
ಶಿರಾಡಿ ಘಾಟ್ ಬಳಿಯ ಎಡಕುಮೇರಿ – ಕಡವಗರಳ್ಳಿ ಮಧ್ಯೆ ಭೂಕುಸಿತವಾಗಿದ್ದು, ಒಟ್ಟು 14 ರೈಲುಗಳು ಸಂಚಾರ ರದ್ದಾಗಿದೆ. 700 ಮಂದಿಯಿಂದ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದ ಕಾಮಗಾರಿಗೆ ತಡೆಯಾಗುತ್ತಿದೆ. ಆಗಸ್ಟ್ 4ರವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಆಗಸ್ಟ್ 4ರ ವರೆಗೆ ಒಟ್ಟು 14 ರೈಲು ಸೇವೆಯಲ್ಲಿ ವ್ಯತ್ಯಯ ಆಗಲಿದ್ದು, ಕೇರಳ, ಮುರುಡೇಶ್ವರ, ಮಂಗಳೂರು ಭಾಗಕ್ಕೆ ಸೇವೆ ಒದಗಿಸುವ ರೈಲು ಸಂಚಾರದಲ್ಲಿ ಅಡಚಣೆ ಆಗಲಿದೆ. ಈ ಮಾರ್ಗದ ಎಲ್ಲಾ ರೈಲು ಸಂಚಾರ ಸ್ಥಗಿತ, ದುರಸ್ಥಿ ಕಾರ್ಯ ಚುರುಕುಗೊಂಡಿದೆ. ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್ ರೈಲು ಆಗಸ್ಟ್ 4 ವರೆಗೆ ರದ್ದಾಗಿದೆ. ಮುರ್ಡೇಶ್ವರ – ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ಸೇರಿ, ಎಲ್ಲಾ ರೈಲುಗಳ ಸಂಚಾರ ಆಗಸ್ಟ್ ನಾಲ್ಕರವರೆಗೆ ರದ್ದಾಗಿದೆ.
ಪ್ರಯಾಣಿಕರೇ ಗಮನಿಸಿ :ರದ್ದಾಗಿರುವ ರೈಲು ಓಡಾಟದ ಪಟ್ಟಿನ ಇಲ್ಲಿದೆ
ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…
ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…
ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…
ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…
ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…
ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…