ನವ ಮಂಗಳೂರು ಬಂದರು, ಕಾಫಿ ರಫ್ತಿಗೆ ಸಕಲ ಸೌಲಭ್ಯಗಳನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ವಿದೇಶಗಳಿಗೆ ಕಾಫಿಯ ರಫ್ತು ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದು ನವಮಂಗಳೂರು ಬಂದರು ಟ್ರಸ್ಟ್ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕಿರಾಜು ಹೇಳಿದ್ದಾರೆ.
ನವಮಂಗಳೂರು ಬಂದರು ಟ್ರಸ್ಟ್ ವತಿಯಿಂದ ಮಡಿಕೇರಿಯಲ್ಲಿ ಆಯೋಜಿಸಲಾಗಿದ್ದ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ಕಾಫಿ ಉದ್ಯಮಿಗಳು, ರಫ್ತುದಾರರ ವಹಿವಾಟುದಾರರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, 2023-24 ನೇ ಸಾಲಿನಲ್ಲಿ ನವಮಂಗಳೂರು ಬಂದರು ಮೂಲಕ 45.07 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಉತ್ಪನ್ನಗಳ ಸಾಗಾಣಿಕೆಯಾಗಿದೆ. ಈ ಪೈಕಿ ಕಾಫಿಯೇ ಅತ್ಯಧಿಕ ಪ್ರಮಾಣದಲ್ಲಿ ಸಾಗಾಣಿಕೆಯಾಗಿರುವುದು ಗಮನಾರ್ಹ ಎಂದು ತಿಳಿಸಿದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel