Opinion

ಇತ್ತೀಚಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ | ಮಕ್ಕಳ ತೂಕ ಮತ್ತು ಎತ್ತರವನ್ನು ಹೆಚ್ಚಿಸುವ ಆಹಾರಗಳು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಹೆಚ್ಚಿನ ಪಾಲಕರು(Parents) ಮಕ್ಕಳನ್ನು(Children) ಹೆತ್ತ ನಂತರ ಅವರನ್ನು ಶಿಕ್ಷಣದ ವ್ಯವಸ್ಥೆ(Education system) ಮಾಡುವುದು ಮತ್ತು ಅವರು ಇಷ್ಟಪಟ್ಟದ್ದನ್ನು ತಿನ್ನಲು(Food) ಕೊಡುವುದು ಇಷ್ಟು ಮಾಡಿದರೆ ತಮ್ಮ ಕರ್ತವ್ಯ ಮುಗಿಯಿತು ಎಂದುಕೊಂಡಿರುತ್ತಾರೆ. ಆದರೆ ಮಕ್ಕಳ ಪಾಲನೆಯಲ್ಲಿ ಇದು ಅತ್ಯಂತ ಕಿರಿದಾದ ಕರ್ತವ್ಯವಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾದ ಕರ್ತವ್ಯ ಮಕ್ಕಳನ್ನು ಆರೋಗ್ಯವಂತರಾಗಿ(Healthy) ಮತ್ತು ಸುಸಂಸ್ಕೃತರಾಗಿ ಬೆಳೆಸುವುದು. ಮಕ್ಕಳು ಬೆಳೆದು ಸ್ವತಂತ್ರರಾಗಿ ಸ್ವಾವಲಂಬಿಗಳಾಗಿ ತಮ್ಮ ಜೀವನವನ್ನು ತಾವೇ ರೂಪಿಸಿಕೊಳ್ಳಲು ಸಮರ್ಥರಾಗಿರಬೇಕು. ಈ ನಿಟ್ಟಿನಲ್ಲಿ ಹೆಚ್ಚಿನ ಪೋಷಕರು ತಪ್ಪುತ್ತಾರೆ.

Advertisement

ಆರೋಗ್ಯ ಹಾಗೂ ಸಾಮರ್ಥ್ಯದ ದೃಷ್ಟಿಯಿಂದ ಯೋಚಿಸಿದಾಗ ಮಕ್ಕಳು ಎತ್ತರವಾಗಿ ಸರಿಯಾದ ತೂಕದೊಂದಿಗೆ ಬೆಳೆದರೆ ಇದು ಅವರ ಆರೋಗ್ಯ ಮತ್ತು ಆತ್ಮವಿಶ್ವಾಸ ಬೆಳೆಸುವಲ್ಲಿ ಸಹಾಯಕವಾಗುತ್ತದೆ. ಸಾಮಾನ್ಯವಾಗಿ ಈ ವಿಷಯ ಈ ನಿಟ್ಟಿನಲ್ಲಿ ಯಾವ ಪೋಷಕರೂ ಯೋಚಿಸುವುದಿಲ್ಲ. ಆದರೆ ಮಕ್ಕಳ ಆರೈಕೆಯಲ್ಲಿ ಇದೊಂದು ಮಹತ್ವದ ಅಂಶವಾಗಿದೆ. ಪ್ರತಿ ಪೋಷಕರು ತಮ್ಮ ಮಕ್ಕಳು ಸರಿಯಾದ ದೈಹಿಕ ಬೆಳವಣಿಗೆಯತ್ತ ವಿಶೇಷ ಗಮನಹರಿಸಬೇಕು. ಮಕ್ಕಳ ಆರೋಗ್ಯದ ಜೊತೆ ಅವರ ತೂಕವೂ ಕೂಡ ಸರಿಯಾಗಿರುವಂತೆ ಪ್ರಯತ್ನ ಪಡಬೇಕು. ಗಂಡು ಮಕ್ಕಳು 6 ಅಡಿ ಎತ್ತರ ಮತ್ತು ಹೆಣ್ಣು ಮಕ್ಕಳು 5.8 ಅಡಿ ಎತ್ತರ ಬೆಳೆಯುವಂತೆ ವಿಶೇಷ ಪ್ರಯತ್ನ ಪಡಬೇಕು. ಮಕ್ಕಳ ಎತ್ತರವು ಅನುವಂಶಿಕ ಹಿನ್ನೆಲೆಯ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ, ಇದು ಸಾಧ್ಯವಾಗುತ್ತದೋ ಇಲ್ಲವೋ ಬೇರೆ ವಿಷಯ. ಆದರೆ, ಈ ಗುರಿಯನ್ನು ಇಟ್ಟುಕೊಂಡು ಎಲ್ಲ ಪೋಷಕರು ಹಾಗೂ ಮಕ್ಕಳು ಗುರಿಯನ್ನು ತಲುಪಲು ಶ್ರಮ ಪಡಬೇಕಾದ್ದು ಮಹತ್ವದ ಅಂಶವಾಗಿದೆ.

ಮಕ್ಕಳ ಎತ್ತರವನ್ನು ಬೆಳೆಸಲು ಸಕ್ರಿಯವಾದ ನಿರಂತರ ಯೋಗಾಸನಗಳು ಊಟ ಎತ್ತರ ಜಿಗಿತ ಹಾಗೂ ಇತರ ಕೆಲವು ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಜ್ಞರಿಂದ ಮತ್ತು ಬೆಳವಣಿಗೆಯ ಪ್ರಶಿಕ್ಷಕರಿಂದ ತಿಳಿದುಕೊಳ್ಳಬಹುದು. ಮಕ್ಕಳ ಬೆಳವಣಿಗೆಯಲ್ಲಿ ಕೆಲ ಆಹಾರ ಪದಾರ್ಥಗಳು ಕೂಡ ಪಾತ್ರವನ್ನು ವಹಿಸುತ್ತವೆ. ಈ ಲೇಖನದಲ್ಲಿ ಅವುಗಳ ಬಗ್ಗೆ ಸ್ವಲ್ಪ ಹೆಚ್ಚಿಗೆ ತಿಳಿದುಕೊಳ್ಳೋಣ:

ಮಕ್ಕಳ ತೂಕ ಹೆಚ್ಚಿಸುವ ಆಹಾರಗಳು (ಮಕ್ಕಳಿಗೆ ನಿರಂತರ ಕೆಮ್ಮು ಮತ್ತು ಶೀತದ ದೂರುಗಳಿಲ್ಲದಿದ್ದರೆ) ◼️ಬಾಳೆಹಣ್ಣು – ಹೆಚ್ಚಿನ ಕ್ಯಾಲೋರಿಗಳು ಮತ್ತು ಸಕ್ಕರೆ. ಆದ್ದರಿಂದ, ಮಕ್ಕಳು ಬೇಗನೆ ತೂಕವನ್ನು ಪಡೆಯುತ್ತಾರೆ. ◼️ಕೆನೆ ಹಾಲು – ಇದು ಪ್ರೋಟೀನ್ ಮತ್ತು ಹೆಚ್ಚಿನ ಕೊಬ್ಬನ್ನು ಹೊಂದಿರುತ್ತದೆ. ಆದ್ದರಿಂದ, ಮಕ್ಕಳು ಬೇಗನೆ ತೂಕವನ್ನು ಪಡೆಯುತ್ತಾರೆ. ◼️ಅಕ್ಕಿ – ಇದು ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ತೂಕ ಹೆಚ್ಚಾಗುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ◼️ಸಪೋಟ – ಇದರಲ್ಲಿ ಹೆಚ್ಚಿನ ಕ್ಯಾಲೋರಿ ಮತ್ತು ಸಕ್ಕರೆ ಇರುತ್ತದೆ. ಇದು ದೇಹದ ಕೊಬ್ಬನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ◼️ಸೋಯಾಬೀನ್ – ಸೋಯಾಬೀನ್ ಮತ್ತು ಅದರ ಉತ್ಪನ್ನಗಳಲ್ಲಿ ಪ್ರೋಟೀನ್ ಇರುತ್ತದೆ. ಇದರಿಂದ ಮಕ್ಕಳ ತೂಕ ಹೆಚ್ಚುತ್ತದೆ. ◼️ ಬೇಳೆ ಕಾಳುಗಳು – ಇದು ಹೆಚ್ಚು ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಮಕ್ಕಳ ತೂಕ ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ◼️ಚೀಸ್ – ಇದರಲ್ಲಿ ಪ್ರೊಟೀನ್ ಮತ್ತು ಕೊಬ್ಬು ಹೇರಳವಾಗಿದ್ದು ಮಕ್ಕಳ ತೂಕ ಹೆಚ್ಚಾಗಲು ಒಳ್ಳೆಯದು.

ಮಕ್ಕಳ ಎತ್ತರವನ್ನು ಹೆಚ್ಚಿಸುವ ಆಹಾರಗಳು ◼️ಮೊಸರು – ಇದು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಮಕ್ಕಳ ಎತ್ತರವನ್ನು ಹೆಚ್ಚಿಸುವಲ್ಲಿ ಇದರ ಪ್ರಯೋಜನಸಂಭವಿಸುತ್ತದೆ. ◼️ಕಿತ್ತಳೆ – ಇದರಲ್ಲಿರುವ ವಿಟಮಿನ್ ಸಿ ಯಿಂದ ಮಕ್ಕಳು ಚೈತನ್ಯದಿಂದ ಇರುತ್ತಾರೆ ಮತ್ತು ಅವರು ದೌರ್ಬಲ್ಯವನ್ನೂ ಹೋಗಲಾಡಿಸುತ್ತಾರೆ. ◼️ದಾಳಿಂಬೆ – ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಬುದ್ಧಿಯನ್ನು ಪ್ರಕಾಶಮಾನವಾಗಿಸಲು ಸಹಾಯ ಮಾಡುತ್ತದೆ. ◼️ಪಾಲಕ್ – ಇದರಲ್ಲಿರುವ ಕಬ್ಬಿಣಾಂಶ, ಕ್ಯಾಲ್ಸಿಯಂ ಮಕ್ಕಳ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ◼️ಚೀಸ್ – ಇದರಲ್ಲಿರುವ ಫೈಬರ್, ಫಾಸ್ಫರಸ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹಲ್ಲುಗಳನ್ನು ಬಲವಾಗಿಡುತ್ತದೆ. ◼️ವ್ಯಾಯಾಮ – ಮಕ್ಕಳ ಬೆಳವಣಿಗೆಯಲ್ಲಿ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ. ಯೋಗ್ಯ ಯೋಗಾಸನಗಳು, ಸೈಕ್ಲಿಂಗ್, ಎತ್ತರ ಜಿಗಿತ, ಹಗ್ಗ ಜಿಗಿತ, ನಿಧಾನ ಓಟ, ಈಜು, ಮೆಟ್ಟಿಲು ಹತ್ತುವುದು ಇಳಿಯುವುದು, ಪಾರಂಪರಿಕ ಹೊರಾಂಗಣ ಆಟಗಳು, ಇತ್ಯಾದಿ ವ್ಯಾಯಾಮಗಳು ಎತ್ತರ ಬೆಳವಣಿಗೆಗೆ ಅನುಕೂಲಕರ. ◼️ನಿದ್ರೆ – ವಾಸ್ತವದಲ್ಲಿ ಮಕ್ಕಳ ಬೆಳವಣಿಗೆ ನಿದ್ರಿಸುವಾಗ ಹೆಚ್ಚಾಗಿರುತ್ತದೆ. ಆದ್ದರಿಂದ, ಹಗಲಲ್ಲಿ ಸಾಕಷ್ಟು ವ್ಯಾಯಾಮದ ನಂತರ ರಾತ್ರಿ ಸಾಕಷ್ಟು ನಿದ್ರೆ ಪಡೆಯುವುದು ಅಗತ್ಯ. ರಾತ್ರಿ ಬೇಗ ಮಲಗಿದಷ್ಟೂ ಬೆಳವಣಿಗೆಗಾಗಿ ಸಹಾಯಕವಾಗುತ್ತದೆ.

ಡಾ. ಕುಲಕರ್ಣಿ ಪಿ. ಎ. ಡಾ. ಪ್ರಮೋದ್ ಧರೆ,

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

7 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

8 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

17 hours ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

17 hours ago

ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |

ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…

20 hours ago

ಹೊಸರುಚಿ| ಗುಜ್ಜೆ ರೋಲ್

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…

20 hours ago