ಶಿಲೀಂದ್ರ ನಾಶಕವಾಗಿ ಎಲೆಯ ಔಷಧಿ | ಬೆಳಕಿಗೆ ಬಂದ ಥೈಲ್ಯಾಂಡ್‌ ವರದಿ | ಅಡಿಕೆ ಎಲೆಚುಕ್ಕಿ ರೋಗಕ್ಕೂ ಪರಿಹಾರ? |

November 2, 2022
9:40 AM

ವಿವಿಧ ಎಲೆಗಳು ಕೂಡಾ ಶಿಲೀಂದ್ರನಾಶಕವಾಗಿ ಕೆಲಸ ಮಾಡುತ್ತದೆ ಎನ್ನುವ ಅಧ್ಯಯನ ವರದಿಯೊಂದು ಈಗ ಮತ್ತೆ ಬೆಳಕಿಗೆ ಬಂದಿದೆ.  ಎಲೆಗಳ ರಸವನ್ನು ತೆಗೆದು ಸಂಸ್ಕರಣೆ ಮಾಡಿ ಬಳಕೆ ಮಾಡಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎಂದು ಥೈಲ್ಯಾಂಡ್‌ ವರದಿಯೊಂದು ಈಗ ಚರ್ಚೆಗೆ ಬಂದಿದೆ. ವಿವಿಧ ಕೃಷಿ ಸಮಸ್ಯೆಗಳಿಗೂ ರಾಸಾಯನಿಕದ ಬದಲು ಬಳಕೆ ಮಾಡಬಹುದು ಎನ್ನುವುದು ಚರ್ಚೆ. ಇದೇ ಮಾದರಿ ಎಲೆಚುಕ್ಕಿ ರೋಗಕ್ಕೂ ಪರಿಹಾರ ಕಾಣಬಹುದು ಎಂಬುದು ಚರ್ಚೆಯ ಭಾಗವಾಗಿದೆ.

Advertisement
Advertisement

ಥೈಲ್ಯಾಂಡ್‌ನ ಸಂಶೋಧನಾ ವಿಭಾಗವೊಂದು ಈ ಬಗ್ಗೆ ಸುಮಾರು 10 ವರ್ಷಗಳ ಹಿಂದೆ ಅಧ್ಯಯನ ಮಾಡಿತ್ತು. ಸುಮಾರು 1 ಬಗೆಯ ಎಲೆಗಳನ್ನು ಸಂಗ್ರಹಿಸಿ ಅವುಗಳ ಅಧ್ಯಯನ ನಡೆಸಲಾಗಿತ್ತು. ಅನೇಕ ಸಮಯಗಳವರೆಗೆ ವಿವಿಧ ರೀತಿಯಲ್ಲಿ ಪ್ರಯೋಗ ನಡೆಸಿದ ಬಳಿಕ ಕೆಲವು ಜಾತಿಯ ಮರ ಅಥವಾ ಗಿಡಗಳ ಎಲೆಗಳೂ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎನ್ನುವುದು  ಅಧ್ಯಯನ ವರದಿ ತಿಳಿಸಿತ್ತು. ಉಷ್ಣವಲಯದ ಹಣ್ಣಿನ ಸಸ್ಯಗಳಲ್ಲಿ ಕಂಡುಬರುವ ರೋಗಕ್ಕೆ ಕಾರಣವಾಗುವ ಶಿಲೀಂದ್ರಗಳ ನಿರ್ವಹಣೆ ಮೂಲಕ ಪ್ರಯತ್ನ ಮಾಡಲಾಗಿತ್ತು. ಈ ರೋಗದ ನಿರ್ವಹಣೆಗೆ ರಾಸಾಯನಿಕ ಶಿಲೀಂಧ್ರನಾಶಕಗಳ ಬಳಕೆ ಸಾಮಾನ್ಯವಾಗಿತ್ತು. ಆದರೆ ಈ ಶಿಲೀಂದ್ರವು ಕ್ರಮೇಣ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಈ ವರದಿ ಹೇಳಿತ್ತು. ಇದಕ್ಕಾಗಿ ಸಸ್ಯಜನ್ಯವಾದ ಶಿಲೀಂದ್ರನಾಶಕಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

Advertisement

ಸಾಮಾನ್ಯವಾಗಿ ಹಿಪ್ಪಲಿ, ಕಾಡುಹಿಪ್ಪಲಿ, ಮಾವು, ಪಪ್ಪಾಯಿ ಸೇರಿದಂತೆ ಹಲವು ಬಗೆಯ ಎಲೆಗಳು ಪರಿಣಾಮಕಾರಿಯಾಗಿ ಸಂಸ್ಕರಣೆ ಹಾಗೂ ಸೂಕ್ತ ಮಾದರಿಯ ವಿಧಾನಗಳ ಬಳಿಕ ಸಿಂಪಡಿಸಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈಗ ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣೆಗೂ ಕೂಡಾ ಹಿಪ್ಪಲಿ ಎಲೆಯ ಕಷಾಯದ ಮೂಲಕ ಸಿಂಪಡಣೆ ಮಾಡಿದರೆ ನಿಯಂತ್ರಣವಾಗುತ್ತದೆ ಎನ್ನುವುದಕ್ಕೆ ಥೈಲ್ಯಾಂಡ್‌ ಅಧ್ಯಯನ ವರದಿ ತಾಳೆಯಾಗುತ್ತಿದೆ.

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಮಳೆ ಸುರಿಯುತ್ತಿದ್ದಂತೆ ರಾಜ್ಯದಲ್ಲಿ ಡೆಂಘೀ ಭೀತಿ : ಮುಂಜಾಗ್ರತಾ ಕ್ರಮಕ್ಕೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ
May 15, 2024
11:31 PM
by: The Rural Mirror ಸುದ್ದಿಜಾಲ
ನಮ್ಮ ಪ್ರಧಾನಿಯ ಆಸ್ತಿ ಎಷ್ಟು ಗೊತ್ತಾ..? ಅವರಿಗೆ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ : ಬರೀ 3.02ಕೋಟಿ ಚರಾಸ್ತಿ
May 15, 2024
11:09 PM
by: The Rural Mirror ಸುದ್ದಿಜಾಲ
ಇಂದು ಅಂತಾರಾಷ್ಟ್ರೀಯ ಕುಟುಂಬ ದಿನ : ಅಂದಿನ ಕೂಡು ಕುಟುಂಬ ಇಂದಿನ ವಿಭಕ್ತ ಕುಟುಂಬ
May 15, 2024
10:50 PM
by: The Rural Mirror ಸುದ್ದಿಜಾಲ
ಸಿಎಎ ಅಡಿಯಲ್ಲಿ 14 ಜನರಿಗೆ ಮೊದಲ ಬಾರಿಗೆ ಪೌರತ್ವ : 14 ಮಂದಿಗೆ ಭಾರತೀಯ ಪೌರತ್ವ ಪ್ರಮಾಣ ಪತ್ರ ನೀಡಿದ ಕೇಂದ್ರ ಸರ್ಕಾರ
May 15, 2024
10:36 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror