ವಿವಿಧ ಎಲೆಗಳು ಕೂಡಾ ಶಿಲೀಂದ್ರನಾಶಕವಾಗಿ ಕೆಲಸ ಮಾಡುತ್ತದೆ ಎನ್ನುವ ಅಧ್ಯಯನ ವರದಿಯೊಂದು ಈಗ ಮತ್ತೆ ಬೆಳಕಿಗೆ ಬಂದಿದೆ. ಎಲೆಗಳ ರಸವನ್ನು ತೆಗೆದು ಸಂಸ್ಕರಣೆ ಮಾಡಿ ಬಳಕೆ ಮಾಡಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎಂದು ಥೈಲ್ಯಾಂಡ್ ವರದಿಯೊಂದು ಈಗ ಚರ್ಚೆಗೆ ಬಂದಿದೆ. ವಿವಿಧ ಕೃಷಿ ಸಮಸ್ಯೆಗಳಿಗೂ ರಾಸಾಯನಿಕದ ಬದಲು ಬಳಕೆ ಮಾಡಬಹುದು ಎನ್ನುವುದು ಚರ್ಚೆ. ಇದೇ ಮಾದರಿ ಎಲೆಚುಕ್ಕಿ ರೋಗಕ್ಕೂ ಪರಿಹಾರ ಕಾಣಬಹುದು ಎಂಬುದು ಚರ್ಚೆಯ ಭಾಗವಾಗಿದೆ.
ಥೈಲ್ಯಾಂಡ್‌ನ ಸಂಶೋಧನಾ ವಿಭಾಗವೊಂದು ಈ ಬಗ್ಗೆ ಸುಮಾರು 10 ವರ್ಷಗಳ ಹಿಂದೆ ಅಧ್ಯಯನ ಮಾಡಿತ್ತು. ಸುಮಾರು 1 ಬಗೆಯ ಎಲೆಗಳನ್ನು ಸಂಗ್ರಹಿಸಿ ಅವುಗಳ ಅಧ್ಯಯನ ನಡೆಸಲಾಗಿತ್ತು. ಅನೇಕ ಸಮಯಗಳವರೆಗೆ ವಿವಿಧ ರೀತಿಯಲ್ಲಿ ಪ್ರಯೋಗ ನಡೆಸಿದ ಬಳಿಕ ಕೆಲವು ಜಾತಿಯ ಮರ ಅಥವಾ ಗಿಡಗಳ ಎಲೆಗಳೂ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎನ್ನುವುದು ಅಧ್ಯಯನ ವರದಿ ತಿಳಿಸಿತ್ತು. ಉಷ್ಣವಲಯದ ಹಣ್ಣಿನ ಸಸ್ಯಗಳಲ್ಲಿ ಕಂಡುಬರುವ ರೋಗಕ್ಕೆ ಕಾರಣವಾಗುವ ಶಿಲೀಂದ್ರಗಳ ನಿರ್ವಹಣೆ ಮೂಲಕ ಪ್ರಯತ್ನ ಮಾಡಲಾಗಿತ್ತು. ಈ ರೋಗದ ನಿರ್ವಹಣೆಗೆ ರಾಸಾಯನಿಕ ಶಿಲೀಂಧ್ರನಾಶಕಗಳ ಬಳಕೆ ಸಾಮಾನ್ಯವಾಗಿತ್ತು. ಆದರೆ ಈ ಶಿಲೀಂದ್ರವು ಕ್ರಮೇಣ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಈ ವರದಿ ಹೇಳಿತ್ತು. ಇದಕ್ಕಾಗಿ ಸಸ್ಯಜನ್ಯವಾದ ಶಿಲೀಂದ್ರನಾಶಕಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.
ಸಾಮಾನ್ಯವಾಗಿ ಹಿಪ್ಪಲಿ, ಕಾಡುಹಿಪ್ಪಲಿ, ಮಾವು, ಪಪ್ಪಾಯಿ ಸೇರಿದಂತೆ ಹಲವು ಬಗೆಯ ಎಲೆಗಳು ಪರಿಣಾಮಕಾರಿಯಾಗಿ ಸಂಸ್ಕರಣೆ ಹಾಗೂ ಸೂಕ್ತ ಮಾದರಿಯ ವಿಧಾನಗಳ ಬಳಿಕ ಸಿಂಪಡಿಸಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈಗ ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣೆಗೂ ಕೂಡಾ ಹಿಪ್ಪಲಿ ಎಲೆಯ ಕಷಾಯದ ಮೂಲಕ ಸಿಂಪಡಣೆ ಮಾಡಿದರೆ ನಿಯಂತ್ರಣವಾಗುತ್ತದೆ ಎನ್ನುವುದಕ್ಕೆ ಥೈಲ್ಯಾಂಡ್ ಅಧ್ಯಯನ ವರದಿ ತಾಳೆಯಾಗುತ್ತಿದೆ.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…