Advertisement
MIRROR FOCUS

ಲೆಮನ್​ ಗ್ರಾಸ್​ ಬೆಳೆಯ ಮೂಲಕ ಬದುಕು ಬದಲಾಯಿಸಿದ ಕುಟುಂಬ | ನಕ್ಸಲ್‌ ಪೀಡಿತ ಪ್ರದೇಶದ ರೈತ ದಂಪತಿಯ ಯಶೋಗಾಥೆ

Share

ಈಗಿನ ಕೃಷಿಕರು(Farmer)  ನಮ್ಮ ಹಿರಿಯರು ಬೆಳೆಯುತ್ತಿದ್ದ ಬೆಳೆಗಳನ್ನು, ಕೃಷಿ ಪದ್ಧತಿಯನ್ನು ಬಿಟ್ಟು ಬಹಳ ಮುಂದೆ ಬಂದಿದ್ದಾರೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡ(Dakshina kannada) ಜಿಲ್ಲೆಯಾದ್ಯಂತ ಗೇರು ಬೀಜ ಮರಗಳ(Cashew nut)  ಕಾಣಬಹುದಿತ್ತು. ಅದರ ಮಧ್ಯ, ಮಧ್ಯದಲ್ಲಿ ಎಣ್ಣೆ ಹುಳ್ಳು ಅಂದರೆ ಲೆಮನ್‌ ಗ್ರಾಸ್(‌Lemon grass) ನ್ನು ಬೆಳೆಯುತ್ತಿದ್ದರು. ಹಾಗೆ ಅದರ ಎಣ್ಣೆ ತಯಾರಿಸಿ(Lemon grass Oil) ಮಾರಾಟ ಮಾಡುತ್ತಿದ್ದರು. ಇದು ಔಷಧಿಯ ಬಳಕೆಗೆ ಹೋಗುತ್ತಿತ್ತು. ಈಗ ಕೃಷಿ ಪದ್ಧತಿ ಬದಲಾದಂತೆ ಎಲ್ಲವೂ ಬದಲಾಗಿದೆ. ಆದರೆ ಬಿಹಾರದ ಒಂದು ರೈತ ಕುಟುಂಬ ಇದೇ ಹುಲ್ಲಿನಿಂದ ವಾರ್ಷಿಕವಾಗಿ ಉತ್ತಮ ಆದಾಯ ಮಾಡುತ್ತಿದ್ದಾರೆ.

Advertisement
Advertisement
Advertisement

ಕೃಷಿ ಎಂದರೆ ಸಮಸ್ಯೆಗಳ ಪಟ್ಟಿಯೇ ಹೇಳುವವರು. ಕಾರ್ಮಿಕರ ಅಭಾವ ಸೇರಿದಂತೆ ಹಲವು ಸಮಸ್ಯೆಗಳ ಪಟ್ಟಿ ನಡುವೆ ಮನೆ ಯುವಕರೆಲ್ಲಾ ಕೃಷಿ ಬಿಟ್ಟು ಪಟ್ಟಣ ಸಾಗಿದ ಮೇಲೆ ಕೃಷಿ ಬಹಳ ಕಷ್ಟಕರವಾದ ಕೆಲಸವಾಯಿತು ಇಲ್ಲಿ. ಹಾಗೆ ಆಧುನಿಕತೆ ಮುಂದುವರೆದಂತೆ ಹೊಸ ಕೃಷಿಗಳಿಗೆ ಹೊಂದಿ ಕೊಂಡ ನಮ್ಮ ಕೃಷಿಕರು ಗೇರು ಬದಲಾಗಿ ರಬ್ಬರ್‌, ಅಡಿಕೆ. ಗುಡ್ಡವನ್ನೆಲ್ಲಾ ನೆಲಸಮ ಮಾಡಿ, ಲಿಂಬೆ ಹುಲ್ಲನ್ನು ಮಣ್ಣಿನ ಅಡಿಗೆ ಹಾಕಲಾಯ್ತು. ಇದೀಗ ಅದೇ ಬೆಳೆಯನ್ನು ಬೆಳೆದು ಲಕ್ಷಗಟ್ಟಲೆ ಸಂಪಾದಿಸುವ ರೈತರು ಇದ್ದಾರೆ. ಆದರೆ ಹೊರ ರಾಜ್ಯದಲ್ಲಿ.

Advertisement

ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಭವಿಷ್ಯವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ ಈ ರೈತರು. ಇಲ್ಲೊಬ್ಬ ದಂಪತಿ ಕೃಷಿ ಮಾಡಿ ವರ್ಷಕ್ಕೆ ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ವಾಣಿಜ್ಯ ಬೆಳೆಯ ಪ್ರವೃತ್ತಿ ಬಹಳ ವೇಗವಾಗಿ ಹೆಚ್ಚುತ್ತಿದೆ. ಒಂದು ಕಾಲದಲ್ಲಿ ಬಿಹಾರದ ಗಯಾ ಜಿಲ್ಲೆಯಲ್ಲಿ ಅಫೀಮು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಈಗ ಅಲ್ಲಿಯೂ ವಾಣಿಜ್ಯ ಬೆಳೆಗಳನ್ನು ಬೆಳೆದು ಲಕ್ಷಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.

ಗಯಾ ಜಿಲ್ಲೆಯ ಬರಚಟ್ಟಿ ಬ್ಲಾಕ್ ಪ್ರದೇಶದ ಅಂಜನಿಯತಾಂಡ್ ನಕ್ಸಲ್ ಪೀಡಿತ ಗ್ರಾಮವಾಗಿದೆ. ಇಲ್ಲಿನ ರೈತರು ಲೆಮನ್​ ಗ್ರಾಸ್​ ಅಥವಾ ನಿಂಬೆ ಹುಲ್ಲಿನ ಕೃಷಿ ಮಾಡುವ ಮೂಲಕ ತಮ್ಮ ಭವಿಷ್ಯ ಬದಲಿಸಿಕೊಳ್ಳುತ್ತಿದ್ದಾರೆ. ಈ ಗ್ರಾಮದ ದಂಪತಿ ಸುಮಾರು 15 ಎಕರೆ ಜಮೀನಿನಲ್ಲಿ ನಿಂಬೆ ಹುಲ್ಲು ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ವಾರ್ಷಿಕವಾಗಿ 12 ರಿಂದ 15 ಲಕ್ಷದವರೆಗೆ ಆದಾಯ ಸಿಗುತ್ತಿದೆ.

Advertisement

 

ಗೋವಿಂದ್ ಪ್ರಜಾಪತ್ ಮತ್ತು ಮಂಜು ದೇವಿ ದಂಪತಿ ಸುಮಾರು 2 ವರ್ಷಗಳಿಂದ ನಿಂಬೆ ಹುಲ್ಲು ಕೃಷಿ ಮಾಡುತ್ತಿದ್ದಾರೆ. ಈ ಬೇಸಾಯಕ್ಕೆ ಕೃಷಿ ಇಲಾಖೆಯ ಸಹಾಯವನ್ನೂ ಪಡೆದುಕೊಂಡಿದ್ದಾರೆ. ಗಿಡಗಳ ಹೊರತಾಗಿ, ಕೃಷಿ ಇಲಾಖೆ ಅವರಿಗೆ ಸೋಲಾರ್ ಪಂಪ್‌ಗಳು, ನಿಂಬೆ ಹುಲ್ಲು ಸಂಸ್ಕರಣಾ ಘಟಕಗಳು ಮತ್ತು ಇತರ ವಸ್ತುಗಳನ್ನು ಒದಗಿಸಿದೆ. ಅವರು ನಿಂಬೆ ಹುಲ್ಲಿನಿಂದಲೂ ತೈಲವನ್ನು ಹೊರತೆಗೆಯುತ್ತಿದ್ದಾರೆ. ಈ ಹುಲ್ಲಿನಿಂದ ತೆಗೆದ ಎಣ್ಣೆಗೆ ಪ್ರತೀ ಲೀಟರ್‌ಗೆ ಸುಮಾರು 1500 ರೂ ಬೆಲೆ ಇದೆ. ಒಂದು ಎಕರೆಯಲ್ಲಿ ಬೆಳೆದ ನಿಂಬೆ ಹುಲ್ಲಿನಿಂದ ಕಡಿಮೆ ಎಂದರೂ 80 ಲೀಟರ್ ಎಣ್ಣೆಯನ್ನು ತೆಗೆಯಬಹುದು ಎನ್ನುತ್ತಾರೆ ದಂಪತಿ.

Advertisement

ಲೆಮನ್ ಗ್ರಾಸ್ ಗಿಡಮೂಲಿಕೆಯು ತನ್ನ ವಿಶಿಷ್ಟ ರುಚಿ ಮತ್ತು ಆರೋಗ್ಯಕರ ಪ್ರಯೋಜನಗಳಿಗೂ ಹೆಸರುವಾಸಿ. ಈ ಹುಲ್ಲು ಬಹಳ ವಿಭಿನ್ನವಾದ ಸುವಾಸನೆ ಮತ್ತು ರುಚಿಯನ್ನು ಹೊಂದಿದ್ದು, ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ. ಅದಕ್ಕಾಗಿಯೇ ಇದನ್ನು ನೆಗಡಿ ಕೆಮ್ಮು,ಮಧುಮೇಹ, ಅಧಿಕ ರಕ್ತದೊತ್ತಡದಂತಹ ಇತರ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಕೆ ಮಾಡಲಾಗುತ್ತದೆ.

Anjaniyathand is a Naxal-affected village in Barachatti block of Gaya district. However, the farmers here are changing their future by cultivating lemon grass. A couple from this village is cultivating lemongrass in about 15 acres of land. 12 to 15 lakhs per annum is being earned through this.

Advertisement

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

5 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

5 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

24 hours ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

24 hours ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

1 day ago