ಈ ಬಾರಿಯ ಬೇಸಗೆ ಹಾಗೂ ಬರಗಾಲ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಉತ್ತಮ ಮಳೆಯ ನಿರೀಕ್ಷೆ ಇದೆ ಈ ಬಾರಿ. ಅದಕ್ಕಾಗಿ ನೀರು ಸಂರಕ್ಷಣೆ ಮಾಡೋಣ, ನೀರು ಇಂಗಿಸುವ ಕಡೆಗೂ ಆದ್ಯತೆ ನೀಡಬೇಕು. ಇದಕ್ಕಾಗಿ ರೈತರು ಏನು ಮಾಡಬಹುದು..?
ರೈತರು ತಮ್ಮ ಜಮೀನುಗಳಲ್ಲಿ ಎಕರೆಗೆ ಈ ರೀತಿ 20 ಕಂದಕ ತೆಗೆದು(5ಮೀ ಉದ್ದ, 1 ಮೀ ಆಗಲ, 2 ಅಡಿ ಆಳ) ಬಂದ ಮಣ್ಣಿನಿಂದ ಬದು ಹಾಕಿಕೊಂಡರೆ ಮಣ್ಣು ಸವಕಳಿ ತಡೆಯುವುದರ ಜೊತೆಗೆ 20 ಕಂದಕಗಳಲ್ಲಿ ಒಂದು ಮಳೆಗೆ 60,000 ಲೀ ನೀರು ನಿಲ್ಲಿಸಿ ಹಿಂಗಿಸಬಹುದು. ವರ್ಷದಲ್ಲಿ 8-10 ಮಳೆಯಾದರೆ 5ಲಕ್ಷ ಲೀ ಮಳೆನೀರನ್ನು ಭೂಮಿಗೆ ಹಿಂಗಿಸಬಹುದು. ಜೆಸಿಬಿ ಕರೆದರೆ 5-6ಗಂಟೆ ಕೆಲಸ, 6-7 ಸಾವಿರ ಖರ್ಚಾಗಬಹುದು.
ಯಾವುದೇ ಕಾರಣಕ್ಕೂ ಕಂದಕಗಳನ್ನು ಮುಚ್ಚಬಾರದು, ಉಳುಮೆ ಮಾಡುವಾಗ ಮುಚ್ಚದಂತೆ ಟ್ರಾಕ್ಟರ್ ಚಾಲಕನಿಗೆ ತಿಳಿಸಬೇಕು, ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ 2-3 ಜನ ಆಳು ಬಿಟ್ಟು ಕಂದಕಲ್ಲಿ ಬಿದ್ದಿರುವ ಮಣ್ಣನ್ನು ಎತ್ತಿಕೊಂಡು ಜಮೀನಿನಲ್ಲಿ ಹರಡಿಕೊಳ್ಳಬೇಕು. ಹೆಚ್ಚಾದ ನೀರು ಸುರಕ್ಷತವಾಗಿ ಹೊರಹೋಗಲು ಕಲ್ಲುಗಳಿಂದ / ಪೈಪ್ ಹಾಕಿ ದಾರಿ (ಕೋಡಿ) ಮಾಡಿಕೊಡಬೇಕು. ಈ ರೀತಿ ಎಲ್ಲರೂ ಮಾಡಿದರೆ, ಊರಿನಲ್ಲಿರುವ ಎಲ್ಲಾ ಬೋರುಗಳು ಮುಂದಿನ ವರ್ಷ ಚೆನ್ನಾಗಿ ನಡೆಯುತ್ತವೆ, ಇಲ್ಲದಿದ್ದರೆ ಮಳೆಗಾಲ ಮುಗಿದ 3-4 ತಿಂಗಳಿಗೆ ಟ್ಯಾಂಕರ್ ಅವಲಂಬನೆ ತಪ್ಪಿದ್ದಲ್ಲ, ಹಲವು ತೋಟಗಳು ಕಾಣೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…
ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…
ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…
ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…
2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…
ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…