ನಿಜ…, ಅಡಿಕೆ ಹಾಳೆ ತಟ್ಟೆಗೂ ಈ ಎಲೆಚುಕ್ಕಿಶಿಲೀಂದ್ರಕ್ಕೆ ಸಿಂಪಡಣೆ ಮಾಡುವ ಔಷಧಕ್ಕೂ ಯಾವುದೇ ಸಂಬಂಧವಿಲ್ಲ.
ಏಕೆಂದರೆ ಅಡಿಕೆ ಹಾಳೆ ತಟ್ಟೆ ತಯಾರಕರು ಅಡಿಕೆ ಹಾಳೆಯನ್ನು ಬಯಲು ಸೀಮೆಯ ಅಡಿಕೆ ತೋಟದಿಂದ ಆಮದು ಮಾಡಿ ಕೊಳ್ಳುತ್ತಾರೆ. ಅಲ್ಲಿನ ಹಾಳೆ ಸ್ವಚ್ಛ, ಶುಭ್ರ, ಫಂಗಸ್ ರಹಿತ (ಮಳೆ ಕಡಿಮೆ ಕಾರಣಕ್ಕೆ ಅಲ್ಲಿನ ಹಾಳೆಯಲ್ಲಿ ಫಂಗಸ್ ಇರೋಲ್ಲ) , ತೆಳು ಗಾತ್ರ ಮತ್ತು ಬಯಲು ಸೀಮೆಯ ಅಡಿಕೆ ಬೆಳೆ ಪ್ರದೇಶದಲ್ಲಿ ಅಡಿಕೆ ಹಾಳೆ ಯನ್ನು ಸಂಗ್ರಹಿಸಿ ಕ್ಯಾಂಟರ್ ನಲ್ಲಿ ತುಂಬಿ ಹಾಳೆ ತಟ್ಟೆ ತಯಾರಿಕಾ ಸಂಸ್ಥೆಗಳಿಗೆ ಒದಗಿಸುವ ವ್ಯವಸ್ಥೆ ಇದೆ.
ಇದೆಲ್ಲಾ ಕಾರಣಕ್ಕೆ ಮಲೆನಾಡು ಕರಾವಳಿಯ ಅಡಿಕೆ ಹಾಳೆ ತಟ್ಟೆ ಅಡಿಕೆ ಹಾಳೆ ಕಚ್ಚಾ ವಸ್ತುಗಳಿಗಾಗಿ ತಯಾರಕರು ಸ್ಥಳೀಯ ಅಡಿಕೆ ತೋಟಕ್ಕೆ ನೆಚ್ಚಿಕೊಂಡಿಲ್ಲ. ಅಡಿಕೆ ಹಾಳೆ ತಟ್ಟೆ ತಯಾರಿಸುವಾಗ ಅಡಿಕೆ ಹಾಳೆಯನ್ನು ಹೈ ಕಂಪ್ರೆಷರ್ ವಾಟರ್ ವಾಷ್ ಯಂತ್ರ ದಲ್ಲಿ ಚೆನ್ನಾಗಿ ತೊಳೆಯುತ್ತಾರೆ.
ಈ ಹಾಳೆ ತಟ್ಟೆ ತಯಾರಾಗಲು ಅತ್ಯಂತ ಹೆಚ್ಚಿನ ಉಷ್ಣತೆ ಯ ಡೈ ನಲ್ಲಿ ಕಾದು ಹಾಳೆ ತಟ್ಟೆ ಆಕಾರಕ್ಕೆ ಆಗುತ್ತದೆ.
ಒಂದು ವೇಳೆ ಈ ಹಾಳೆಯಲ್ಲಿ ಈ ಯಾವುದೇ ಶಿಲೀಂದ್ರ ವೂ ಅದಕ್ಕೆ ಔಷಧ ಸಿಂಪಡಣೆ ಮಾಡಿದ್ದರೂ ಸುಟ್ಟು ಹೋಗಿರುತ್ತದೆ…ಈ ಬಗ್ಗೆ ಗ್ರಾಹಕರು ಭಯ ಪಡುವುದು ಬೇಡ ಮತ್ತು ಅಡಿಕೆ ತೋಟಕ್ಕೆ ಎಲೆಚುಕ್ಕಿ ಬಾಧಿತವಾಗಿದ್ದರೆ ಅಂತಹ ತೋಟದಲ್ಲಿ ಉತ್ತಮ ಹಾಳೆಯೂ ದೊರೆಯದು.
ಅಡಿಕೆ ಹಾಳೆತಟ್ಟೆ ತಯಾರಿಸುವಾಗ ಉಳಿದ ಅಡಿಕೆ ಹಾಳೆ ಚೂರನ್ನು ಪುಡಿ ಮಾಡಿ ಜಾನುವಾರುಗಳಿಗೆ ಮೇವಾಗಿಯೂ ಬಳಸಲಡ್ಡಿಯಿಲ್ಲ ಮತ್ತು ಅಡಿಕೆ ಹಾಳೆ ತಟ್ಟೆ ಉದ್ಯಮದ ಮಾಲಿಕರು ಕಡ್ಡಾಯವಾಗಿ ತಮ್ಮ ಉದ್ಯಮಕ್ಕೆ ಬರುವ ಕಚ್ಚಾ ವಸ್ತುಗಳ ಗುಣಮಟ್ಟದ ಬಗ್ಗೆ ಗಮನಹರಿಸಬೇಕಿದೆ.
ಅಡಿಕೆ ಹಾಳೆ ತಟ್ಟೆ ಉದ್ಯಮ ಕ್ಕೆ ಈಗಿರುವ ಮತ್ತು ಭವಿಷ್ಯದ ಮಾರುಕಟ್ಟೆ ಮತ್ತಷ್ಟು ಉಜ್ವಲವಾಗಲಿ. ಪರಿಸರಕ್ಕೆ ಈ ಹಾಳೆ ತಟ್ಟೆ ಯಿಂದ ಬಹಳ ದೊಡ್ಡ ಕೊಡುಗೆ ಇದೆ. ಈ ಉದ್ಯಮ ಚೆನ್ನಾಗಿ ಮುಂದುವರೆಯಲಿ…
ವಿದೇಶಕ್ಕೆ ರಫ್ತು ಮಾಡುವ ಹಾಳೆ ಉತ್ಪನ್ನ ಗಳ ತಯಾರಕರೂ ಈ ಗುಣಮಟ್ಟದ ಬಗ್ಗೆ ಗಮನ ಹರಿಸುವುದು ಭವಿಷ್ಯದ ದೃಷ್ಟಿಯಿಂದ ಆರೋಗ್ಯಕರ. ಯಾವುದೇ ಕಾರಣಕ್ಕೂ ಅಡಿಕೆ ಎಲೆಚುಕ್ಕಿ ರೋಗದ ಕರಿನೆರಳು ಅಡಿಕೆ ಹಾಳೆ ತಟ್ಟೆ ಉದ್ಯಮದ ಮೇಲೆ ಬೀಳದಿರಲಿ.
ಅಕ್ರಮವಾಗಿ ಸುಮಾರು 68 ಟನ್ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490
ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…