Advertisement
MIRROR FOCUS

ಹೋಗೋಣ ಬನ್ನಿ ಮಧುವನಕ್ಕೆ | ಕೃಷಿಯ ಜೊತೆಗೆ ಬದಲಾವಣೆಗೊಂದು ದಾರಿ….

Share

ಮಲೆನಾಡಿನ(Malenadu) ಕೃಷಿಯಲ್ಲಿ(Agriculture) ದಿನಕ್ಕೊಂದು ಸಮಸ್ಯೆಗಳು ಎದುರಿಸುತ್ತಿದ್ದೇವೆ. ಇದು ದಿನ, ದಿನ ಹೆಚ್ಚಾಗುತ್ತಿದೆ. ಇವುಗಳ ನಡುವೆ ರೈತರಿಗೊಂದು(Farmer) ಸಂತೋಷದ ವಿಷಯ ಇಲ್ಲಿದೆ. ಮಾರುಕಟ್ಟೆಯಲ್ಲಿ(Market) ಸಿಗುವ ಕಲಬೆರಿಕೆ ಜೇನುತುಪ್ಪ(Blended honey) ಎಂತಹ ಅಪಾಯಕಾರಿ ಎಂದು ತಿಳಿದವರಿಗೆ ಗೊತ್ತು. ಇದಕ್ಕೊಂದು ಕಡಿವಾಣ ಹಾಕಬೇಕು ಎಂದು ಮನಗಂಡು ಮೊದಲಿನಿಂದಲೂ ಜೇನು ಕೃಷಿಯ(Bee farming) ಬಗ್ಗೆ ಅಪಾರ ಆಸಕ್ತಿ ಇರುವ ಒಂದೇ ಮನಸ್ಥಿತಿಯ ಯುವಕರು ಒಟ್ಟಾಗಿ ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಪ್ರಾರಂಭಿಸಿದ್ದಾರೆ.

Advertisement
Advertisement
Advertisement

ಜೇನು ಕೃಷಿ: Gaav Naturels ಎಂಬ ಹೆಸರಿನೊಂದಿಗೆ 2014ರಲ್ಲಿ ಗಣೇಶ್ ಹಾಗೂ ಅರುಣ್ ಎಂಬುವವರ ಕನಸಿನ ಕೂಸು ಇದಾಗಿದೆ. ಮೂಲತಃ ತೀರ್ಥಹಳ್ಳಿಯವರು ಇವರ ಜೊತೆಗೆ ವಿಶ್ರುತ್ ಹಾಗೂ ಆಶ್ರಿತ್ ಕೋಣಂದೂರು ಕೈಜೋಡಿಸಿದರು. ಎಲ್ಲರೂ ಉದ್ಯೋಗ ಆರಿಸಿ ಹೊರ ಊರಲ್ಲಿದ್ದು ನಾವು ಹುಟ್ಟಿದ ಊರಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂದು ಹಾಗೂ ರೈತರಿಗೂ ಹೊರೆಯಾಗದೆ ಅವರ ಜೀವನಕ್ಕೂ ಒಂದು ದಾರಿಯಾಗಬೇಕು. ಹಾಗೂ ಉತ್ತಮ ಗುಣಮಟ್ಟದ ಮೌಲ್ಯವರ್ಧನೆ ಮಾಡಿದ ಜೇನುತುಪ್ಪ ಮಾರುಕಟ್ಟೆಯಲ್ಲಿ ಸಿಗಬೇಕೆಂದು ಹೊರಟಂತಹ ಟೀಮ್ ಇವರದ್ದು. ಈ ಟೀಮ್ ಗೆ ಸಹಕಾರವಾಗಿ ನಿಂತವರು ಪವನ್, ಸೌಮ್ಯ ಪೂರ್ಣೇಶ್ ಚಿಕ್ಕಳೂರು, ಗೀತಾ, ಚಂದ್ರಶೇಖರ್, ಚರಣ್, ನವ್ಯಶ್ರೀ, ಮಂಜುನಾಥ್ ,ಸಲೀಂ, ನಿತಿನ್ ರವರು.

Advertisement

ನೀವು ಜೇನು ಕೃಷಿಕರಾಗಬೇಕೆ? ನನಗೆ ಆಸಕ್ತಿ ಇದೆ ಜೇನು ಕೃಷಿ ಮಾಡಲು ಆಗುತ್ತಿಲ್ಲ ಕೆಲಸದ ಒತ್ತಡದಿಂದ.,  ನಾವು ಮನೆಯಲ್ಲಿ ಹಿರಿಯರಾಗಿ ಇಬ್ಬರೇ ಇರುವುದು ಜೇನು ಕೃಷಿ ಮಾಡಲು ಆಸಕ್ತಿ ಇದೆ ಆದರೆ ಆಗುತ್ತಿಲ್ಲ.,  ನಾನು ಉದ್ಯೋಗ ನಿಮಿತ್ತ ಹೊರ ಊರಲ್ಲಿ ಇದ್ದೇನೆ .ಜೇನು ಕೃಷಿ ಬಗ್ಗೆ ಆಸಕ್ತಿ ಇದೆ. ಆದರೆ ಅದನ್ನು ಮಾಡಲು ಆಗುತ್ತಿಲ್ಲ ಊರಲ್ಲಿ ಜಮೀನಿನಲ್ಲಿ,  ತುಂಬಾ ಜಮೀನಿದೆ ಜೇನು ಕೃಷಿಯಿಂದ ಆದಾಯವು ಹೆಚ್ಚಾಗುತ್ತದೆ ಕೃಷಿಯಲ್ಲಿ ನಮಗೆ ಜೇನು ಕೃಷಿ ಮಾಡಲು ಆಗುತ್ತಿಲ್ಲ ಆಸಕ್ತಿ ಇದೆ., ನಮ್ಮ ಮನೆ ಪೇಟೆಯಲ್ಲಿ ಇರುವುದು. ಜೇನು ಕೃಷಿ ಮಾಡಬೇಕೆಂದು ಆಸಕ್ತಿ ಇದೆ .ಆದರೆ ಅದನ್ನು ತಂದು ಕೊಡುವವರು ಯಾರು ಅದನ್ನು ನಿರ್ವಹಣೆ ಮಾಡುವವರು ಯಾರು ಎಂಬ ಕಾರಣಗಳು.,  ನಮಗೆ ಕಲಬೆರಿಕೆ ರಹಿತ ಜೇನುತುಪ್ಪ ಬೇಕೆಂಬ ಆಸೆ. ಇಂತಹ ಅನೇಕ ಸಮಸ್ಯೆಗಳಿಗೆ ಇಲ್ಲಿದೆ ಉತ್ತರ:

Gaav Naturels ಜೇನು ಕೃಷಿಯ ವಿಶೇಷತೆ: ಜೇನು ಪೆಟ್ಟಿಗೆ, ಜೊತೆಗೆ ಜೇನು, ಜೇನು ಸ್ಟ್ಯಾಂಡ್ ಅನ್ನು ಡೋರ್ ಡೆಲಿವರಿ ಕೊಡುತ್ತಾರೆ. ಒಂದು ಜೇನು ಪೆಟ್ಟಿಗೆಗೆ 4600 ಚಾರ್ಜ್ ಮಾಡುತ್ತಾರೆ. ಜೊತೆಗೆ ಒಂದು ವರ್ಷ ಪ್ರತಿ ತಿಂಗಳು ಬಂದು ಸರ್ವಿಸ್ ಕೊಡುತ್ತಾರೆ. ಉತ್ತಮ ಗುಣಮಟ್ಟದ ಜೇನುಪೆಟ್ಟಿಗೆ ಸ್ಟ್ಯಾಂಡ್ ಸೂಪರ್ ಅಡಿಮಣೆ, ಸಂಸಾರ ಕೋಣೆ, ಇರುವೆ ಬರದ ಹಾಗೆ ವಾಟರ್ ಕಪ್ ಜೊತೆಗೆ ಜೇನನ್ನು ಕೂರಿಸಿ ಕೊಡುತ್ತಾರೆ. ಮಧ್ಯ ಎಲ್ಲಾದರೂ ಜೇನು ಬಿಟ್ಟು ಹೋದರೆ ಹೊಸದಾಗಿ ತಂದುಕೂರಿಸುತ್ತಾರೆ. ಇದು ಒಂದು ವರ್ಷದ ಒಂದು ಜೇನುಪೆಟ್ಟಿಗೆಗೆ ಇವರ ಸರ್ವಿಸ್.

Advertisement

ಒಂದು ವರ್ಷದ ನಂತರ: ಒಂದು ಬಾಕ್ಸಿಗೆ ತಿಂಗಳಿಗೆ 100 ರೂ ಚಾರ್ಜ್ ಮಾಡುತ್ತಾರೆ ಬಂದು ಹೋದರೆ. ಅದು ರೈತರಿಗೆ ಬಿಟ್ಟ ವಿಚಾರ. ನಾವೇ ಅದನ್ನು ನೋಡಿಕೊಳ್ಳುತ್ತೇವೆ ಎಂದರು ತೊಂದರೆ ಇಲ್ಲ. ಯಾರಿಗಾದರೂ ನೋಡಿಕೊಳ್ಳಲು ಕಲಿಸಿಕೊಡಿ ಎಂದರೆ ಅದನ್ನು ಕಲಿಸಿಕೊಡುತ್ತಾರೆ. ಇನ್ನೊಂದು ಇಲ್ಲಿ ಒಟ್ಟು ತುಪ್ಪದಲ್ಲಿ 30 ಪರ್ಸೆಂಟ್ ನಮಗೆ 70 ಪರ್ಸೆಂಟ್ ಅವರಿಗೆ ಈ ರೀತಿ ಮಾಡಲು ಇವರಲ್ಲಿ ಅವಕಾಶ ಲಭ್ಯವಿದೆ ಒಂದು ವರ್ಷದ ನಂತರ.

ಇದುವರೆಗೆ 2500 ಜೇನು ಪೆಟ್ಟಿಗೆಯನ್ನು ಕೊಟ್ಟು ಇವರ ತಂಡ ಅದನ್ನು ನಿರ್ವಹಿಸುತ್ತಿದೆ. ಈ ತಂಡದಲ್ಲಿ ಒಟ್ಟು 12 ಜನ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಸುಮಾರು 10 ಟನ್ ಜೇನುತುಪ್ಪ ಇವರ ನಿರೀಕ್ಷೆಯಲ್ಲಿ ಇದೆ.

Advertisement

ಸಂಸ್ಕರಿಸಿದ ಜೇನುತುಪ್ಪ ಇವರೇ ಬೇಕಾದರೂ ತೆಗೆದುಕೊಳ್ಳುತ್ತಾರೆ. ಒಂದು ವರ್ಷಕ್ಕೆ ಒಂದು ಜೇನುಪೆಟ್ಟಿಗೆಯಲ್ಲಿ ಆರರಿಂದ ಹತ್ತು ಕೆಜಿ ಜೇನುತುಪ್ಪ ಸಿಗುತ್ತದೆ. ಮಾರುಕಟ್ಟೆಯಲ್ಲಿ ಶುದ್ಧವಾದ ಜೇನುತುಪ್ಪಕ್ಕೆ1 ಕೆಜಿಗೆ 800 ರಿಂದ 1000 ತನಕ ಇದೆ. ನಮಗೆ ಮಾರಾಟ ಮಾಡಲು ಆಗದಿದ್ದರೆ ಇವರೇ ಮಾರುಕಟ್ಟೆಯ ಬೆಲೆಗೆ ಇವರೆ ತೆಗೆದುಕೊಳ್ಳುತ್ತಾರೆ. ಕೃಷಿಯಲ್ಲಿ ಬದಲಾವಣೆ ಬೇಕಾಗಿದೆ ಒಂದು ವಿಶೇಷ ರೀತಿಯಲ್ಲಿ ತನ್ನ ಸಂಸ್ಥೆಯು ಬೆಳೆಯುವುದರ ಜೊತೆಗೆ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ.
ಆಸಕ್ತರು ಸಂಪರ್ಕಿಸಬಹುದು.  9480978092,  7349417739,  9980179769

ಬರಹ :
ಭರತ್ ರಾಜ್ , ಕೆರೆಮನೆ, ಶೃಂಗೇರಿ.

This is the brainchild of Ganesh and Arun in 2014 with the name Gaav Naturels. Originally, Vishruth and Ashrit Konandur joined hands with Theerthahalli. Everyone has chosen a job and is in a foreign town to achieve something in the town where we were born and it should be a way for farmers to live without burdening them. Also, they have a team that wants to get high quality value added honey in the market.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಾವಯವ ಕೃಷಿ ಎಂದರೆ ಏನು..?

https://youtu.be/VwddfpkQ94Y?si=LMz9u08OYbG4B2il

6 hours ago

ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |

ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…

6 hours ago

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…

1 day ago

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ

ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…

1 day ago

ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |

ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…

1 day ago