ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|

March 18, 2025
9:52 PM
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಟಾರ್ ಲೈನ್ ಸ್ಪೇಸ್ ಕ್ರಾಫ್ಟ್ ಮೂಲಕ ಕೇವಲ ಎಂಟು ದಿನಗಳ ಪರೀಕ್ಷಾರ್ಥ ಕಾರ್ಯಕ್ಕೆ ಹಾರಿ ಹೋದ ಸುನಿತಾ ಮತ್ತು ವಿಲ್ಮೋರ್ ಸ್ಪೆಸ್ ಕ್ರಾಫ್ಟ್ ನಲ್ಲಿ ಹೀಲಿಯಂ ಇಂಧನದ ಸೋರುವಿಕೆಯಿಂದ ಸಂಭವಿಸಬಹುದಾದ ಅಪಾಯದ ಮುನ್ನೆಚ್ಚರಿಕೆಯ ಕಾರಣ ಹಿಂದಿರುಗಿ ಬರಲಾರದೆ ಬಾಹ್ಯಾಕಾಶ ನಿಲ್ದಾಣದಲ್ಲೇ ಜೀವವನ್ನು ಕೈಯಲ್ಲಿ ಹಿಡಿದು ಕ್ಷಣ ಕ್ಷಣಗಳನ್ನೂ ಕಳೆದದ್ದು ಇತಿಹಾಸ.

ಬಾಹ್ಯಾಕಾಶವನ್ನು ರಾತ್ರಿ ಹಾಗೆಯೇ ಒಂದೊಮ್ಮೆ ಕಣ್ಣು ತಲುಪುವ ವರೆಗೂ ವೀಕ್ಷಿಸುತ್ತಾ ಕುಳಿತಾಗ ಎಷ್ಟೊಂದು ಬೆಳಕಿನ ಪುಂಜಗಳು ಮಿನುಗುತ್ತಾ ಜಗಮಗಿಸುತ್ತಾ ಇರುವುದನ್ನು ನೋಡುತ್ತಾ ಈ ಬ್ರಹ್ಮಾಂಡದ ಶಕ್ತಿಯನ್ನು, ವಿಸ್ತಾರವನ್ನು ಮನದಲ್ಲೇ ಕಲ್ಪಿಸಿಕೊಳ್ಳಬಹುದೇ….………ಮುಂದೆ ಓದಿ……..

Advertisement

ನಮ್ಮ ಕಲ್ಪನೆ ಕೇವಲ ಬಿಂದುವಿನೊಳಗಿನ ಬಿಂದುವಿಗಿಂತಲೂ ಕಡಿಮೆ ಎನ್ನಬಹುದು. ಈ ಆಕಾಶ ಎಂಬ ಅನಂತದಲ್ಲಿ ಎಷ್ಟೋ ಆಕಾಶಗಂಗೆಗಳಿವೆಯಂತೆ , ಅದರಲ್ಲಿ ಎಷ್ಟೋ ಕ್ಷೀರಪಥಗಳು, ಈ ಕ್ಷೀರಪಥಗಳಲ್ಲಿ ಭೂಮಂಡಲದಂತಹ ಎಷ್ಟೋ ಎಷ್ಟೋ ಮಂಡಲಗಳು…. ಕಲ್ಪನಾತೀತವಲ್ಲವೇ… ಹೌದು…ಈ ಲೋಕಗಳ ದೂರದ ಅಳತೆ ಬೆಳಕಿನ ವೇಗದಲ್ಲಿ…ಅಂದರೆ ಬೆಳಕು ಸೆಕುಂಡಿಗೆ ಮೂರು ಲಕ್ಷ ಕಿಮೀ ವೇಗದಲ್ಲಿ ಸಾಗುವುದಂತೆ, ಅಂದರೆ ಗಂಟೆಗೆ ಬೆಳಕಿನ ವೇಗ ಎಷ್ಟು ಎಂದು ಲೆಕ್ಕಿಸಿದರೆ…. ಮೂರುಲಕ್ಷ ಗುಣಿಸು ಅರುವತ್ತು ಗುಣಿಸು ಅರುವತ್ತು ಅಂದರೆ ಒಂದು ಗಂಟೆಗೆ ಬೆಳಕು ಚಲಿಸುವ ದೂರ….ಆಕಾಶಗಂಗೆಯ ಒಂದು ಮೂಲೆಗೆ ತಲುಪಲು ಈ ಬೆಳಕಿನ ವೇಗದಲ್ಲಿ ಎಷ್ಟೋ ನೂರು, ಸಾವಿರ ವರ್ಷಗಳ ಪಯಣ ಬೇಕಂತೆ , ….ಕಲ್ಪನಾತೀತವಲ್ಲವೇ….

ಇದೇ ಕಲ್ಪನಾತೀತವೇ ದೇವರು ಎಂದು ನಮ್ಮಂತಹ ಸಾಮಾನ್ಯ ಜನ ಶರಣೆನ್ನುವುದು. ಇಂತಹ ಮಹಾನತೆಯನ್ನೇ, ಕಣ್ಣಿಗೆ, ಮನಸ್ಸಿಗೆ ನಿಲುಕದ್ದನ್ನು ನಮ್ಮ ಪೂರ್ವಿಕರು, ಋಷಿ ಮುನಿಗಳು ,ದಾರ್ಶನಿಕರು ದೇವರು ಎಂದು ನಿಯಮಿಸಿದರು. ಅಂತೆಯೇ…

ನಮೋಸ್ತ್ವನಂತಾಯ
ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿ ಶಿರೋರುಬಾಹವೇ
ಸಹಸ್ರನಾಮ್ನೇ ಪುರುಷಾಯ
ಶಾಶ್ವತೇ ಸಹಸ್ರ ಕೋಟಿ
ಯುಗಧಾರಿಣೇ ನಮಃ ….

ಎಂದದ್ದು…. ಸಾಮಾನ್ಯರಾದ ನಾವು ಇಷ್ಟನ್ನು ತಿಳಿದರೆ ಸಾಕಲ್ಲವೇ…..

ಈ ಜಗನ್ನಿಯಮದ ಹಿನ್ನೆಲೆ ಮುನ್ನೆಲೆ ಕಂಡುಕೊಳ್ಳಲು ಈ ವಿಜ್ಞಾನಿಗಳು ಒಂದು ಬಿಂದುವಿನಷ್ಟು ಮೇಲೇರಿ ಕೊರಳುದ್ದ ಮಾಡಿನೋಡುವ ತಾಣವೇ ಸ್ಪೇಸ್ ಸ್ಟೇಷನ್….

ಹೌದು, ಸುನಿತಾ ವಿಲಿಯಂ ಮತ್ತು ವಿಲ್ಮೋರ್ ನಭೋಮಂಡಲಕ್ಕೆ ಇಣುಕುನೋಟ ಮಾಡುವುದಕ್ಕೋಸ್ಕರ ಬಾಹ್ಯಾಕಾಶದಲ್ಲಿ ಸ್ಥಾಪಿತ ಸ್ಪೇಸ್ ಸ್ಟೇಷನತ್ತ ಹಾರಿ, ಏರಿ ಸಿಲುಕಿಕೊಂಡಿದ್ದಾರೆ. ಜೀವವೆಂಬ ಜೀವವನ್ನು ಹಿಡಿದಿಟ್ಟುಕೊಂಡಿದ್ದಾರೆ.ಅಂತಹ ಮಹಾತಾಯಿಗಾಗಿ ನಮ್ಮೆಲ್ಲರ ಪ್ರಾರ್ಥನೆ ಬೇಕೇಬೇಕಿದೆಯಲ್ಲವೇ…

ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಟಾರ್ ಲೈನ್ ಸ್ಪೇಸ್ ಕ್ರಾಫ್ಟ್ ಮೂಲಕ ಕೇವಲ ಎಂಟು ದಿನಗಳ ಪರೀಕ್ಷಾರ್ಥ ಕಾರ್ಯಕ್ಕೆ ಹಾರಿ ಹೋದ ಸುನಿತಾ ಮತ್ತು ವಿಲ್ಮೋರ್ ಸ್ಪೆಸ್ ಕ್ರಾಫ್ಟ್ ನಲ್ಲಿ ಹೀಲಿಯಂ ಇಂಧನದ ಸೋರುವಿಕೆಯಿಂದ ಸಂಭವಿಸಬಹುದಾದ ಅಪಾಯದ ಮುನ್ನೆಚ್ಚರಿಕೆಯ ಕಾರಣ ಹಿಂದಿರುಗಿ ಬರಲಾರದೆ ಬಾಹ್ಯಾಕಾಶ ನಿಲ್ದಾಣದಲ್ಲೇ ಜೀವವನ್ನು ಕೈಯಲ್ಲಿ ಹಿಡಿದು ಕ್ಷಣ ಕ್ಷಣಗಳನ್ನೂ ಕಳೆದದ್ದು ಇತಿಹಾಸ.

ಹಾಗಿದ್ದರೆ ಈ ಸ್ಪೆಸ್ ಸ್ಟೇಷನ್ ಅಂದರೆ ಏನು. ಇದು 1998 ರಲ್ಲಿ ಅಮೆರಿಕ, ರಷ್ಯಾ, ಜಪಾನ್, ಕೆನಡ ಮುಂತಾದ ದೇಶಗಳು ಸೇರಿ ನೆಲದಿಂದ ನಾನ್ನೂರ ಎಂಟು ಕಿಮೀ ದೂರದಲ್ಲಿ ಆಕಾಶದಲ್ಲಿ ನಿರ್ಮಿಸಿದಂತಹ ನಿಲ್ದಾಣ. ಇದರ ವಿಸ್ತೀರ್ಣ ಎಷ್ಟು ಎಂದು ತಿಳಿದರೆ ಆಶ್ಚರ್ಯವಾಗುತ್ತದೆ, ನಾಲ್ಕೂವರೆ ಲಕ್ಷ ಕೆಜಿ ತೂಕದ 35್8239 ಅಡಿ ವಿಸ್ತಾರದ,ಅಂದರೆ ಸುಮಾರು ಎರಡು ಎಕರೆ ಪ್ರದೇಶವಂತೆ. ಇಲ್ಲಿಗೆ ತಲುಪಲು ರಾಕೆಟ್ ಗೆ 28 ಗಂಟೆ ಬೇಕಂತೆ. ಅಂದರೆ ರಾಕೆಟು ಭೂಮಿಯ ಕಕ್ಷೆಯಿಂದ ಹೊರದಾಟಲು ಸೆಕುಂಡಿಗೆ 7.9 ಕಿಮೀ ವೇಗ ಬೇಕಂತೆ. ಅಂದರೆ ನಿಮಿಷಕ್ಕೆ 480 ಕಿಮೀ ವೇಗ, ಉಹಿಸಲೂ ಕಷ್ಟವಾಗುತ್ತಿದೆಯಲ್ಲವೇ….

ಹಾಗಿದ್ದರೆ ಈ ಬಾಹ್ಯಾಕಾಶ ನಿಲ್ದಾಣವನ್ನು‌ ಈ ಸ್ಪೆಸ್ ಕ್ರಾಫ್ಟ್ ಒಂದು ನಿಮಿಷದಲ್ಲೇ ಮುಟ್ಟಬಹುದಲ್ಲಾ….ಇಲ್ಲ…ಬಾಹ್ಯಾಕಾಶ ನಿಲ್ದಾಣ ಗಂಟೆಗೆ 27600 ಕಿಮೀ ವೇಗದಲ್ಲಿ ಭೂಮಿಗೆ ಪರಿಭ್ರಮಣ ‌ಮಾಡುತ್ತಿದೆಯಂತೆ….92 ನಿಮಿಷಗಳಲ್ಲಿ ಭೂಮಿಯನ್ನೊಂದು ಸುತ್ತು ಬರುತ್ತದಂತೆ….

ವಿಜ್ಞಾನವೇ (ಇರುವುದನ್ನೇ ಕಂಡುಕೊಳ್ಳುವುದು ವಿಜ್ಞಾನ ಅಷ್ಟೇ) ಇಷ್ಟು ವೇಗದಲ್ಲಿ ಸುತ್ತು ಬರುತ್ತಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್ ಕ್ರಾಫ್ಟ್ ತನ್ನ ವೇಗವನ್ನೂ ಸರಿಯಾಗಿಸಿಕೊಂಡು ಸೇರಬೇಕಿದೆ…. ಇದಕ್ಕಾಗಿ 28 ಗಂಟೆಗಳ ಮಹಾನ್ ವೇಗದ ಪಯಣ ಬೇಕಾಗುವುದು. ಅಂತಹ ಸ್ಪೇಸ್ ಸ್ಟೇಷನಿಗೆ Crew 10 NASA Space X Dragon ಈಗಾಗಲೇ ತಲುಪಿ ಸೇರಿಕೊಂಡಿದೆ. ಇಷ್ಟರ ತನಕದ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ. ಇನ್ನು ಸುನಿತಾ ಮತ್ತು ವಿಲ್ಮೋರರನ್ನು ಈ ನಾಸಾದ ಸ್ಪೇಸ್  ಡ್ರಾಗನ್ ನಲ್ಲಿ ತಾಯ್ನೆಲಕ್ಕೆ ಕರೆತರುವುದೊಂದೇ ಬಾಕಿ…ಎಲ್ಲವೂ ಸರಿಯಾಗಿ ನಡೆದರೆ ಕೊಲಂಬಿಯಾ ಉಡಾವಣಾ ಕ್ಷೇತ್ರದಲ್ಲಿ 19 ನೇ ತಾರೀಕಿನಂದು ಸುನಿತಾ, ವಿಲ್ಮೋರರು ಇರುತ್ತಾರೆ, ಅಂತಹ ಕಾರ್ಯ ಸಿದ್ದಿಸಲಿ‌, ತಾಯ್ನೆಲಕ್ಕೆ ಮುಟ್ಟಿ ನಮ್ಮಂತೆಯೇ ಅವರು ಮುಂದಿನ ಜೀವನ ನಡೆಸುವಂತಾಗಲೆಂದು ಪ್ರಾರ್ಥಿಸೋಣವಲ್ಲವೇ.

ಬರಹ :
ಸುರೇಶ್ಚಂದ್ರ ತೊಟ್ಟೆತ್ತೋಡಿ.
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?
May 6, 2025
7:44 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |
May 6, 2025
7:18 AM
by: ದ ರೂರಲ್ ಮಿರರ್.ಕಾಂ
ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ
May 6, 2025
7:02 AM
by: The Rural Mirror ಸುದ್ದಿಜಾಲ
ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ
May 5, 2025
10:56 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group