ಲೈನ್‌ ಮ್ಯಾನ್‌ ದಾಖಲೆ ತೋರಿಸದ್ದಕ್ಕೆ ಪೊಲೀಸರಿಂದ ದಂಡ…! | ಮೀಟರ್‌ ಅಳವಡಿಸದ್ದಕ್ಕೆ ವಿದ್ಯುತ್‌ ಕಡಿತ..! |

June 13, 2022
10:31 AM

ಕಾನೂನು ಸಾಕಷ್ಟು ಇದೆ. ಆದರೆ ಕಾನೂನಿನ ಇತಿಮಿತಿಯೊಳಗೆ ಜನಪರವಾದ ಕೆಲಸಗಳು ನಡೆಯಬೇಕು. ಕೆಲವೊಮ್ಮೆ ಜನಪರ ಕೆಲಸ ಮಾಡುವ ವೇಳೆ ಕಾನೂನೂ ಕೊಂಚ ಸಡಿಲವಾಗಬೇಕು. ಇಲ್ಲದೇ ಇದ್ದರೆ ಸಂಕಷ್ಟಗಳು ಮುಗಿಯದು. ಇದಕ್ಕೊಂದು ಉದಾಹರಣೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸ್ಥಳದಲ್ಲಿ ದಾಖಲೆ ತೋರಿಸದ್ದಕ್ಕೆ  ಪೊಲೀಸರು ಲೈನ್‌ ಮ್ಯಾನ್‌ ಗೆ ದಂಡ ಹಾಕಿದರು. ಪೊಲೀಸ್‌ ಠಾಣೆಯಲ್ಲಿ ಮೀಟರ್‌ ಅಳವಡಿಸಿದೆ ವಿದ್ಯುತ್‌ ಬಳಕೆ ಮಾಡುವುದಕ್ಕೆ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದು ಲೈನ್‌ ಮ್ಯಾನ್…!.‌ ಎರಡೂ ಕಾನೂನು ಪ್ರಕಾರ ಸರಿಯಾಗಿದೆ…!

ಉತ್ತರಪ್ರದೇಶ ಪೊಲೀಸರ ಮೇಲಿನ ಕೋಪದಿಂದ ಲೈನ್​ಮ್ಯಾನ್​ ಓರ್ವ ಠಾಣೆಯ ವಿದ್ಯುತ್​ ಸಂಪರ್ಕವನ್ನೇ ಕಡಿತಗೊಳಿಸಿರುವ ಘಟನೆ ಉತ್ತರಪ್ರದೇಶದ ಹರ್ದಸ್​ಪುರ್ ಪೊಲೀಸ್ ಠಾಣೆಯಲ್ಲಿ‌ ನಡೆದಿದೆ. ಬರೇಲಿಯ ಲೈನ್‌ಮ್ಯಾನ್ ಭಗವಾನ್​ ಸ್ವರೂಪ್ ಈ ಕೆಲಸ ಮಾಡಿದಾತ. ಶನಿವಾರ ತಪಾಸಣೆಯಲ್ಲಿದ್ದ ಪೊಲೀಸರು ಒಬ್ಬರು ಭಗವಾನ್‌ ದಾಸ್‌ ಅವರ ಬೈಕ್ ಅಡ್ಡಗಟ್ಟಿದ್ದರು. ಆಗ ದಾಖಲೆ ಕೇಳಿದ್ದಕ್ಕೆ ಕೊಡಲು ವಿಫಲನಾದ ಲೈನ್​ಮ್ಯಾನ್​ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು. ಇದರಿಂದ ತೀವ್ರ ಬೇಸರಗೊಂಡ ಲೈನ್​ಮ್ಯಾನ್​, ತನಗೆ ಗೊತ್ತಿರುವ ಸಿಬ್ಬಂದಿಗೆ ಹೇಳಿಸಿ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಲೈನ್​ಮ್ಯಾನ್​, ಠಾಣೆ ವಿದ್ಯುತ್ ಸಂಪರ್ಕವಿದ್ದರೂ ಮೀಟರ್ ಇರಲಿಲ್ಲ, ಹೀಗಾಗಿ ಅದು ಕಾನೂನುಬಾಹಿರ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೇನೆ ಎಂದು ಹೇಳಿದ್ದಾರೆ.

ಐಎಎನ್‌ಎಸ್ ವರದಿಯ ಪ್ರಕಾರ, ಬರೇಲಿಯ ಲೈನ್‌ಮ್ಯಾನ್ ಭಗವಾನ್ ಸ್ವರೂಪ್ ಅವರು ಹರ್ದಾಸ್‌ಪುರ ಪೊಲೀಸ್ ಠಾಣೆಯ ವಿದ್ಯುತ್ ಸರಬರಾಜನ್ನು ಶನಿವಾರ ಸ್ಥಗಿತಗೊಳಿಸಿದ್ದಾರೆ. ಮೋದಿ ಸಿಂಗ್ ಎಂಬ ಅಧಿಕಾರಿಯೊಬ್ಬರು ಈ ಹಿಂದೆಯೂ ಕೂಡಾ ಚೆಕ್‌ಪಾಯಿಂಟ್‌ನಲ್ಲಿ ನಿಲ್ಲಿಸಿ ದಾಖಲೆ ಕೇಳಿದರು. ತಕ್ಷಣಕ್ಕೆ ಇಲ್ಲ, ಮನೆಗೆ ಹೋಗಿ ತಂದುಕೊಡುತ್ತೇನೆ ಎಂದರೂ ಕೇಳದ ಅಧಿಕಾರಿಗಳು ದಂಡ ಹಾಕಿದರು. ಲೈನ್‌ ಮ್ಯಾನ್‌ ಆದ ಕಾರಣ ಎಲ್ಲಾ ದಾಖಲೆ ವಾಹನದಲ್ಲಿ ಇಡಲು ಸಾಧ್ಯವಿಲ್ಲ ಎಂದರೂ ಅಧಿಕಾರಿಗಳು ಕೇಳಲಿಲ್ಲ, ಕಾನೂನು ಪಾಲನೆ ಎಂದರು. ಇದರಿಂದ ಬೇಸರಗೊಂಡ ಲೈನ್‌ ಮ್ಯಾನ್‌ ತನ್ನ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಠಾಣೆಯ ವಿದ್ಯುತ್‌ ಕಡಿತಗೊಳಿಸಿದನು. ಈ ಬಗ್ಗೆ ಪ್ರಶ್ನಿಸಿದಾಗ ಕಾನೂನುಬಾಹಿರವಾಗಿ ವಿದ್ಯುತ್ ಬಳಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದನು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?
August 22, 2026
10:25 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ
ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror