ಕಾನೂನು ಸಾಕಷ್ಟು ಇದೆ. ಆದರೆ ಕಾನೂನಿನ ಇತಿಮಿತಿಯೊಳಗೆ ಜನಪರವಾದ ಕೆಲಸಗಳು ನಡೆಯಬೇಕು. ಕೆಲವೊಮ್ಮೆ ಜನಪರ ಕೆಲಸ ಮಾಡುವ ವೇಳೆ ಕಾನೂನೂ ಕೊಂಚ ಸಡಿಲವಾಗಬೇಕು. ಇಲ್ಲದೇ ಇದ್ದರೆ ಸಂಕಷ್ಟಗಳು ಮುಗಿಯದು. ಇದಕ್ಕೊಂದು ಉದಾಹರಣೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸ್ಥಳದಲ್ಲಿ ದಾಖಲೆ ತೋರಿಸದ್ದಕ್ಕೆ ಪೊಲೀಸರು ಲೈನ್ ಮ್ಯಾನ್ ಗೆ ದಂಡ ಹಾಕಿದರು. ಪೊಲೀಸ್ ಠಾಣೆಯಲ್ಲಿ ಮೀಟರ್ ಅಳವಡಿಸಿದೆ ವಿದ್ಯುತ್ ಬಳಕೆ ಮಾಡುವುದಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು ಲೈನ್ ಮ್ಯಾನ್…!. ಎರಡೂ ಕಾನೂನು ಪ್ರಕಾರ ಸರಿಯಾಗಿದೆ…!
ಉತ್ತರಪ್ರದೇಶ ಪೊಲೀಸರ ಮೇಲಿನ ಕೋಪದಿಂದ ಲೈನ್‌ಮ್ಯಾನ್ ಓರ್ವ ಠಾಣೆಯ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿರುವ ಘಟನೆ ಉತ್ತರಪ್ರದೇಶದ ಹರ್ದಸ್ಪುರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಬರೇಲಿಯ ಲೈನ್‌ಮ್ಯಾನ್ ಭಗವಾನ್ ಸ್ವರೂಪ್ ಈ ಕೆಲಸ ಮಾಡಿದಾತ. ಶನಿವಾರ ತಪಾಸಣೆಯಲ್ಲಿದ್ದ ಪೊಲೀಸರು ಒಬ್ಬರು ಭಗವಾನ್ ದಾಸ್ ಅವರ ಬೈಕ್ ಅಡ್ಡಗಟ್ಟಿದ್ದರು. ಆಗ ದಾಖಲೆ ಕೇಳಿದ್ದಕ್ಕೆ ಕೊಡಲು ವಿಫಲನಾದ ಲೈನ್‌ಮ್ಯಾನ್ ಮನೆಗೆ ಹೋಗಿ ತರುವುದಾಗಿ ಹೇಳಿದ್ದರೂ ಕೇಳದ ಪೊಲೀಸರು 500 ರೂ. ದಂಡ ವಿಧಿಸಿದ್ದರು. ಇದರಿಂದ ತೀವ್ರ ಬೇಸರಗೊಂಡ ಲೈನ್‌ಮ್ಯಾನ್, ತನಗೆ ಗೊತ್ತಿರುವ ಸಿಬ್ಬಂದಿಗೆ ಹೇಳಿಸಿ ಠಾಣೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಲೈನ್‌ಮ್ಯಾನ್, ಠಾಣೆ ವಿದ್ಯುತ್ ಸಂಪರ್ಕವಿದ್ದರೂ ಮೀಟರ್ ಇರಲಿಲ್ಲ, ಹೀಗಾಗಿ ಅದು ಕಾನೂನುಬಾಹಿರ ಎಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದೇನೆ ಎಂದು ಹೇಳಿದ್ದಾರೆ.
ಐಎಎನ್‌ಎಸ್ ವರದಿಯ ಪ್ರಕಾರ, ಬರೇಲಿಯ ಲೈನ್‌ಮ್ಯಾನ್ ಭಗವಾನ್ ಸ್ವರೂಪ್ ಅವರು ಹರ್ದಾಸ್‌ಪುರ ಪೊಲೀಸ್ ಠಾಣೆಯ ವಿದ್ಯುತ್ ಸರಬರಾಜನ್ನು ಶನಿವಾರ ಸ್ಥಗಿತಗೊಳಿಸಿದ್ದಾರೆ. ಮೋದಿ ಸಿಂಗ್ ಎಂಬ ಅಧಿಕಾರಿಯೊಬ್ಬರು ಈ ಹಿಂದೆಯೂ ಕೂಡಾ ಚೆಕ್‌ಪಾಯಿಂಟ್‌ನಲ್ಲಿ ನಿಲ್ಲಿಸಿ ದಾಖಲೆ ಕೇಳಿದರು. ತಕ್ಷಣಕ್ಕೆ ಇಲ್ಲ, ಮನೆಗೆ ಹೋಗಿ ತಂದುಕೊಡುತ್ತೇನೆ ಎಂದರೂ ಕೇಳದ ಅಧಿಕಾರಿಗಳು ದಂಡ ಹಾಕಿದರು. ಲೈನ್ ಮ್ಯಾನ್ ಆದ ಕಾರಣ ಎಲ್ಲಾ ದಾಖಲೆ ವಾಹನದಲ್ಲಿ ಇಡಲು ಸಾಧ್ಯವಿಲ್ಲ ಎಂದರೂ ಅಧಿಕಾರಿಗಳು ಕೇಳಲಿಲ್ಲ, ಕಾನೂನು ಪಾಲನೆ ಎಂದರು. ಇದರಿಂದ ಬೇಸರಗೊಂಡ ಲೈನ್ ಮ್ಯಾನ್ ತನ್ನ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಠಾಣೆಯ ವಿದ್ಯುತ್ ಕಡಿತಗೊಳಿಸಿದನು. ಈ ಬಗ್ಗೆ ಪ್ರಶ್ನಿಸಿದಾಗ ಕಾನೂನುಬಾಹಿರವಾಗಿ ವಿದ್ಯುತ್ ಬಳಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದನು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.