ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಯಲ್ಲಿ “ಜಾಗತಿಕ ವ್ಯಾಪಾರ ಪರಿಸರ ವ್ಯವಸ್ಥೆ”ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಗುಜರಾತ್ ಸರ್ಕಾರ, ಈ ಪ್ರದೇಶದಲ್ಲಿ ಮದ್ಯ ನಿಷೇಧ ಆದೇಶವನ್ನು ಹಿಂಪಡೆದಿದೆ. ಈ ಆದೇಶ ಅಡಿಕೆ ಮೇಲೆ ಪರಿಣಾಮ ಬೀರೀತೇ ಎಂಬುದು ಈಗ ಚರ್ಚೆಯಾಗುತ್ತಿರುವ ವಿಷಯ. ಅಂದ ಹಾಗೆ ಅಡಿಕೆಗೂ ಮದ್ಯಕ್ಕೂ ಏನು ಸಂಬಂಧ…?.
ಗುಜರಾತ್ ರಚನೆಯಾದಾಗಿನಿಂದ ರಾಜ್ಯದಲ್ಲಿ ಮದ್ಯದ ಪಾನೀಯಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಈ ಹಿಂದೆ ರಾಜ್ಯದ ಯಾವುದೇ ಪ್ರದೇಶದಲ್ಲಿ ಇಂತಹ ವಿನಾಯಿತಿ ನೀಡಿರಲಿಲ್ಲ. ಆದರೆ ಗಿಫ್ಟ್ ಸಿಟಿ ಜಾಗತಿಕ ಆರ್ಥಿಕ ಮತ್ತು ತಾಂತ್ರಿಕ ಕೇಂದ್ರವಾಗಿ ಹೊರಹೊಮ್ಮಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದೆ. ಜಾಗತಿಕ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಕಲ್ಪಿಸಲು ಗಿಫ್ಟ್ ಸಿಟಿ ಪ್ರದೇಶದಲ್ಲಿ `ವೈನ್ ಮತ್ತು ಡೈನ್’ ಸೌಲಭ್ಯಕ್ಕೆ ಅನುಮತಿ ನೀಡುವ ಮಹತ್ವದ ನಿರ್ಧಾರವನ್ನುಗುಜರಾತ್ ಸರ್ಕಾರ ಕೈಗೊಂಡಿದೆ.
ಆದರೆ, ಮದ್ಯಕ್ಕೂ ಅಡಿಕೆಗೂ ಏನು ಸಂಬಂಧ…? ಇದು ಪ್ರಶ್ನೆ. ಆ ಬಳಿಕ ಉಳಿದ ಚರ್ಚೆ. ಅಡಿಕೆ ಬಹುಪಾಲು ಬಳಕೆಯಾಗುವುದು ಚಟದ ಕಾರಣದಿಂದ. ಅಂದರೆ ಜಗಿದು ಉಗಿಯಲು. ಉತ್ತರ ಭಾರತದಲ್ಲಿ ಚಳಿಯ ಕಾರಣದಿಂದ ಕೆಲವರು ಅಡಿಕೆ ಜಗಿದರೆ, ಇನ್ನೂ ಕೆಲವರು ಚಟದ ಕಾರಣದಿಂದ ಅಡಿಕೆ ಜಗಿಯುತ್ತಾರೆ. ಕೆಲವು ಕಡೆಗಳಲ್ಲಿ ಮದ್ಯಪಾನದ ನಂತರ ಅಡಿಕೆ ಜಗಿಯುವವರೂ ಇದ್ದಾರೆ, ಮದ್ಯದ ನಂತರ ಇದೂ ಒಂದಿರಲಿ ಎನ್ನುವ ಚಟವೂ ಇದೆ.
ಈಗ ಗುಜರಾತ್‌ನ ಕೆಲವು ಭಾಗದಲ್ಲಿ ಅಡಿಕೆ ಜಗಿಯುವವರ ಪ್ರಮಾಣ ಹೆಚ್ಚಾಗಿದೆ. ಮದ್ಯ ನಿಷೇಧದ ಹಿನ್ನೆಲೆಯಲ್ಲಿ ಅಡಿಕೆಯೇ ಪ್ರಮುಖವಾದ ಚಟವಾಗಿತ್ತು. ಈಗ ಮದ್ಯ ಪಾನಕ್ಕೆ ಅವಕಾಶ ಆದಂತೆಲ್ಲಾ ನಿಧಾನವಾಗಿ ಅಡಿಕೆ ಜಗಿಯವ ಚಟದ ಬದಲಾಗಿ ಮದ್ಯದ ಚಟ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಗುಟ್ಕಾ ಸೇರಿದಂತೆ ಅಡಿಕೆ ಹುಡಿ ಜಗಿಯುವ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಅಡಿಕೆ ಮಾರುಕಟ್ಟೆ ವಲಯ ಚರ್ಚೆ ಮಾಡುತ್ತದೆ. ಉತ್ತರ ಭಾರತದ ಕಡೆಗಳಲ್ಲಿ ಮದ್ಯದ ನಂತರ ಅಡಿಕೆ ಹುಡಿ ಜಗಿಯುವ ಪ್ರಮಾಣ ಕಡಿಮೆಯಾಗಿದೆ. ಇದಕ್ಕಾಗಿ ಗುಟ್ಕಾ ಹಾಗೂ ಅಡಿಕೆ ಹುಡಿ ಬಳಕೆಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಗುಜರಾತ್ ಕಡೆಗಳಲ್ಲಿ ಗುಣಮಟ್ಟದ ಅಡಿಕೆಯೇ ಹೆಚ್ಚು ಬೇಡಿಕೆ ಇರುವ ಪ್ರದೇಶ. ಈಗ ಮದ್ಯ ನಿಷೇಧ ವಾಪಾಸಾತಿ ಬಳಿಕ ಅಡಿಕೆ ಮಾರುಕಟ್ಟೆ ಮೇಲೆ ನಿಧಾನವಾಗಿ ಪರಿಣಾಮ ಬೀರಬಹುದೇ , ಅಥವಾ ಇನ್ನಷ್ಟು ಬೇಡಿಕೆ ವ್ಯಕ್ತವಾಗಬಹುದೇ ಎಂಬುದು ಸದ್ಯ ಮಾರುಕಟ್ಟೆಯಲ್ಲಿ ನಡೆಯುವ ಚರ್ಚೆ.
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…