ಕಪ್ಪತಗುಡ್ಡದ(Kappata gudda) ಮಡಿಲಿನಲ್ಲಿ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದ ಶರಣ ಸಂಗಮದಲ್ಲಿ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಾಹಿತ್ಯಾವಲೋಕನ, ಕವಿಗೋಷ್ಠಿ ಹಾಗೂ ಚಾರಣ ಸಂಭ್ರಮವು ಯಶಸ್ವಿಯಾಗಿ ಜರುಗಿತು. ಪರಿಸರ ಸಂರಕ್ಷಣೆ(Save Environment) ಕುರಿತಾದ ಸಾಹಿತ್ಯ ರಚಿಸಿ ಜನಸಾಮಾನ್ಯರನ್ನು ತಲುಪುವಂತೆ ಮಾಡುವುದು ಸಾಹಿತಿಗಳ(Poets) ಆದ್ಯತೆಯಾಗಬೇಕಾಗಿದೆಯೆಂದು ನುಡಿದರು. ಆ ನಿಟ್ಟಿನಲ್ಲಿ ಶ್ರೀ ನಂದಿವೇರಿ ಮಠವು ಉದಯೋನ್ಮುಖ ಸಾಹಿತಿ ಹಾಗೂ ಕವಿಗಳಿಗೆ ವೇದಿಕೆ ಕಲ್ಪಿಸಿದ್ದು, ಪ್ರಕೃತಿಯ ಮಡಿಲಲ್ಲಿ ನೆಲ ಜಲ ಅರಣ್ಯ ಸಂರಕ್ಷಣೆ ಕುರಿತು ಆಯೋಜಿಸಲಾಗುವ ಸಾಹಿತ್ಯಿಕ ಚಟುವಟಿಕೆ ಹಾಗೂ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಕೃತಿ ಮಾತೆಯ ಸೇವೆಗೆ ಸನ್ನದ್ಧರಾಗಲು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾಲಚಂದ್ರ ಜಾಬಶೆಟ್ಟಿಯವರು ಶ್ರೀ ನಂದಿವೇರಿ ಮಠವು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿ ಕಪ್ಪತಗುಡ್ಡ ಉತ್ಸವ, ಔಷಧೀಯ ಸಸ್ಯಗಳ ಅಭಿವೃದ್ಧಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಎರೆಗೊಬ್ಬರ ತಯಾರಿಕೆ, ಸೋಲಾರ ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ರೈತರು ಹಾಗೂ ಜನಸಾಮಾನ್ಯರು ತೊಡಗುವಂತೆ ಹಾಗೂ ಕಪ್ಪತಗುಡ್ಡದೊಂದಿಗೆ ಜನಸಾಮಾನ್ಯರು ಭಾವಬಂಧ ಬೆಸೆಯುವ ಪೂರಕ ಚಟುವಟಿಗೆಗಳಲ್ಲಿ ತೊಡಗಿದೆಯೆಂದರು.
ಆಶಯ ನುಡಿಗಳನ್ನಾಡಿದ ನಿವೃತ್ತ ಪ್ರಾಚಾರ್ಯ ಡಾ. ಶ್ಯಾಮಸುಂದರ ಬಿದರಕುಂದಿಯವರು ಸದಾಕಾಲವೂ ಪರಿಸರ ಪೂರಕ ಕೈಂಕರ್ಯದಲ್ಲಿ ತೊಡಗಬೇಕಿದೆ. ಸೂಕ್ತ ತ್ಯಾಜ್ಯ ನಿರ್ವಹಣೆಯನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವದೇ ಪರಿಸರ ಸೇವೆಯಾಗಿದ್ದು ಅದೂ ಕೂಡ ಸಾಹಿತ್ಯ ಸೇವೆಯಾಗಿದೆಯೆಂದು ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ನೀಲಗಂಗಾ ಚರಂತಿ ಮಠ, ಸಾಹಿತಿ ಜ್ಯೋತಿ ಬದಾಮಿ, ಹಾಗೂ ವಿಜಯಪುರದ ಶ್ರೀಶೈಲ ಆಲೂರ ಈ ಸಂದರ್ಭದಲ್ಲಿ ಮಾತನಾಡಿದರು.
ಮತ್ತೊಬ್ಬ ಸಾಹಿತಿ ಹಾಗೂ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಮ್.ವಾಯ್.ಮೆಣಸಿನಕಾಯಿ ಈ ಸಂದರ್ಭದಲ್ಲಿ ಮಾತನಾಡಿದರು. ವಿಜಯನಗರ ಜಿಲ್ಲೆಯ ಸಂಡೂರಿನ ಪರಿಸರಪ್ರೇಮಿ ಹಾಗೂ ನಿರಂತರ ಬೀಜದುಂಡೆ ಪಸರಿಸಿ ವೃಕ್ಷಾಂದೋಲನದ ರೂವಾರಿ ಎಚ್.ಎಮ್.ಸಿದ್ಧಲಿಂಗ ಸ್ವಾಮಿ ಹತ್ತು ಸಾವಿರ ಬೀಜದುಂಡೆಗಳನ್ನು ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಚಾರಣ ಸಂದರ್ಭದಲ್ಲಿ ವನದೇವಿಗೆ ಬೀಜದುಂಡೆ ಚರಗ ನಮನವನ್ನು ಅರ್ಪಿಸಲಾಯಿತು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಮೆಟಗಡ್ಡರವರು ನಿಸರ್ಗದ ಉಳಿವಿಗಾಗಿ ನಾವೆಲ್ಲಾ ಕಂಕಣಬದ್ಧರಾಗಿದ್ದು, ನಂದಿವೇರಿ ಮಠದ ಚಟುವಟಿಕೆಗಳಿಂದ ಪ್ರಭಾವಿರಾಗಿ ಪ್ರತ್ಯಕ್ಷವಾಗಿ ಪ್ರಕೃತಿಮಡಿಲಲ್ಲಿ ಆಯೋಜಿಸಿರುವ ಸಾಹಿತ್ಯಾವಲೋಕನ ಹಾಗೂ ಕವಿಗೋಷ್ಠಿಯು ಒಂದು ರಸದೌತಣವಾಗಿದೆಯೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಕಪ್ಪತಗುಡ್ಡದ ಕುರಿತಾದ ಸ್ವರಚಿತ ಕಾವ್ಯಗಳನ್ನು ಕವಿ ಹಾಗೂ ಕವಿಯಿತ್ತಿಯರು ವಾಚಿಸಿ ನುಡಿನಮನಗಳನ್ನು ಕಪ್ಪತಗುಡ್ಡಕ್ಕೆ ಅರ್ಪಿಸಿ ಕಪ್ಫತಗುಡ್ಡದ ಸಂರಕ್ಷಣೆಗೆ ತನು ಮನ ಧನದಿಂದ ಕೈಜೋಡಿಸುತ್ತೇವೆಯೆಂದು ಪ್ರತಿಜ್ಞೆಗೈದರು. ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಸಾಹಿತಿಗಳು ಹಾಗೂ ಕವಿಗಳು, ಹಾಗೂ ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…