ಕೇಂದ್ರ ಸರ್ಕಾರ(Central Govt) ರೈತರಿಗಾಗಿ(Farmer) ಅನೇಕ ಯೋಜನೆಗಳನ್ನು(Plans) ಆರಂಭಿಸಿದೆ. ಅದರಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆ(PM kisan yojana) ಕೂಡ ಒಂದು. ಇದರಿಂದ ಅನೇಕ ರೈತರಿಗೆ ಸಹಾಯವಾಗಿರುವುದು ನಿಜ. ಈಗ ಈ ಯೋಜನೆಯಡಿ ಬರುವ ಹಣವನ್ನು(Money)ಶೇಕಡಾ 50 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆಯಂತೆ. ಈ ಯೋಜನೆಯನ್ನು ಫೆಬ್ರವರಿ 2019 ರಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಯಡಿ ಅರ್ಹ ರೈತರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು(Financial support) ನೀಡುತ್ತಿದೆ.
ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ 6000 ರೂ ಬೆಳೆ ಸಹಾಯವನ್ನು ನೀಡಲಾಗುತ್ತಿದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ಕೇಂದ್ರವು ನೇರವಾಗಿ ರೈತರ ಖಾತೆಗಳಿಗೆ ಈ ಆರ್ಥಿಕ ನೆರವನ್ನು ಜಮಾ ಮಾಡುತ್ತಿದೆ. ಪ್ರತಿ ಕಂತಿನಲ್ಲಿ ರೈತರ ಖಾತೆಗೆ 2 ಸಾವಿರ ರೂಪಾಯಿ ಸೇರುತ್ತೆ. ಇತ್ತೀಚೆಗೆ ಪ್ರಧಾನ ಮಂತ್ರಿ ಕಿಸಾನ್ 15 ನೇ ಕಂತಿನ ಹಣವನ್ನು ಅರ್ಹ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ. ಈಗ ರೈತರೆಲ್ಲ 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಈ ವೇಳೆ ಕೇಂದ್ರ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ತಯಾರು ಮಾಡಿದೆಯಂತೆ.
2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಪಿಎಂ-ಕಿಸಾನ್ ಯೋಜನೆಯಲ್ಲಿ ಒಂದಷ್ಟು ಬದಲಾವಣೆ ತರಲು ಉದ್ದೇಶಿಸಿರುವ ಸರ್ಕಾರ, ಫೆ.1ರಂದು ಮಂಡಿಸಲಿರುವ ಮಧ್ಯಂತರ ಬಜೆಟ್ ನಲ್ಲಿ ರೈತರಿಗೆ ಸಂತಸದ ಸುದ್ದಿ ನೀಡಲು ಮುಂದಾಗಿರುವಂತಿದೆ. ಪಿಎಂ ಕಿಸಾನ್‌ನ ಹೂಡಿಕೆಯನ್ನು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಯೋಜನೆಯಡಿ ರೈತರಿಗೆ ಶೇ.50ರಷ್ಟು ಲಾಭವನ್ನು ಹೆಚ್ಚಿಸಲಾಗುವುದು. ಅಂದರೆ ರೂ. 6000 ರಿಂದ ರೂ. 9000ಕ್ಕೆ ಏರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ಒಂಬತ್ತು ಸಾವಿರ ರೂಪಾಯಿಯನ್ನು ಎಂದಿನಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಅಂದರೆ ಪ್ರತಿ ಕಂತಿನಲ್ಲಿ 3 ಸಾವಿರ ರೂಪಾಯಿ ನೀಡಲು ಮುಂದಾಗಿದ್ದಾರೆ. ಇದಲ್ಲದೇ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ಬೆಂಬಲ ಬೆಲೆಯ ಹಣ ಹೆಚ್ಚಳ ವಿಚಾರದಲ್ಲಿ ರೈತರಿಗೆ ಸಿಹಿ ಮಾತು ಕೇಳಿ ಬರಲಿದೆ ಎಂದು ವರದಿಯಾಗಿದೆ. ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಪಿಎಂ ಕಿಸಾನ್‌ನ 16 ನೇ ಕಂತು ಬಿಡುಗಡೆ ಮಾಡಲು ಸರ್ಕಾರ ನಿರೀಕ್ಷಿಸುತ್ತದೆ. ಎಲ್ಲಾ ಅರ್ಹ ರೈತರು ಇದರೊಳಗೆ ಇ-ಕೆವೈಸಿ ಪೂರ್ಣಗೊಳಿಸಬೇಕು. ನಿಮ್ಮ ಇ-ಕೆವೈಸಿಯನ್ನು ನೀವು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬೇಕು.
ಪಿಎಂ ಕಿಸಾನ್‌ಗೆ ಸಂಬಂಧಿಸಿದಂತೆ ನಿಮ್ಮ ಖಾತೆಗಳಿಗೆ ಹಣ ಜಮೆಯಾಗದಿದ್ದರೆ, ತಕ್ಷಣ ಸಹಾಯವಾಣಿ ಸಂಖ್ಯೆಗೆ ದೂರು ನೀಡಿ. PM ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092. ಈ ಸಂಖ್ಯೆಗಳನ್ನು ಸಂಪರ್ಕಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
The central government has decided to increase the money under Pradhan Mantri Kisan Yojana by 50 percent. The scheme was implemented in February 2019. Under this scheme, the central government is providing financial support to the eligible farmers.
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್‌ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…