ಸಂಚಾರಿಯಾಗಿದ್ದ ಮನುಜ ವಿಕಸನಗೊಳ್ಳುತ್ತಾ ಒಂದೆಡೆ ನೆಲೆನಿಲ್ಲಲಾರಂಭಿಸಿದ. ಅಲ್ಲೇ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳನ್ನು ಶುರು ಮಾಡಿದ. ಆರಂಭಿಕ ದಿನಗಳಲ್ಲಿ ಗುಹೆ ಮರದ ಪೊಟರೆಗಳಲ್ಲಿ ಮಳೆ ಬಿಸಿಲಿನಿಂದ ರಕ್ಷಣೆಗಾಗಿ ಆಶ್ರಯ ಪಡೆದ. ನಿಧಾನವಾಗಿ ಮನೆ ಕಟ್ಟುವ ನಿಟ್ಟಿನಲ್ಲಿ ಯೋಚಿಸಿರಬಹುದು. (ಬಹುಶಃ ಬೆಟ್ಟ ಗುಡ್ಡ ಮರಗಳಿಲ್ಲದ ಜಾಗಗಳಲ್ಲಿ) ಕೃಷಿ ಆರಂಭಿಸಿದಾಗ ಮಾಡಂಗೋಲಿನ ರೀತಿಯಲ್ಲಿ ಮನೆ ನಿರ್ಮಿಸಿರಬಹುದು. ಪ್ರಯೋಗಪ್ರಿಯ ಮನುಜ ಒಂದೊಂದೇ ಆವಿಷ್ಕಾರಗಳನ್ನು ಮಾಡಿ ಇಂದಿನ ನವೀನ ತಂತ್ರಜ್ಞಾನಕ್ಕೆ ತೆರೆದುಕೊಂಡಾಗಿದೆ. ಆದರೆ ಮನದಲ್ಲಿ ಪರಿಸರಕ್ಕೆ ಹತ್ತಿರವಾಗುವುದೆಂದರೆ ಯಾವಾಗಲೂ ಇಷ್ಟವೇ. ಆದರೆ ಬಹಳ ಮುಂದುವರಿದ ಭ್ರಮೆಯಲ್ಲಿರುವ ನಮ್ಮನ್ನು ಕೋವಿಡ್ ಮತ್ತೆ ಪ್ರಕೃತಿಯ ಮಡಿಲಲ್ಲೇ ತಂದು ಕುಳ್ಳಿರಿಸಿದೆ. ಯಾವ ಹಳ್ಳಿ ಅಸಹನೀಯವೆನಿಸಿತ್ತೋ ಅದೇ ಪ್ರಿಯವಾಗಿದೆ. ಕಳೆಯೆಂದು ಕಿತ್ತು ಕಿತ್ತು ಬಿಸಾಡುತ್ತಿದ್ದ ಸೊಪ್ಪಿನ ಗಿಡಗಳನ್ನು ಕಷಾಯ ಮಾಡಿ ಇಮ್ಯುನಿಟಿ ಬೂಸ್ಟರ್ ಎಂದು ಸೇವಿಸುವಂತಾಗಿದೆ. ಇದೆಲ್ಲದರ ನಡುವೆ ಮತ್ತೊಂದು ವಿಷಯವೂ ಜನರನ್ನು ಬಹುವಾಗಿ ಸೆಳೆಯಿತು. ಅದುವೇ ಮಾಡಂಗೋಲು.
ಏನಿದು ಮಾಡಂಗೋಲು.? ಸುತ್ತ ಮುತ್ತ ಸಿಗುವ ಮಡಲು, ಹುಲ್ಲು, ಕೊತ್ತಳಿಗೆ, ಕಟ್ಟಿಗೆ, ಬಳ್ಳಿಗಳನ್ನು ಬಳಸಿ ಮಾಡುವ ಆಟದ (ಈಗ) ಮನೆಯೇ ಮಾಡಂಗೋಲು. ಹಿಂದೆ ಬೆಳೆಗಳ ರಕ್ಷಣೆಗಾಗಿ ಗದ್ದೆ, ತೋಟಗಳೆಡೆಯಲ್ಲಿ ರಾತ್ರಿ ಕಾವಲಿರುವ ಉದ್ದೇಶದಿಂದ ಈ ಮಾಡಂಗೋಲನ್ನು ಕಟ್ಟುತ್ತಿದ್ದರು. ಸೀಮಿತ ಉದ್ದೇಶವಿಟ್ಟುಕೊಂಡು ಕಟ್ಟುತ್ತಿದ್ದುದರಿಂದ ಪರಿಸರ ಸ್ನೇಹಿಯಾಗಿಯೇ ಇರುತ್ತಿತ್ತು. ಒಂದು ವೇಳೆ ಹಾನಿಯಾದರೆ ಮತ್ತೆ ಹೊಸದು ನಿರ್ಮಿಸಲು ಕಷ್ಟವೆನಿಸದು.
ಮಕ್ಕಳು ತಮ್ಮ ಬಾಲ್ಯದಲ್ಲೊಮ್ಮೆಯಾದರೂ ಮಾಡಂಗೋಲು ನಿರ್ಮಿಸುವ ಅನುಭವ ಪಡೆಯದಿದ್ದರೆ ಅದೊಂದು ಶೂನ್ಯವೇ ಸರಿ. ಲಾಕ್ ಡೌನ್ ನಲ್ಲಿ ದಿನಕ್ಕೊಂದು ಹೊಸತು ಮಾಡಿದರೂ ನಾಳೆ ಏನು ಮಾಡೋಣ ಎಂಬ ಮಕ್ಕಳ ಪ್ರಶ್ನೆಗೆ ಒಂದು ಸರ್ಪ್ರೈಸ್ ಉತ್ತರವಾಯಿತು ಮಾಡಂಗೋಲು ಎಂದು ಗೆಳತಿ ಸ್ವಾತಿ ಜಯಪ್ರಸಾದ್ ಆನೆಕ್ಕಾರ್ ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಹೇಗೆ? ಏನು? ಎತ್ತ ಎಂಬ ಪ್ರಶ್ನೆಗೆ ಮಾಡಂಗೋಲು ನಿರ್ಮಿಸಿಯೇ ಮಕ್ಕಳಿಗೆ ಉತ್ತರಿಸಿದರು.
ಮಾಡಂಗೋಲಿನಲ್ಲಿನ ಎದುರು , ಒಳಗೆ ಕುಳಿತು, ನಿಂತು, ಸೆಲ್ಫಿ ಫೋಟೋಗಳನ್ನು ತೆಗೆದಾಯಿತು, ಸಂಭ್ರಮಿಸಿ ಗೆಳೆಯರ ಹೊಟ್ಟೆ ಉರಿಸಿಯೂ ಆಯಿತು.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.
ಇಂದು ರಾಷ್ಟ್ರೀಯ ರೈತ ದಿನ. ಈ ದೇಶದಲ್ಲಿ ಕೃಷಿಯ ಪ್ರಾಧಾನ್ಯತೆ ಬಹಳಷ್ಟಿದೆ. ಕೃಷಿಗಾಗಿ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಡಿ.26 ರಂದು ತಮಿಳುನಾಡು ಕರಾವಳಿಯ ಬಳಿ ಶಿಥಿಲಗೊಳ್ಳುತ್ತಿದ್ದಂತೆಯೇ ಹಿಂಗಾರು…
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಶಾಲಾ ವಠಾರದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ…
23.12.24ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
22.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಒಡಿಶಾ ರಾಜ್ಯ ಸರ್ಕಾರವು ಕೃಷಿಯಲ್ಲಿ ಹೊಸವಿಧಾನಗಳ, ಪರ್ಯಾಯ ಕೃಷಿಯ ಪಾತ್ರವನ್ನು ಪರೋಕ್ಷವಾಗಿ ಕೃಷಿಕರಿಗೆ…