ಮಹಾಲಯ ಅಮಾವಾಸ್ಯೆ | ಪರಂಪರೆ, ತತ್ತ್ವ ಮತ್ತು ಆಧುನಿಕ ಜೀವನದ ಸೇತುವೆ

September 21, 2025
8:12 AM

ಮಹಾಲಯ ಅಮಾವಾಸ್ಯೆ (ಪಿತೃ ಅಮಾವಾಸ್ಯೆ) ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಪಿತೃಗಳಿಗೆ ತರ್ಪಣ, ಶ್ರಾದ್ಧ, ಪಿಂಡಪ್ರದಾನದ ದಿನವಾಗಿ ಪರಿಗಣಿಸಲಾಗಿದೆ. ವೇದ ಮತ್ತು ಉಪನಿಷತ್ತಿನ ತತ್ತ್ವವು “ಪಿತೃಯಾನ ” ಎಂಬ ಆಲೋಚನೆಯಲ್ಲಿ ಈ ಪರಂಪರೆಯನ್ನು ಹೇಳುತ್ತದೆ.ಪ್ರತಿ ವರ್ಷವೂ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನದಲ್ಲಿ “ ಮಹಾಲಯ ಅಮಾವಾಸ್ಯೆ ” ಎಂದು ಆಚರಿಸುತ್ತಾರೆ.

ಋಗ್ವೇದದಲ್ಲಿ “ಪಿತೃಭ್ಯಃ ಸ್ವಧಾ ನಮಃ” ಎಂಬ ಉಕ್ತಿಯಿದೆ. ಇದು ಪಿತೃಗಳಿಗೆ ಸ್ವಧಾ ಸಮರ್ಪಣೆಯು ಕೇವಲ ವಿಧಿ ಮಾತ್ರವಲ್ಲ, ಅದು ಋಣಮುಕ್ತಿ – ಅಂದರೆ ಜೀವನದಲ್ಲಿ ನಮಗೆ ದೇಹ, ಸಂಸ್ಕಾರ, ಸಂಪ್ರದಾಯ ನೀಡಿದವರಿಗೆ ಕೃತಜ್ಞತೆಯ ಸಂಕೇತ.

ಋಣತ್ರಯ ತತ್ತ್ವ: ಉಪನಿಷತ್ತುಗಳು ಹೇಳುವಂತೆ ಮಾನವನು ಜನನದಿಂದಲೇ ಮೂರು ಋಣಗಳೊಂದಿಗೆ ಬಾಳುತ್ತಾನೆ – ದೇವಋಣ, ಋಷಿಋಣ, ಪಿತೃಋಣ. ಪಿತೃಗಳ ನೆನಪು, ಅವರಿಗಾಗಿ ಕೃತಜ್ಞತಾ ಸಮರ್ಪಣೆ – ಪಿತೃಋಣ ತೀರಿಸುವ ಒಂದು ಮಾರ್ಗ.

ಕಠೋಪನಿಷತ್ ಹೇಳುವಂತೆ ಜೀವಾತ್ಮನು ಶರೀರತ್ಯಾಗದ ನಂತರ ಸೂಕ್ಷ್ಮರೂಪದಲ್ಲಿ ಪಿತೃಲೋಕ, ದೇವಲೋಕ ಮುಂತಾದ ಯಾತ್ರೆಗಳನ್ನು ಮಾಡುತ್ತಾನೆ. ಪಿತೃಗಳಿಗೆ ಸಮರ್ಪಿಸಿದ ಶ್ರಾದ್ಧವು ಆ ಶಕ್ತಿಗೆ ಬಲವರ್ಧನೆ ಮಾಡುವ ಧಾರ್ಮಿಕ ಕ್ರಿಯೆ ಎಂದು ತತ್ತ್ವಶಾಸ್ತ್ರ ಹೇಳುತ್ತದೆ.

ಬೃಹದಾರಣ್ಯಕ ಉಪನಿಷತ್ ಪ್ರಕಾರ, ಪುಣ್ಯ-ಪಾಪ ಸಂಗ್ರಹದ ಆಧಾರದ ಮೇಲೆ ಜೀವಿ ತನ್ನ ಗಮ್ಯವನ್ನು ಹೊಂದುತ್ತಾನೆ. ಶ್ರಾದ್ಧ-ತರ್ಪಣದ ಮೂಲಕ ಸಂತಾನಗಳು ಪಿತೃಗಳಿಗೆ ಶಾಂತಿ ಮತ್ತು ಪುಣ್ಯವನ್ನು ಹಾರೈಸುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement

ಆದರೆ, ಇಂದು ವಿಜ್ಞಾನಯುಗದಲ್ಲಿ “ಪಿತೃಗಳಿಗೆ ನೀರು ಸುರಿಸಿದರೆ ಅವರ ಹಿತವಾಗುತ್ತದೆ” ಎಂಬುದನ್ನು ನೇರಾರ್ಥದಲ್ಲಿ ಎಲ್ಲರೂ ಸ್ವೀಕರಿಸುವುದಿಲ್ಲ. ಆದರೆ, ಆಧ್ಯಾತ್ಮಿಕ ಹಾಗೂ ಮಾನಸಿಕ ದೃಷ್ಟಿಯಲ್ಲಿ ಇದನ್ನು ಹೀಗೆ ಅರ್ಥೈಸಬಹುದು, ನಮ್ಮ ಅಸ್ತಿತ್ವವು ಕೇವಲ ವೈಯಕ್ತಿಕ ಸಾಧನೆಯ ಫಲವಲ್ಲ. ಪಿತೃಗಳು, ಪರಂಪರೆ, ಸಮಾಜ, ಸಂಸ್ಕೃತಿ ಇವೆಲ್ಲದರ ಕೊಡುಗೆ. ಅಮಾವಾಸ್ಯೆಯಂದು ಅವರಿಗಾಗಿ ನಿಂತು ಧ್ಯಾನಿಸುವುದು .ಇದು ಒಂದು ಕೃತಜ್ಞತೆಯ ಅಭ್ಯಾಸ.

ಪಿತೃಗಳ ಸ್ಮರಣೆ ಕೇವಲ ವಿಧಿ ಅಲ್ಲ, ಅದು ಸಂಸ್ಕೃತಿಯ ವಹಿವಾಟು. ಕುಟುಂಬದ ಮಕ್ಕಳು ಹಿರಿಯರ ಕಥೆ, ಅವರ ಮೌಲ್ಯಗಳನ್ನು ಕೇಳುವ ಸಂದರ್ಭ ಇಂತಹ ಆಚರಣೆಗಳಿಂದ ಪರಂಪರೆ, ಸಂಬಂಧದ ಮಹತ್ವ ,ಕುಟುಂಬದ ಬಾಂಧವ್ಯ ,ನೆನಪುಗಳ ಸರಣಿ ಮುಂದುವರಿಯುತ್ತದೆ.

ಶ್ರಾದ್ಧದಲ್ಲಿ ಅನ್ನಸಮರ್ಪಣೆ, ದಾನಾದಿಗಳು ಮುಖ್ಯ. ಇವು ಹಸಿದವರಿಗೆ, ಬಡವರಿಗೆ ಅನ್ನ-ವಸ್ತ್ರ ನೀಡುವ ಮೂಲಕ ಸಮಾಜಸೇವೆ ರೂಪದಲ್ಲೂ ಅರ್ಥಪೂರ್ಣವಾಗಬಹುದು. ಇದು ಮಾನಸಿಕವಾದ ತೃಪ್ತಿಯನ್ನು ನೀಡಬಹುದು. ಮನಸ್ಸಿನಲ್ಲಿ “ನಾನು ಪಿತೃಗಳಿಗೆ ನಿಷ್ಠೆಯಿಂದ ಕರ್ತವ್ಯ ಮಾಡಿದ್ದೇನೆ” ಎಂಬ ತೃಪ್ತಿ ಒಂದು ರೀತಿಯ ಧಾರ್ಮಿಕ ಮನೋವಿಜ್ಞಾನದ ಭಾಗವಾಗಿದೆ.

ಇಂದಿನ ಪೀಳಿಗೆಗೆ ಮಹಾಲಯ ಅಮಾವಾಸ್ಯೆಯ ಸಂದೇಶ ಹೀಗಿರಬಹುದು:

  1. ಆಧ್ಯಾತ್ಮಿಕತೆ: ಪೂರ್ವಜರ ಧ್ಯಾನ, ಅವರ ಮೌಲ್ಯಗಳನ್ನು ನೆನಪಿಸುವ ಮೂಲಕ ಆಂತರಿಕ ಶಕ್ತಿಯನ್ನು ಬೆಳೆಸುವುದು.
  2. ಮಾನಸಿಕ ವಿಜ್ಞಾನ: ಕುಟುಂಬದ ಮೂಲಗಳ ಸ್ಮರಣೆ, ಅಜ್ಜ-ಅಜ್ಜಿ-ತಾತ-ಅತ್ತೆಹೀಗೆ ಹಿರಿಯರನ್ನು ಸ್ಮರಣೆಮಾಡುವುದರಿಂದ ವ್ಯಕ್ತಿಗೆ ನೈಸರ್ಗಿಕವಾಗಿ ನೆಲೆಗೊಂಡ ಬದುಕನ್ನು ನೀಡುತ್ತದೆ.
  3. ಸಾಮಾಜಿಕ ಹೊಣೆಗಾರಿಕೆ: ಪಿತೃಗಳಿಗೆ ತರ್ಪಣವೆಂದರೆ – ಇಂದಿನ ಸಮಾಜದಲ್ಲಿ ಹಸಿದವರಿಗೆ ಅನ್ನ, ದೀನರಿಗೆ ನೆರವು, ಪ್ರಕೃತಿಗೆ ಕೃತಜ್ಞತೆ ಅರ್ಪಿಸುವುದಾಗಿದೆ.
  4. ಪರಿಸರ ಜಾಗೃತಿ: ಪಿತೃಗಳು ನಮಗೆ ಭೂಮಿ, ನದಿ, ಗಾಳಿ ಎಂಬ ಸಂಪತ್ತು ಕೊಟ್ಟಿದ್ದಾರೆ. ಅಮಾವಾಸ್ಯೆಯಂದು ಮರ ನೆಡುವುದು, ನದಿ ಶುದ್ಧೀಕರಿಸುವುದು, ಪ್ಲಾಸ್ಟಿಕ್ ಕಡಿಮೆ ಮಾಡುವುದು ಇತ್ಯಾದಿಗಳನ್ನು ಅಳವಡಿಸಿಕೊಳ್ಳುವುದರಿಂದ ಆಧುನಿಕ ರೀತಿಯಲ್ಲಿ “ಪಿತೃತರ್ಪಣೆ” ಕಾರ್ಯವನ್ನೂ ಮಾಡಬಹುದು.

ಮಹಾಲಯ ಅಮಾವಾಸ್ಯೆ ಎಂದರೆ ಪಿತೃಗಳಿಗೆ ಶ್ರಾದ್ಧ ಮಾಡುವ ಒಂದು ವಿಧಿ ಮಾತ್ರವಲ್ಲ; ಅದು ಕೃತಜ್ಞತೆ, ಸಂಸ್ಕೃತಿ ಸಂರಕ್ಷಣೆ, ಮಾನಸಿಕ ಶಾಂತಿ, ಸಾಮಾಜಿಕ ಹೊಣೆಗಾರಿಕೆಗಳ ತತ್ತ್ವ. ವೇದೋಪನಿಷತ್ ಆಧಾರದ ಮೇಲೆ ಇದು ಪಿತೃಯಾನ ತತ್ತ್ವ, ಆದರೆ ಆಧುನಿಕ ಯುಗದಲ್ಲಿ ಇದು ಮಾನವೀಯ ಮತ್ತು ಪರಿಸರ ಜಾಗೃತಿಯ ಹಬ್ಬ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಕಡಲೆ ಬೀಜ ತಿನ್ನುವಾಗ ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ..!
January 6, 2026
10:41 PM
by: ರೂರಲ್‌ ಮಿರರ್ ಸುದ್ದಿಜಾಲ
ವಿಕಲಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು
January 6, 2026
10:12 PM
by: ರೂರಲ್‌ ಮಿರರ್ ಸುದ್ದಿಜಾಲ
ಮಾತೃ ವಂದನಾ ಯೋಜನೆ – ಗರ್ಭಿಣಿಯರಿಗೆ 6000 ಜಮೆ
January 6, 2026
10:10 PM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಪ್ರತ್ಯೇಕಿಸಲು ಎಐ ಚಾಲಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸಂಸ್ಥೆ
January 6, 2026
9:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror