ಮಹಾಲಯ ಅಮಾವಾಸ್ಯೆ (ಪಿತೃ ಅಮಾವಾಸ್ಯೆ) ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಪಿತೃಗಳಿಗೆ ತರ್ಪಣ, ಶ್ರಾದ್ಧ, ಪಿಂಡಪ್ರದಾನದ ದಿನವಾಗಿ ಪರಿಗಣಿಸಲಾಗಿದೆ. ವೇದ ಮತ್ತು ಉಪನಿಷತ್ತಿನ ತತ್ತ್ವವು “ಪಿತೃಯಾನ ” ಎಂಬ ಆಲೋಚನೆಯಲ್ಲಿ ಈ ಪರಂಪರೆಯನ್ನು ಹೇಳುತ್ತದೆ.ಪ್ರತಿ ವರ್ಷವೂ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನದಲ್ಲಿ “ ಮಹಾಲಯ ಅಮಾವಾಸ್ಯೆ ” ಎಂದು ಆಚರಿಸುತ್ತಾರೆ.
ಋಗ್ವೇದದಲ್ಲಿ “ಪಿತೃಭ್ಯಃ ಸ್ವಧಾ ನಮಃ” ಎಂಬ ಉಕ್ತಿಯಿದೆ. ಇದು ಪಿತೃಗಳಿಗೆ ಸ್ವಧಾ ಸಮರ್ಪಣೆಯು ಕೇವಲ ವಿಧಿ ಮಾತ್ರವಲ್ಲ, ಅದು ಋಣಮುಕ್ತಿ – ಅಂದರೆ ಜೀವನದಲ್ಲಿ ನಮಗೆ ದೇಹ, ಸಂಸ್ಕಾರ, ಸಂಪ್ರದಾಯ ನೀಡಿದವರಿಗೆ ಕೃತಜ್ಞತೆಯ ಸಂಕೇತ.
ಋಣತ್ರಯ ತತ್ತ್ವ: ಉಪನಿಷತ್ತುಗಳು ಹೇಳುವಂತೆ ಮಾನವನು ಜನನದಿಂದಲೇ ಮೂರು ಋಣಗಳೊಂದಿಗೆ ಬಾಳುತ್ತಾನೆ – ದೇವಋಣ, ಋಷಿಋಣ, ಪಿತೃಋಣ. ಪಿತೃಗಳ ನೆನಪು, ಅವರಿಗಾಗಿ ಕೃತಜ್ಞತಾ ಸಮರ್ಪಣೆ – ಪಿತೃಋಣ ತೀರಿಸುವ ಒಂದು ಮಾರ್ಗ.
ಕಠೋಪನಿಷತ್ ಹೇಳುವಂತೆ ಜೀವಾತ್ಮನು ಶರೀರತ್ಯಾಗದ ನಂತರ ಸೂಕ್ಷ್ಮರೂಪದಲ್ಲಿ ಪಿತೃಲೋಕ, ದೇವಲೋಕ ಮುಂತಾದ ಯಾತ್ರೆಗಳನ್ನು ಮಾಡುತ್ತಾನೆ. ಪಿತೃಗಳಿಗೆ ಸಮರ್ಪಿಸಿದ ಶ್ರಾದ್ಧವು ಆ ಶಕ್ತಿಗೆ ಬಲವರ್ಧನೆ ಮಾಡುವ ಧಾರ್ಮಿಕ ಕ್ರಿಯೆ ಎಂದು ತತ್ತ್ವಶಾಸ್ತ್ರ ಹೇಳುತ್ತದೆ.
ಬೃಹದಾರಣ್ಯಕ ಉಪನಿಷತ್ ಪ್ರಕಾರ, ಪುಣ್ಯ-ಪಾಪ ಸಂಗ್ರಹದ ಆಧಾರದ ಮೇಲೆ ಜೀವಿ ತನ್ನ ಗಮ್ಯವನ್ನು ಹೊಂದುತ್ತಾನೆ. ಶ್ರಾದ್ಧ-ತರ್ಪಣದ ಮೂಲಕ ಸಂತಾನಗಳು ಪಿತೃಗಳಿಗೆ ಶಾಂತಿ ಮತ್ತು ಪುಣ್ಯವನ್ನು ಹಾರೈಸುತ್ತಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಆದರೆ, ಇಂದು ವಿಜ್ಞಾನಯುಗದಲ್ಲಿ “ಪಿತೃಗಳಿಗೆ ನೀರು ಸುರಿಸಿದರೆ ಅವರ ಹಿತವಾಗುತ್ತದೆ” ಎಂಬುದನ್ನು ನೇರಾರ್ಥದಲ್ಲಿ ಎಲ್ಲರೂ ಸ್ವೀಕರಿಸುವುದಿಲ್ಲ. ಆದರೆ, ಆಧ್ಯಾತ್ಮಿಕ ಹಾಗೂ ಮಾನಸಿಕ ದೃಷ್ಟಿಯಲ್ಲಿ ಇದನ್ನು ಹೀಗೆ ಅರ್ಥೈಸಬಹುದು, ನಮ್ಮ ಅಸ್ತಿತ್ವವು ಕೇವಲ ವೈಯಕ್ತಿಕ ಸಾಧನೆಯ ಫಲವಲ್ಲ. ಪಿತೃಗಳು, ಪರಂಪರೆ, ಸಮಾಜ, ಸಂಸ್ಕೃತಿ ಇವೆಲ್ಲದರ ಕೊಡುಗೆ. ಅಮಾವಾಸ್ಯೆಯಂದು ಅವರಿಗಾಗಿ ನಿಂತು ಧ್ಯಾನಿಸುವುದು .ಇದು ಒಂದು ಕೃತಜ್ಞತೆಯ ಅಭ್ಯಾಸ.
ಪಿತೃಗಳ ಸ್ಮರಣೆ ಕೇವಲ ವಿಧಿ ಅಲ್ಲ, ಅದು ಸಂಸ್ಕೃತಿಯ ವಹಿವಾಟು. ಕುಟುಂಬದ ಮಕ್ಕಳು ಹಿರಿಯರ ಕಥೆ, ಅವರ ಮೌಲ್ಯಗಳನ್ನು ಕೇಳುವ ಸಂದರ್ಭ ಇಂತಹ ಆಚರಣೆಗಳಿಂದ ಪರಂಪರೆ, ಸಂಬಂಧದ ಮಹತ್ವ ,ಕುಟುಂಬದ ಬಾಂಧವ್ಯ ,ನೆನಪುಗಳ ಸರಣಿ ಮುಂದುವರಿಯುತ್ತದೆ.
ಶ್ರಾದ್ಧದಲ್ಲಿ ಅನ್ನಸಮರ್ಪಣೆ, ದಾನಾದಿಗಳು ಮುಖ್ಯ. ಇವು ಹಸಿದವರಿಗೆ, ಬಡವರಿಗೆ ಅನ್ನ-ವಸ್ತ್ರ ನೀಡುವ ಮೂಲಕ ಸಮಾಜಸೇವೆ ರೂಪದಲ್ಲೂ ಅರ್ಥಪೂರ್ಣವಾಗಬಹುದು. ಇದು ಮಾನಸಿಕವಾದ ತೃಪ್ತಿಯನ್ನು ನೀಡಬಹುದು. ಮನಸ್ಸಿನಲ್ಲಿ “ನಾನು ಪಿತೃಗಳಿಗೆ ನಿಷ್ಠೆಯಿಂದ ಕರ್ತವ್ಯ ಮಾಡಿದ್ದೇನೆ” ಎಂಬ ತೃಪ್ತಿ ಒಂದು ರೀತಿಯ ಧಾರ್ಮಿಕ ಮನೋವಿಜ್ಞಾನದ ಭಾಗವಾಗಿದೆ.
ಇಂದಿನ ಪೀಳಿಗೆಗೆ ಮಹಾಲಯ ಅಮಾವಾಸ್ಯೆಯ ಸಂದೇಶ ಹೀಗಿರಬಹುದು:
ಮಹಾಲಯ ಅಮಾವಾಸ್ಯೆ ಎಂದರೆ ಪಿತೃಗಳಿಗೆ ಶ್ರಾದ್ಧ ಮಾಡುವ ಒಂದು ವಿಧಿ ಮಾತ್ರವಲ್ಲ; ಅದು ಕೃತಜ್ಞತೆ, ಸಂಸ್ಕೃತಿ ಸಂರಕ್ಷಣೆ, ಮಾನಸಿಕ ಶಾಂತಿ, ಸಾಮಾಜಿಕ ಹೊಣೆಗಾರಿಕೆಗಳ ತತ್ತ್ವ. ವೇದೋಪನಿಷತ್ ಆಧಾರದ ಮೇಲೆ ಇದು ಪಿತೃಯಾನ ತತ್ತ್ವ, ಆದರೆ ಆಧುನಿಕ ಯುಗದಲ್ಲಿ ಇದು ಮಾನವೀಯ ಮತ್ತು ಪರಿಸರ ಜಾಗೃತಿಯ ಹಬ್ಬ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
ಕ್ಯಾನ್ಸರ್ ಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವೂ ವರ್ಷಗಳ ಬಳಿಕ ಮತ್ತೆ ರೋಗ ಕಾಣಿಸಿಕೊಳ್ಳುವುದಕ್ಕೆ…
ಪ್ರಕೃತಿಯಲ್ಲಿ ಇರುವ ಡಿಎನ್‌ಎ, ಪ್ರೋಟೀನ್‌ಗಳಂತೆ ಪ್ಲಾಸ್ಟಿಕ್‌ಗಳನ್ನೂ ಕೂಡಾ ನಿಗದಿತ ಅವಧಿಯಲ್ಲಿ ಸ್ವಯಂ ಕರಗುವಂತೆ…
2026ರಲ್ಲಿ ಕೃಷಿ ಕ್ಷೇತ್ರ ಸ್ಥಿರಗೊಳ್ಳುವ ನಿರೀಕ್ಷೆಯಿದ್ದರೂ, ವಿವಿಧ ಬೆಳೆಗಳ ನಡುವೆ ಅಸಮಾನ ಸ್ಥಿತಿಗಳು…
ವಿಶ್ವಾದ್ಯಂತ ಶಾಖದ ಅಲೆಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)…
ಗ್ರಾಮೀಣ ವಿದ್ಯುದ್ದೀಕರಣವನ್ನು ಬಲಪಡಿಸಲು ಮತ್ತು ಸಾರ್ವಜನಿಕ ಉಪಯುಕ್ತತೆ ಮೂಲಸೌಕರ್ಯಕ್ಕಾಗಿ ಭೂಮಿಯನ್ನು ಬಳಸಿದ ರೈತರಿಗೆ…
ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ…