ತುಳುನಾಡಿನಲ್ಲಿ ದೈವರಾಧನೆಗೆ ಭಾರಿ ಮಹತ್ವ ಇದೆ. ತುಳುನಾಡಿನಲ್ಲಿ ಕೆಲವು ಕೇರಳ ಮೂಲ ದೈವಗಳು ಕೂಡ ಆರಾಧನೆ ಪಡೆಯುತ್ತಿವೆ . ಇವುಗಳಲ್ಲಿ ವಿಷ್ಣುಮೂರ್ತಿ ದೈವ ಕೂಡ ಆಗಿದೆ. ದೈವರಾಧನೆ ಎಂಬುದು ವಿಭಿನ್ನ ಆಚರಣೆ. ಇಲ್ಲಿ ದೈವಗಳು ದೇವರಾಗಲು ಸಾಧ್ಯವಿಲ್ಲ. ದೇವರು ದೈವವಾಗಲು ಸಾಧ್ಯವಿಲ್ಲ. ತುಳುನಾಡಿನ ಮನುಷ್ಯ ಮೂಲ ದೈವಗಳು ಅಘಾತಕಾರಿಯಾದ , ದುರಂತಮಯವಾದ ಕತೆಗಳಿವೆ. ಅನ್ಯಾಯಕ್ಕೆ ಒಳಗಾಗಿ, ವೀರ ಮರಣ ಹೊಂದಿ ದೈವತ್ವಕ್ಕೆ ಏರಿ ಆರಾಧನೆ ಪಡೆಯುತ್ತಿವೆ. ಇಂತಹದೇ ಕಣ್ಣನ್ ಎಂಬ ವ್ಯಕ್ತಿ ವಿಷ್ಣುಮೂರ್ತಿಯಾದ ಕತೆ.…..ಮುಂದೆ ಓದಿ….
ಒತ್ತೆ ಕೋಲದಲ್ಲಿ ಮೊದಲು ಕುಳಿಚ್ಚಾಟ್ ದೈವದ ನರ್ತನ ಸೇವೆಯು ನಡೆಯುತ್ತದೆ. ಇದರಲ್ಲಿ ವಿಷ್ಣುವಿನ ನರಸಿಂಹ ಅವತಾರವಾರವನ್ನು ಅಭಿವ್ಯಕ್ತಿಗೊಳಿಸಲಾಗುತ್ತದೆ. ಉಗ್ರ ನರಸಿಂಹನು ಹಿರಣ್ಯ ಕಶಿಪು ಎಂಬ ರಾಕ್ಷನನ್ನು ಕೊಂದ ಬಗ್ಗೆ ನರ್ತನ ಸೇವೆ ಮೂಲಕ ವರ್ಣಿಸಲಾಗುತ್ತದೆ. ತದನಂತರ ಪ್ರಹ್ಲಾದನನ್ನು ಸಮಾಧಾನ ಮಾಡುವ ರೀತಿಯನ್ನು ನರ್ತನ ಸೇವೆಯನ್ನು ಕಾಣಬಹುದು.
ಒತ್ತೆಕೋಲದ ವಿಷ್ಣು ಮೂರ್ತಿ ದೈವದ ಬಗ್ಗೆ ಜಾನಪದ ವಿಶೇಷ ಕತೆ ಇದೆ : ಉತ್ತರ ಕೇರಳ ಭಾಗದ ನೀಲೇಶ್ವರದ ಕೋಟಾಪುರಂ ಅರಸ ಕುರುವಾವ್ ಕುರುಪ್ ನ ಆಸನದಲ್ಲಿ ಪಾಲಂತಾಯಿ ಕಣ್ಣನ್ ಎಂಬ ತೀಯ ಸಮುದಾಯದ ವ್ಯಕ್ತಿ ಇರುತ್ತಾನೆ. ಸುಂದರವಾದ , ನೀಲಕಾಯದ ಕಣ್ಣನ್ ನಿಗೂ ಅರಸನ ಮಗಳಿಗೂ ಪ್ರೇಮಾಂಕುರವಾಗುತ್ತದೆ . ಗೋವು ಮೇಯಿಸುತ್ತಿದ್ದ ಕಣ್ಣನ್ ಬಳಿ ಅರಸನ ಮಗಳು ಪ್ರೇಮ ನಿವೇದನೆ ಮಾಡುತ್ತಾಳೆ. ಆದರೆ ಜಾತಿ ವಿಚಾರದಲ್ಲಿ ಕಣ್ಣನ್ ನೇರವಾಗಿ ತಿರಸ್ಕರಿಸುತ್ತಾಳೆ. ಇದು ಕುರುವಾವ್ ಕುರುಪ್ ಗೆ ಗೊತ್ತಾಗಿ ನನ್ನ ಮಗಳಿಗೆ ದ್ರೋಹ ಮಾಡಿದ ಎಂದು ಸುಳ್ಳು ಸುದ್ಧಿ ಹರಡಿ ಭಾರಿ ಪ್ರಮಾಣದ ಶಿಕ್ಷೆ ವಿಧಿಸಲು ತೀರ್ಮಾನ ಮಾಡುತ್ತಾನೆ . ಇದರಿಂದ ಭಯ ಭೀತನಾದ ಕಣ್ಣನ್ ಊರು ಬಿಟ್ಟು ,ತುಳುನಾಡಿನ ಬಡಗು ದಿಕ್ಕು ಮಂಗಳೂರಿನ ಜೆಪ್ಪು ಎಂಬಲ್ಲಿಗೆ ಬಂದು ಕುಡಿಪ್ಪಾಡಿ ತರವಾಡು ಮನೆಗೆ ಬರುತ್ತಾನೆ.
ಈ ಮನೆ ಹಿಂದಿನ ಕಾಲದ ಜೈನ ಬಳ್ಳಾಲರಿಗೆ ಸೇರಿದ ಮನೆಯಾಗಿತ್ತು. ಈ ಮನೆಯಲ್ಲಿ ತಂಡಲ್ ಮಾದ ಎಂಬ ಅಜ್ಜಿ ಒಬ್ಬಳೇ ವಾಸವಾಗಿದ್ದಳು. ಕಣ್ಣನ್ ನಡೆದು ಬಂದು ಸುಸ್ತಾಗಿ ಮರದ ಕೆಳಗೆ ಮಳಗಿದ್ದನ್ನು ಕಂಡ ಅಜ್ಜಿಯು ಉಪಚರಿಸಿ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಕಣ್ಣನ್ ನ ಎಲ್ಲಾ ವಿಚಾರ ತಿಳಿದು ತನ್ನ ಮನೆಯಲ್ಲೆ ಇರುವಂತೆ ಮನವಿ ಮಾಡತ್ತಾಳೆ. ಈ ಅಜ್ಜಿ ಮನೆಯಲ್ಲಿ ಹಿಂದಿನಿಂದಲೂ ಆರಾಧನೆ ಮಾಡಿಕೊಂಡು ಬಂದ ಪಿಲ್ಚಂಡಿ ದೈವದ ಸಾನಿಧ್ಯಯವಿತ್ತು. ಈ ದೈವದ ಚಾಕರಿಯನ್ನು ಕಣ್ಣನ್ಗೆ ಒಪ್ಪಿಸುತ್ತಾಳೆ. ಕಣ್ಣನ್ ಅಲ್ಲಿ ಬಂದು 12ವರ್ಷ ಆದಮೇಲೆ ಕನಸಿನಲ್ಲಿ ಒಂದು ದಿವ್ಯಶಕ್ತಿಯು ಗೋಚರವಾಗಿ ನೀನು ಇನ್ನು ಸ್ವಂತ ಊರಿಗೆ ಹೋಗಬಹುದು ಎಂದು ತಿಳಿಸಿ ಮಾಯವಾಗುತ್ತದೆ . ಇದನ್ನು ಅಜ್ಜಿಯ ಜೊತೆ ಚರ್ಚೆಮಾಡುತ್ತಾನೆ.ಅದೇ ದಿನ ದೈವಕ್ಕೆ ಇಟ್ಟ ಹಾಲು ಕೂಡ ಮಾಯವಾಗುತ್ತದೆ. ಆಗ ಅಜ್ಜಿ ಕಣ್ಣನ್ ಜೊತೆ ಹಾಲು ಎಲ್ಲಿ ಎಂದು ಕೇಳಿದಾಗ ಕಣ್ಣ್ ನ್ ಗೆ ಪಿಲ್ಚಂಡಿ ದೈವದ ಆವೇಶವಾಗುತ್ತದೆ. ಆಗ ಅಜ್ಜಿ ಇದನ್ನು ಕಣ್ತುಂಬಿಕೊಳ್ಳುತ್ತಾಳೆ.…..ಮುಂದೆ ಓದಿ….
The Rural Mirror WhatsApp Channel ಸೇರಲು ಇಲ್ಲಿ ಕ್ಲಿಕ್ ಮಾಡಿ….
ತದನಂತರ ಅಜ್ಜಿ ಕಣ್ಣ ನ್ನು ದೈವದ ಕಡ್ಸಲೆ , ಬಿಳಿ ಬಟ್ಟೆಯನ್ನು ಸುತ್ತಿದ ದೈವದ ಮೊಗದ ಜೊತೆ ಛತ್ರಿ( ಸಿರಿಯಲ್ಲಿ ಮಾಡಿದ್ದು) ಜೊತೆ ಕಳುಹಿಸಿಕೊಡುತ್ತಾಳೆ. ನೇತ್ರಾವತಿ ನದಿ ದಾಟಿ ಬಂದ ಕಣ್ಣನ್ ನ್ನು ಕರತನ್ ಎಂಬ ವ್ಯಕ್ತಿ ಭೇಟಿ ಆಗುತ್ತಾನೆ. ಈ ವಿಚಾರಗಳನ್ನು ಕರತನ್ ಅರಸ ಕರುವಾವ್ ಕುರುಪ್ ಗೆ ತಿಳಿಸುತ್ತಾನೆ . ಅರಸ ಹಳೆ ದ್ವೇಷದಿಂದ ಊರಿನ ಕೆರೆಯೊಂದರಲ್ಲಿ ಮೀಯುತ್ತಿದ್ದ ಕಣ್ಣನ ರುಂಡ ಬೇರ್ಪಡಿಸುತ್ತಾನೆ. ಕಣ್ಣನ್ ತಂದಿದ್ದ ಆಯುಧಗಳನ್ನು ಕೆರೆಗೆ ಬಿಸಾಕಿದನು. ತದನಂತರ ಮನೆಗೆ ತೆರಳಿದ ಅರಸನಿಗೆ ದುರಂತದ ಅನುಭವ ಆಗುತ್ತದೆ.
ಇದನ್ನು ಜ್ಯೋತಿಷ್ಯರ ಮೊರೆ ಹೋದಾಗ ತುಳುನಾಡಿನ ಪಿಲ್ಚಂಡಿ ದೈವ ಕಣ್ಣನ್ ಜೊತೆ ಬಂದಿರುವ ವಿಚಾರ ತಿಳಿಯುತ್ತದೆ. ಆ ದೈವನ್ನು ನರಸಿಂಹ ಅವತಾರದಲ್ಲಿ ಆರಾಧಿಸಬೇಕಂದು ತಿಳಿಸಲಾಯಿತು. ಆದರೆ ಅರಸ ಕುರುವಾವ್ ಕುರುಪ್ ದೈವ ಕೋಟೆ ಭೇಧಿಸಿ ಕೆಂಡ ಸೇವೆ ಮಾಡಿ ಆವಾಹಾರ ಸ್ವೀಕಾರ ಮಾಡಿದರೆ ಮಾತ್ರ ನಂಬುವುದಾಗಿ ಹೇಳುತ್ತಾನೆ. ದಾರಿ ಮುಚ್ಚಿದ ಕೋಟೆ ಕಟ್ಟಿ 108 ಕಟ್ಟಿಗೆಯ ಮೇಲೆರಿ ನಿರ್ಮಿಸಿ ಕೋಳಿ,ಬಾಳೆ,ಹೊದಲು ಮುಂತಾದ ಆಹಾರ ಇರಿಸುತ್ತಾನೆ. ಮಲವ ಸಮುದಾಯದ ವರವೇನು ವರಪ್ಪನ್ ಎಂಬ ವ್ಯಕ್ತಿಗೆ ದೈವದ ಆವೇಶ ಭರಿಸಲು ಸೂಚಿಸಲಾಯಿತು. ವರವೇನು ವರಪ್ಪನ್ಗೆ ಕನಸಿನಲ್ಲಿ ಅಗೋಚರ ಶಕ್ತಿ ಬಂದು ವಿಷ್ಣುಮೂರ್ತಿ ದೈವ ಕಟ್ಟುವ ರೀತಿಯ ಬಗ್ಗೆ ತಿಳಿ ಹೇಳಲಾಯಿತು ಎಂದು ಕತೆ ಇದೆ.
ದೈವ ಕಟ್ಟಿ ಆವೇಶ ಭರಿತನಾದ ವರವೇನು ವರಪ್ಪನ್ ಕೋಟೆ ಬೇಧಿಸಿ ಕೆಂಡ ಸೇವೆ ಮಾಡಲು ಅಣಿಯಾಗುತ್ತಾನೆ. ಆಗ ಕುರುವಾವ್ ಕರುಪ್ಪನ್ ಸಮುದಾಯದವರು ತಡೆಯುತ್ತಾರೆ . ತದನಂತರ ಕೋಟೆ ಭೇಧಿಸಿ ಕೆಂಡ ಸೇವೆಯನ್ನು ವಿಷ್ಣು ಮೂರ್ತಿ ದೈವ ಮಾಡುತ್ತದೆ. ವಿಷ್ಣು ಮೂರ್ತಿ ದೈವವೂ ಸುಳ್ಯ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಗೌಡ ಜನಾಂಗದ ಮನೆ ದೈವವಾಗಿ ಆರಾಧಿಸಲ್ಪಡುತ್ತಿದೆ. ಒತ್ತೆಕೋಲದ ಆರಂಭದಲ್ಲಿ ಶಾಂತಕಾರಂ ಭುಜಗ ಶಯನಂ, ಪದ್ಮನಾಭಂ ಸುರೇಶಂ,ವಿಷ್ಣುಧಾರಂ,ಗಗನ ಸದೃಶಂ,ಮೇಘವರ್ಣಂ ಶುಭಾಂಗಂ ಲಕ್ಷ್ಮಿ ಕಾತಂ ಕಮಲಂ ನಯನಂ ಯೋಗಿ ಹೃದ್ಯಾನ ಗಮ್ಯಂ,ವಂದೇ ವಿಷ್ಣುಂ ,ಭವ ಭಯ ವರದಂ ಸರ್ವ ಲೋಕಾಕೈನಾಥಂ ಎಂದು ಸಂಸ್ಕೃತ ಮಿಶ್ರಿತ ಶ್ಲೋಕ ಹೇಳುವ ಮೂಲಕ ಆರಂಭಿಸುತ್ತಾರೆ.
ವಿಷ್ಣು ಮೂರ್ತಿಯ ನುಡಿಗಟ್ಟಿನಲ್ಲಿ ದೈವದ ಹಿಂದಿನ ಕತೆಯನ್ನು ಹೀಗೆ ಹೇಳಾಗುತ್ತದೆ.
ಮಂಗಳಾಪುರತ್ತೆ ಕೋಯಿಲ್ ಕುಡುಪ್ಪಾಡಿ ಬೀಡ್ ಆಧಾರಮಾಯಿ ನಾಡ್ ತೇಜ ಕಣ್ಣನೆ ಕಂಡಿಟ್ಟಿ ಕಣ್ಣನೇ ಕೆಯ್ಯೆ ಪಿಡಿಚ್ಚು ಒರಿ ವ್ಯಾಯವಟ್ಟಕಾಲಂ ಕಣ್ಣನ್ ತನ್ನೇ ಪಾಲಮೃತಂ ಅಮೃತವಿಚ್ಚಿ ಎನ್ನಿತೊ ಮೂನರ ಕೋಟಿ ತುಳುವನ್ ಪಿಲಿಭೂತಂ ಎನ್ನ ಪೇರುಂ ವಿಚ್ಚ್ ವಿಳಿಚ್ಚು. ತುಳುನಾಡಿನ್ನ್ ಮಲನಾಡಿ ಕಾಣಮೆನ್ನ್ ಕರುದಿ ಪಾಲಂದಾಯಿ ಕಣ್ಣನೇ ಕೂಡಿ ಕೋಲತ್ತ್ ನಾಡಿಲೆಕ್ಕ್ ಕೈಯೆಡುತ್ತ್, ಕದಳಿಕೊಳಂ ಸಮೀಪಿಕ್ಯೂಂ ಕುರುವಾಡನ್ ಅಂಗಬಾಡಿ ಕಣ್ಣನೇ ನಾಶಂ ಚೆಯ್ದು. ಕುರುವಾಡನ್ ವೀಡ್ ಚೆಂಡಾಡಿಚ್ಚ ಕಳಮಾಯಿ ತೀರ್ತು. ಶೇಷಂ ಕೋಟಕ್ ಪುರಮೆ ಮೇಲೇರಿಯುಂ ಕೊಟ್ಟಿ ಏಳ್ ದಿವಸತ್ತೇ ಅತ್ತಂ ತೋತ್ತಂ ಕೈಪಿಚ್ಚು ಎಟ್ಟಾಂ ದಿವಸಂ ಕೋಟಾಯುಂ ತಗರ್ತ್ ದುಷ್ಟಮ್ಮಾರೆ ನಿಗ್ರಹಿಚ್ಚು ,ಭಕ್ತಮ್ಮಾರೆ ಉದರಿಚ್ಚ್ ನೂಟ್ಟಿ ಅರವದ್ ಗಾವುದಂ ಭೂಮಿಕ್ಕ್ ಅಡವಿಡೆ ಮಹಾವಿಷ್ಣು ಮೂರ್ತಿಯೆನ್ನ್ ನೆಲನಿನ್ನು.ಪಂಡ್ ಪರದೇವತ ದೇವಾರ್ನುಾಕ್ಕುಂ ಆಯಿಟ್ ತಪಸ್ವಿಗಳ್ಕ್ ಆಯಿಟ್ ಕಾಣಾಂಕಿಟ್ಟತ್ತಾ ಮಾಯೆ ಕಲಿಕಾಲತ್ತ್ ಕಣ್ಣನೆ ನಿಮಿತ್ತಂ ಕೋಟಾಪುರಂ ಮೊಗೆಯಂಡೆ ಪಡಿಞಾಟ್ಟಾಯಿಲ್ ಎಲ್ಲಾವರ್ಕ್ ಕಂಡ್ಕಿಟ್ಟಿ… ಎಂದು ದೈವದ ಹಿನ್ನೆಲೆ ಬಗ್ಗೆ ಹೇಳಲಾಗಿದೆ
(ಭಾಸ್ಕರ ಜೋಗಿಬೆಟ್ಟು ಅವರು ಹವ್ಯಾಸಿ ಬರಹಗಾರ, ದೈವಾರಾಧನೆ ಹಾಗೂ ಜಾನಪದ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದವರು )
ಏಪ್ರಿಲ್ ಮಧ್ಯದ ವೇಳೆಗೆ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಾಗಬಹುದು, ಈ ಬಾರಿ…
ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್…
ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಜೂನ್ 29 ರಿಂದ, …
ಡೀಸೆಲ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು, ಟೋಲ್ ಶುಲ್ಕ ಕಡಿಮೆ ಮಾಡಬೇಕು,…
ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…
ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…