ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ

May 22, 2025
10:48 PM

ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ “ಮಹಿಳಾ ಗ್ರಾಮಸಭೆ” ಯು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಇವರ ಅಧ್ಯಕ್ಷತೆಯಲ್ಲಿ ಜರಗಿತು.

Advertisement
Advertisement

ಈ ಸಭೆಯಲ್ಲಿ “ಮಹಿಳೆ ಮತ್ತು ಕಾನೂನು”  ಬಗ್ಗೆ ನ್ಯಾಯವಾದಿ ಲತಾಕುಮಾರಿ ಅವರು ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಆಗುವ ಶೋಷಣೆಯನ್ನು ತಪ್ಪಿಸಲು ಮತ್ತು ಭಯವನ್ನು ಹೋಗಲಾಡಿಸಲು ಕಾನೂನಿನ ಅರಿವು ಹೊಂದಿರಬೇಕು. ಹಲವು ದೌರ್ಜನ್ಯವನ್ನು ತಪ್ಪಿಸಲು ಇಂದಿನ ದಿನಗಳಲ್ಲಿ ಹೊಸ ಹೊಸ ಕಾನೂನನ್ನು ಜಾರಿಗೆ ತರಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದ 14ನೇ ವಿಧಿಯಲ್ಲಿ ಬರುವ ಸಮಾನತೆಯ ಬಗ್ಗೆ ತಿಳಿಸಿದರು.

NRLMನ ಮೇರಿ ಎಸ್‌   ಅವರು  ಸಂಜೀವಿನಿ ಒಕ್ಕೂಟದ ಮೂಲಕ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು ಎಂದರು.”ರಾಷ್ಟೀಯ ಕೃಷಿ ವಿಕಾಸ ಯೋಜನೆ”  ಬಗ್ಗೆ ಡಾ. ಅಶ್ವತಿ ,ತಾಳೆ ಕೃಷಿಯ ಬಗ್ಗೆ ಆಲೆಟ್ಟಿ ಗ್ರಾಮದ ಪ್ರಗತಿಪರ ಕೃಷಿಕರಾದ  ಅಶೋಕ್ ಪ್ರಭು , ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ, ಕಾನೂನು ಬಗ್ಗೆ ದೀಪಿಕಾ ಪಿ, ಮಹಿಳಾ ಸಬಲೀಕರಣದ ಬಗ್ಗೆ ಅನುಷ್ಯ ,ಸ್ವಸಹಾಯ ಸಂಘಗಳ ಬಗ್ಗೆ  ಅವಿನಾಶ್ ಡೆಲ್ಲಾರಿಯೋ, ಬ್ಯಾಂಕ್ ನಿಂದ ಸಿಗಬಹುದಾದ ಸಾಲ ಸೌಲಭ್ಯಗಳ ಬಗ್ಗೆ ಸುಜಾತ ಮಾಹಿತಿ ನೀಡಿದರು.

ಶಿಲ್ಪಾ ಸನತ್ ಅಧ್ಯಕ್ಷರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಂಪಾಜೆ, ತಾಳೆ ಬೆಳೆ ಕೃಷಿ 3F ಆಯಿಲ್ ಕಂಪನಿಯ ಕ್ಲಸ್ಟರ್ ಸೂಪರ್ ವೈಸರ್ ಸುಳ್ಯ ವಲಯ ಶ್ರೀ ರವಿಶಂಕರ್,  ಪುಷ್ಪಲತಾ ಕೆ ಆರ್ PHC ಅರಂತೋಡು,  ಚಿತ್ರ ಐ CHO ಗೂನಡ್ಕ,  ಹರ್ಷಿತ CHO ಗೂನಡ್ಕ, ಗ್ರಾಮ ಪಂಚಾಯತ್ ನ ಗೌರವಾನ್ವಿತ ಸದಸ್ಯರುಗಳಾದ  ಲೆಸ್ಸಿ ಮೊನಾಲಿಸಾ,  ಜಗದೀಶ್ ರೈ,  ರಜನಿ ಶರತ್, ಸುಶೀಲಾ ಪಿ, ಮಾಜಿ ಅಧ್ಯಕ್ಷರಾದ  ಯಮನ ಬಿ ಎಸ್, ಸುಂದರಿ ಮುಂಡಡ್ಕ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು, ಗ್ರಾಮಸ್ಥರು ಮತ್ತು ಮಹಿಳೆಯರು ಉಪಸ್ಥಿತರಿದ್ದು ಮಾಹಿತಿಯನ್ನು ಪಡೆದುಕೊಂಡರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ  ಸರಿತಾ ಓಲ್ಗಾ ಡಿ’ಸೋಜಾ ಎಲ್ಲರನ್ನೂ ಸ್ವಾಗತಿಸಿದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಕಾರ್ಯಕ್ರಮ ನಿರೂಪಿಸಿದರು.  ಗ್ರಾಮ ಪಂಚಾಯತ್ ಸದಸ್ಯರಾದ ರಜನಿ ಶರತ್ ವಂದಿಸಿದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group