ಪ್ರಧಾನಿಗಳಿಗೆ ಪಂಜಾಬ್ ರಾಜ್ಯದಲ್ಲಿ ಭದ್ರತಾ ವಿಷಯದಲ್ಲಿ ಇಮೋಶನಲ್ ಪಾಲಿಟಿಕ್ಸ್ ಮಾಡುವುದು ಬೇಡ. ರಾಜಕೀಯ ಲಾಭಕ್ಕೆ ಇಮೋಷನಲ್ ಪಾಲಿಟಿಕ್ಸ್ ಅಗತ್ಯವಿಲ್ಲ. ಭದ್ರತಾ ವಿಷಯದಲ್ಲಿ ನಿವೃತ್ತಿ ನ್ಯಾಯಮೂರ್ತಿ ನೇತೃತ್ವದಲ್ಲಿ ಈಗಾಗಲೇ ಪ್ರಕರಣ ತನಿಖೆ ನಡೆಸಲು ಪಂಜಾಬ್ ಸರ್ಕಾರ ನೀಡಿದೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪಂಜಾಬ್ ಕಾರ್ಯಕ್ರಮಕ್ಕೆ ಜನ ಸೇರಿಲ್ಲವೆಂದು ಈಗ ಭದ್ರತಾ ಆರೋಪ ಮಾಡುತ್ತಿದ್ದಾರೆ. ಹವಾಮಾನ ಚೆನ್ನಾಗಿಲ್ಲವೆಂಬುದು ಗೊತ್ತಿದೆ, ಅಧಿಕಾರಿಗಳೇ ಈ ಮಾಹಿತಿ ಒದಗಿಸಿದ್ದಾರೆ. ಹೀಗಿದ್ದರೂ ಏಕೆ ಪ್ರಯಾಣ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಸೆಕ್ಯೂರಿಟಿ ವಿಫಲ ಆಗಿದ್ದರೆ ಕ್ರಮ ಕೈಗೊಳ್ಳಲು ಪಂಜಾಬ್ ಮುಖ್ಯಮಂತ್ರಿಗಳು ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದಾರೆ, ಮೂರು ದಿನದಲ್ಲಿ ವರದಿ ಸಿಗಲಿದೆ ಎಂದು ಖರ್ಗೆ ಹೇಳಿದ್ದಾರೆ. ಪ್ರಧಾನಿಗಳು ಬಂದರೆ 10 ಬಾರಿ ಚೆಕ್ ಮಾಡ್ತಾರೆ, ಭದ್ರತಾ ಸಿಬ್ಬಂದಿಗಳು ಚೆಕ್ ಮಾಡ್ತಾರೆ, ಅದೆಲ್ಲಾ ಆದ ಬಳಿಕವೇ ಪ್ರಧಾನಿಗಳಿಗೆ ಬಿಡ್ತಾರೆ ಹಾಗಿದ್ದರೂ ಇಲ್ಲಿ ಸೆಕ್ಯೂರಿಟಿ ಪೇಲ್ಯೂರ್ ಆಗುತ್ತೆ ಅಂದರೆ ಅದಕ್ಕೆ ಅವರೇ ಹೊಣೆ ಆದರೂ ಪಂಜಾಬ್ ಸಿಎಂ ಮೇಲೆ ಗೂಬೆಕೂರಿಸ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.