ಚಿತ್ರ:ಶ್ರೀಪಡ್ರೆ
ಆತ್ಮ ನಿರ್ಭರ ಭಾರತದ ಕನಸಿನ ಬಗ್ಗೆ ಉಲ್ಲೇಖ ಮಾಡಿದ ಪ್ರಧಾನಿಗಳು ನೀವು ಕೈಮಗ್ಗದ ಬಟ್ಟೆ ಖರೀದಿ ಮಾಡಿದರೆ ದೇಶದ ಬಡ ಜನರಿಗೆ ನೆರವಾಗಲಿದೆ. ಖಾದಿ ಮಳಿಗೆಯಲ್ಲಿ ಒಂದು ದಿನದಲ್ಲಿ 1 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂಬುದು ಸಾಬೀತಾಗಿದೆ ಎಂದ ಪ್ರಧಾನಿಗಳು ನಾವು ದೇಶದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುತ್ತೇವೆ. ಇಲ್ಲಿ ಹೊಸ ಹೊಸ ಉದ್ಯಮದ ಐಡಿಯಾಗಳು ಸಿಗುತ್ತವೆ. ಯುವಕರು ಈ ಮೂಲಕ ಪ್ರೇರಿತರಾಗಿ ಕಾರ್ಯನಿರ್ವಹಣೆ ಮಾಡಲು ಅನುಕೂಲವಾಗಿದೆ. ನಾವು ಹೊಸದನ್ನು ಕಲಿಯಬೇಕಾದರೆ ಪ್ರಯೋಗಳನ್ನು ಮಾಡಬೇಕು. ರೈತರು, ಯುವಕರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ. ಅದರಲ್ಲಿ ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬಾಳೆಯ ವಿವಿಧ ಉತ್ಪನ್ನಗಳನ್ನು ಬಾಳೆ ಹಿಟ್ಟಿನಿಂದ ತಯಾರು ಮಾಡುತ್ತಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದರು. ಬಾಳೆ ಮರದ ನಾರಿನಿಂದ ಇಂದು ಹ್ಯಾಂಡ್ ಬ್ಯಾಗ್ ತಯಾರು ಮಾಡಲಾಗುತ್ತಿದೆ. ಇದರಿಂದ ಮಹಿಳೆಯರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ಸಿಕ್ಕಿದೆ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬಾಳೆಯ ವಿವಿಧ ಉತ್ಪನ್ನಗಳನ್ನು ಬಾಳೆ ಹಿಟ್ಟಿನಿಂದ ತಯಾರು ಮಾಡುತ್ತಿದ್ದಾರೆ. ಗುಲಾಬ್ ಜಾಮೂನು, ದೋಸೆ ಮೊದಲಾದ ಉತ್ಪನ್ನಗಳನ್ನು ಮಹಿಳೆಯರು ಮಾಡುತ್ತಿದ್ದಾರೆ.ಇಲ್ಲಿ ಹೊಸ ಆವಿಷ್ಕಾರ ಮಹಿಳೆಯರಿಂದಲೇ ಆಗಿದೆ ಎಂದು ಉಲ್ಲೇಖಿಸಿದರು.
ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ವೇಗವಾಗಿ ಬಾ ಕಾ ಹು ಬಗ್ಗೆ ಪ್ರಚಾರ ಪಡೆಯಲು ಅಡಿಕೆ ಪತ್ರಿಕೆ ಹಾಗೂ ಅ ಪ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಅವರು ಕಾರಣರಾಗಿದ್ದಾರೆ. ಬೆಳಗಾವಿಯ ನಯನಾ ಆನಂದ್ ಎಂಬ ಮಹಿಳೆಯ ಕರೆಯ ನಂತರ ಬಾಕಾಹು ಹಿಂದೆ ಬಿದ್ದ ಅಡಿಕೆ ಪತ್ರಿಕೆ ಬಳಗಕ್ಕೆ ಅಜ್ಜಪ್ಪ ಎನ್ನುವ ರೈತರು ಈ ಆವಿಷ್ಕಾರದಲ್ಲಿ ಮುಂದಿರುವುದು ತಿಳಿಯಿತು. ಆ ಬಳಿಕ ಕೆಲವೇ ದಿನದಲ್ಲಿ ಬಾಳೆಕಾಯಿ ಹುಡಿಯ ಬಹುದೊಡ್ಡ ಆಂದೋಲನವೇ ನಡೆದಿದೆ. ಇದೀಗ ಪ್ರಧಾನಿಗಳ ಗಮನವೂ ಸೆಳೆದಿದೆ.
ಈಗಿನಂತೆ ಎಪ್ರಿಲ್ 7 ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.
ಕಲಬುರಗಿ ಹೈಕೋರ್ಟ್ ಪೀಠವು ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಂತೆ ಆದೇಶ ನೀಡಿದರೂ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಸಿರು ಹೊದಿಕೆಯನ್ನು ಹೆಚ್ಚಿಸುವ ಸಲುವಾಗಿ ಅರಣ್ಯ ಇಲಾಖೆಯು ಹಬ್ಬದ…
ಎಳೆಯ ಹಲಸಿನ ಕಾಯಿ ಪಕೋಡ(Tender Jack Fruit)ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ…