ಕಾಳುಮೆಣಸು ಕೃಷಿಯತ್ತ ಲಕ್ಷ್ಯ ಹರಿಸಿದರೆ, ಕೃಷಿಕರಿಗೆ ಯಶಸ್ಸು ಇರುವುದು ಖಚಿತ. ಬೆಲೆ ಇರುವ ಕೃಷಿಯತ್ತ ವಾಲುವ ಬದಲಾಗಿ ಬೆಲೆ ಉಳಿಸಿಕೊಳ್ಳುವ ಕೃಷಿಯತ್ತ ರೈತರು ಆಸಕ್ತರಾಗಬೇಕು ಎಂದು ಐಸಿಎಆರ್ ಅಪ್ಪಂಗಳದ ಹಿರಿಯ ವಿಜ್ಞಾನಿ ಡಾ.ಅಂಕೇ ಗೌಡ ಹೇಳಿದರು.
ಅವರು ಸುಳ್ಯದ ಎಪಿಎಂಸಿ ಸಭಾಭವನದಲ್ಲಿ ತೋಟಗಾರಿಕಾ ಇಲಾಖೆ, ಐಸಿಎಆರ್ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ, ಹಾಗೂ ಸುಳ್ಯ ರೈತ ಉತ್ಪಾದಕ ಕಂಪನಿ ಆಶ್ರಯದಲ್ಲಿ ನಡೆದ ಕಾಳುಮೆಣಸು ಕೃಷಿಯ ನಿರ್ವಹಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾಳುಮೆಣಸು ಉತ್ಪಾದನೆಯಲ್ಲಿ ಕರ್ನಾಟಕ ಮುಂದುವರಿಯಬೇಕಿದೆ. ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಬಹುಪಾಲು ಕಡೆ ಕಾಳುಮೆಣಸು ಕೃಷಿಯನ್ನು ಮಾಡಲು ಸಾಧ್ಯ ಇದೆ. ಏಕ ಬೆಳೆಯ ಬದಲು ಮಿಶ್ರ ಬೆಳೆಯು ರೈತರನ್ನು ಸುದೃಢಗೊಳಿಸುತ್ತದೆ. ಅದಕ್ಕಾಗಿ ಅಡಿಕೆಯ ಜೊತೆಗೆ ಕಾಳುಮೆಣಸು ಕೃಷಿಯ ಕಡೆಗೂ ಕೃಷಿಕರು ಆಸಕ್ತರಾಗಬೇಕು ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಸುಳ್ಯ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೀರಪ್ಪ ಗೌಡ ಮಾತನಾಡಿ, ಅಡಿಕೆಯ ಜೊತೆಗೆ ಕಾಳುಮೆಣಸು ಕೃಷಿಯನ್ನೂ ರೈತರು ಬೆಳೆಸಬೇಕಿದೆ. ಈ ಮೂಲಕ ಯಶಸ್ವಿ ಕೃಷಿಕರಾಗಲು ಸಾಧ್ಯ ಎಂದರು.
ಸಭೆಯಲ್ಲಿ ಸುಳ್ಯ ತೋಟಗಾರಿಕಾ ಹಿರಿಯ ನಿರ್ದೇಶಕರಾರ ಸುಹಾನ ಪಿ, ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್, ವಿಜ್ಞಾನಿ ಡಾ.ಪೈಜಲ್ ಉಪಸ್ಥಿತರಿದ್ದರು.ಸುಳ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕ ಜಯರಾಮ ಮುಂಡೋಳಿಮೂಲೆ ಸ್ವಾಗತಿಸಿದರು.
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…
ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…
ಪಡಿತರ ಚೀಟಿಗೆ ಆಧಾರ್ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…
ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…
ಎಥೆನಾಲ್ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…