ದಕ್ಷಿಣ ಭಾರತದಲ್ಲಿ ಮಳೆ ವಾತಾವರಣ ಹೆಚ್ಚಾಗುತ್ತಿದ್ದರೆ ಉತ್ತರ ಭಾರತದಲ್ಲಿ ತಾಪಮಾನ ಏರುತ್ತಲೇ ಇದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆಗಮಿಸಿದೆ. ಮುಂಗಾರು ಪೂರ್ವ ಮಳೆಯು ಕೆಲವೆಡೆ ಬಿದ್ದಿದೆ. ತಕ್ಕ ಮಟ್ಟಿಗೆ ತಾಪಮಾನ ತಗ್ಗುವ ಸಾಧ್ಯತೆ ಇದೆ. ಆದರೆ ದೇಶದ ರಾಜಧಾನಿ ದೆಹಲಿಯಲ್ಲಿ 42 ರಿಂದ 43 ಡಿಗ್ರಿ ಉಷ್ಣಾಂಶವಿದೆ. ದಿನನಿತ್ಯ 2 ಎಳನೀರನ್ನ ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಅಲ್ಲಿ ಎಳ ನೀರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಆದರೆ ದೂರದ ದೆಹಲಿಗೆ ಎಳನೀರು ಹೋಗುವು ನಮ್ಮ ಕರುನಾಡಿನಿಂದ, ಅದರಲ್ಲೂ ಮಂಡ್ಯದಿಂದ. ಅದರಲ್ಲೂ ಮದ್ದೂರಿನ ಎಳನೀರು ಅಂದ್ರೆ ದೆಹಲಿಯಲ್ಲಿ ಸಿಕ್ಕಾಪಟ್ಟೆ ಫೇಮಸ್.
ಮಂಡ್ಯದ ಎಳನೀರು ಈಗ ದೆಹಲಿ, ರಾಜಸ್ಥಾನ ಹಾಗೂ ಯುಪಿಯಲ್ಲಿಯೂ ಜನರ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಬೃಹತ್ ಲಾರಿ ಮೂಲಕ ಎಳನೀರನ್ನು ಉತ್ತರಭಾರತದ ರಾಜ್ಯಗಳಿಗೆ ಮಂಡ್ಯದಿಂದ ಸಾಗಿಸಲಾಗುತ್ತಿದೆ. ರೈತರ ತೋಟದಿಂದ ಲೋಡ್ ಗಟ್ಟಲೆ ಎಳನೀರು ಸಾಗಾಟವಾಗುತ್ತಿದೆ. ತಮಿಳುನಾಡು, ಯುಪಿ, ರಾಜಸ್ತಾನ ಹಾಗೂ ದೆಹಲಿಗೆ ರವಾನೆಯಾಗುತ್ತಿದೆ. ಬೇಡಿಕೆ ಹೆಚ್ಚಾದಂತೆಯೇ 17 ರೂ ಇದ್ದ ಎಳನೀರು ಈಗ 35 ರೂ ಗೆ ಹೆಚ್ಚಾಗಿದೆ. ಈಗ ಎಳನೀರು ಒಳ್ಳೆ ಆದಾಯ ತಂದು ಕೊಡುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement