ಕನ್ನಡ ಓದುಗರ ಮನೆ ಮಾತಾಗಿದ್ದ ಮಂಗಳ ವಾರಪತ್ರಿಕೆ ತನ್ನ ಪ್ರಕಟಣೆ ನಿಲ್ಲಿಸಿದೆ. ಈ ವಾರ ಕೊನೆಯ ಸಂಚಿಕೆ ಮುದ್ರಣಗೊಂಡಿದೆ. ಈ ಬಗ್ಗೆ ಅಧಿಕೃತವಾಗಿ ಪತ್ರಿಕೆ ಸಂಪಾದಕರು ಪ್ರಕಟಣೆಯನ್ನು ನೀಡಿದ್ದಾರೆ. 40 ವರ್ಷಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ಪ್ರಸಾರ ಸ್ಥಗಿತಗೊಂಡಿತು.ಅನೇಕ ಓದುಗರ ನಿರಾಸೆಗೊಂಡಿದ್ದಾರೆ.
ಕನ್ನಡ ಪತ್ರಿಕಾರಂಗದಲ್ಲಿ ಗುರುತಿಸಿಕೊಂಡಿದ್ದು ಮಾತ್ರವಲ್ಲ ಓದುಗ ವಲಯದಲ್ಲಿ ವಿಶೇಷ ಸ್ಥಾನಪಡೆದುಕೊಂಡಿದ್ದ ಮಂಗಳ ವಾರಪತ್ರಿಕೆ ಈ ವಾರ ಕೊನೆಯ ಸಂಚಿಕೆ ಪ್ರಕಟಿಸಿದೆ. ಗ್ರಾಮೀಣ ಭಾಗದಿಂದ ತೊಡಗಿ ಅನೇಕರ ಓದು ಆರಂಭವಾಗಿದ್ದೇ ಮಂಗಳ ವಾರಪತ್ರಿಕೆ ಮೂಲಕ. ಮಕ್ಕಳಿಗೆ ಬಾಲಮಂಗಳದ ಮೂಲಕ ಓದು ಆರಂಭಿಸಿ ಮಂಗಳ ಓದುವಂತೆ ಮಾಡಿ ಇತರ ಪತ್ರಿಕೆಗಳೂ ಓದುವ ಹಾಗೆ ಕಳೆದ 40 ವರ್ಷಗಳಲ್ಲಿ ಮಂಗಳ ಮಾಡಿತ್ತು. ಇದೀಗ ಮಂಗಳ ತನ್ನ ಯಾನ ನಿಲ್ಲಿಸಿದೆ.
ಕೊರೋನಾ ನಂತರ ಪತ್ರಿಕೋದ್ಯಮಕ್ಕೆ ಸಾಕಷ್ಟು ಸಂಕಟವಾಗಿತ್ತು. ಡಿಜಿಟಲ್ ಮಾಧ್ಯಮಗಳು ವೇಗ ಪಡೆದುಕೊಂಡವು. ಹಾಗಿದ್ದೂ ಕಳೆದ ಮೂರು ವರ್ಷಗಳ ಕಾಲ ಮಂಗಳವನ್ನು ಮುನ್ನಡೆಸಿದರು.ಇದೀಗ ಆರ್ಥಿಕ ತುರ್ತು ಎದುರಾಗಿದೆ. ಹೀಗಾಗಿ ಅನಿವಾರ್ಯವಾಗಿ ಪತ್ರಿಕೆ ಮುದ್ರಣ ಸ್ಥಗಿತಗೊಂಡಿದೆ. ಅನೇಕ ಓದುಗರಿಗೆ ನಿರಾಸೆಯುಂಟಾಗಿದೆ.
ಗ್ರಾಮೀಣ ಭಾಗದಲ್ಲಿ ಟಿವಿ, ಮೊಬೈಲ್ ಇಲ್ಲದೇ ಇರುವ ಸಂದರ್ಭದಲ್ಲಿ ಧಾರವಾಹಿ, ಕತೆ, ಕವನ ಸೇರಿದಂತೆ ಸಮಗ್ರ ಓದಿಗೆ ಮಂಗಳ ಪತ್ರಿಕೆ ಬಹುತೇಕ ಮನೆಗಳಿಗೆ ಬರುತ್ತಿತ್ತು. ಈ ಕತೆಗಳು ಕಾರ್ಯಕ್ರಮಗಳ ಸಂದರ್ಭ ಚರ್ಚೆಯೂ ಆಗುತ್ತಿತ್ತು. ಗ್ರಾಮೀಣ ಭಾಗದ ಓದುಗರಿಗೆ ಅಂದು ಮಂಗಳ ವಾರದ ಖಾಯಂ ಪುಸ್ತಕ. ಅನೇಕ ಓದುಗರನ್ನು ಮಂಗಳ ಸೃಷ್ಟಿ ಮಾಡಿತ್ತು.
ಅಡಿಕೆ ಬೆಳೆ ರಾಜ್ಯದಲ್ಲಿ ಮಾತ್ರವಲ್ಲ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆ…
ಶುದ್ಧತೆಯ ವಿಚಾರ ಬಂದಾಗ ನಂಬಿಕೆಯೂ ಮುಖ್ಯ. ಅದಕ್ಕಾಗಿ, 8 ದಶಕಗಳಿಂದ ನಿಮ್ಮ ಎದುರಿನಲ್ಲಿ…
ಹವಾಮಾನ ಬದಲಾವಣೆ ಪ್ರಪಂಚದ ಎಲ್ಲೆಡೆಯೂ ಸವಾಲಾಗುತ್ತಿದೆ.ತಾಪಮಾನ ಏರಿಕೆಯ ಕಾರಣದಿಂದ ಚಂಡಮಾರುತಗಳ ಸಂಖ್ಯೆ ಹೆಚ್ಚಾಗುವ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಂಜೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…