ಮಳೆಗಾಲ | ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಮನವಿ | ಇಡೀ ಜಿಲ್ಲೆಗೂ ಅಗತ್ಯವಿದೆ ಈ ಮನವಿ |

Advertisement
Advertisement
Advertisement
  • ಮಳೆಗೆ ಮುನ್ನೆಚ್ಚರಿಕೆ
  • ಮಂಗಳೂರುಮಹಾನಗರ ಪಾಲಿಕೆ ವ್ಯಾಪ್ತಿ ಮನವಿ
  • ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ
  • ಇಡೀ ಜಿಲ್ಲೆಗೂ ಈ ಮನವಿ ಅಗತ್ಯ

ಇದೇ ತಿಂಗಳ 17 ರಿಂದ 19ರ ವರೆಗೆ ಭಾರಿ ಮಳೆಯಾಗುವ ಸಂಭವವಿರುವುದರಿಂದ ಹಾಗೂ ಜೂನ್ ತಿಂಗಳಾರಂಭದಲ್ಲಿ ಮುಂಗಾರು ಪ್ರಾರಂಭವಾಗುವುದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ, ಮಳೆಗಾಲ ಪೂರ್ಣಗೊಂಡ ನಂತರ ಆ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Advertisement

ಗುಡ್ಡ ಅಗೆದು ನಿವೇಶನ ಸಮತಟ್ಟು ಗೊಳಿಸುವುದರಿಂದ ಗುಡ್ಡ ಕುಸಿದು ಸಾರ್ವಜನಿಕರಿಗೆ ತೊಂದರೆಯಾಗಲಿದೆ, ಆದ ಕಾರಣ ಗುಡ್ಡ ಅಗೆದು ನಿವೇಶನವನ್ನು ಸಮತಟ್ಟುಗೊಳಿಸಿ ಮಣ್ಣು ಸಾಗಾಟ ಮಾಡುವುದನ್ನು ಈ ಸಂದರ್ಭದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಮುಖ್ಯವಾಗಿ ಈಗಾಗಲೇ ಆರಂಭಿಸಿರುವ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಅಕ್ಕಪಕ್ಕದ ನಿವೇಶನಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಮತ್ತು ತಗ್ಗು ಪ್ರದೇಶವಿರುವ ಸಂದರ್ಭದಲ್ಲಿ ಯಾವುದೇ ಅನಾಹುತವಾಗದ ಹಾಗೆ ತಡೆಗೋಡೆ ನಿರ್ಮಿಸಿ ಸೂಕ್ತ ರೀತಿಯಲ್ಲಿ ಭದ್ರಪಡಿಸಬೇಕು, ತಪ್ಪಿದಲ್ಲಿ ಕೆ.ಎಂ.ಸಿ ಕಾಯ್ದೆಯಂತೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಇಡೀ ಜಿಲ್ಲೆಗೂ ಈ ಮನವಿ ಹೆಚ್ಚು ಸೂಕ್ತವಾಗಿದೆ. ಮಳೆ ಆರಂಭದ ವೇಳೆ ಹಾಗೂ ಜೋರಾದ ಮಳೆಯ ವೇಳೆ ಮಣ್ಣಿನ ಕಾಮಗಾರಿಗಳು ಇದುವರೆಗೂ ಹೆಚ್ಚು ಅಪಾಯವನ್ನು  ತಂದಿದೆ. ಮಣ್ಣು ಕುಸಿತ, ಗೋಡೆ ಕುಸಿತದಂತಹ ಘಟನೆಗಳು ಇದುವರೆಗೆ ನಡೆದಿರುವ ಹಿನ್ನೆಲೆಯಲ್ಲಿ  ಈ ಮುಂಜಾಗ್ರತಾ ಕ್ರಮ ಇಡೀ ಜಿಲ್ಲೆಯಲ್ಲೂ ಮುಂದಿನ ದಿನಗಳಲ್ಲಿ ಅನ್ವಯಿಸುವಂತೆ ಜಾರಿಯಾಗಬೇಕಿದೆ.

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಮಳೆಗಾಲ | ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ ಮನವಿ | ಇಡೀ ಜಿಲ್ಲೆಗೂ ಅಗತ್ಯವಿದೆ ಈ ಮನವಿ |"

Leave a comment

Your email address will not be published.


*