ಇತ್ತೀಚಿನ ದಿನಗಳಲ್ಲಿ ಸಮುದ್ರ ಮೀನು(sea Fish) ಬೆಲೆ ಗಗನಕ್ಕೇರಿದ(Price hike) ಹಿನ್ನೆಲೆ ಮತ್ಸ್ಯ ಪ್ರಿಯರು ಕೆರೆ ಮೀನುಗಳ(Lake Fish) ಮೊರೆ ಹೋಗುತ್ತಿದ್ದಾರೆ. ಹಾಗೆ ಮೀನು ಸಾಕಾಣಿಕೆ ಕೂಡ ಉದ್ಯಮವಾಗಿ(Business) ಬೆಳೆಯುತ್ತಿದೆ. ಅನೇಕ ರೈತರು ಮೀನು ಸಾಕಾಣಿಕೆಯನ್ನು(Fishery) ಉಪ ಕಸುಬನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಹೆಚ್ಚಿನ ಕಡೆಗಳನ್ನು ಕೆರೆ ಮೀನು ಮಾರಾಟ ನಡೆಯುತ್ತದೆ. ಅಲ್ಲದೆ ಸಮುದ್ರ ಮೀನುಗಾರಿಕೆಗೆ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಬಿಡುವ ನೀಡುವ ಕಾರಣ ತಾಜಾ ಮೀನು ಸಿಗುವುದಿಲ್ಲ. ಹಾಗಾಗಿ ಹೆಚ್ಚಿನ ಜನತೆ ಕೆರೆ ಮೀನು ಕಡೆ ಒಲವು ತೋರುತ್ತಾರೆ. ಅದರಲ್ಲೂ ಜೀವಂತವಿರುವ ಮೀನುಗಳಿಗೆ ಸ್ವಲ್ಪ ಹೆಚ್ಚೇ ಡಿಮ್ಯಾಂಡ್ . ಮಳೆಗಾಲದಲ್ಲಿ ಹೀಗೆ ತಾಜಾ ಮೀನುಗಳು (Fresh Fish) ಸಿಗೋದೆ ಖುಷಿ. ಮಂಗಳೂರಿನ ಸರಕಾರಿ ಪ್ರಾಯೋಜಿತ ಮೀನು ಮಾರಾಟ ಉತ್ಸವದಲ್ಲಿ ತಾಜಾ ಮೀನುಗಳ ಭರ್ಜರಿ ಮಾರಾಟ ನಡೆಯಿತು.
ಮತ್ಸ್ಯ ಬೇಟೆ : ಮಂಗಳೂರಿನ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಮೀನುಗಾರಿಕಾ ಇಲಾಖೆಯ ಜಂಟಿ ಆಶ್ರಯದಲ್ಲಿ ಪಿಲಿಕುಳದ ಲೇಕ್ ಗಾರ್ಡನ್ ಕೆರೆಯಲ್ಲಿ ಮತ್ಸ್ಯಬೇಟೆ ನಡೆಯಿತು. ಹಿಡಿದ ತಾಜಾ ಮೀನುಗಳನ್ನು ಅಲ್ಲಿಯೇ ಮಾರಾಟ ಮಾಡಲಾಯಿತು. ರೋಹ್, ಕಾಟ್ಲ, ತಿಲೇಪಿಯಾ, ಮುಗುಡು ಹಾಗೂ ಗೌರಿ ಮೀನುಗಳು ಇಲ್ಲಿ ಲಭ್ಯವಿತ್ತು. ಕೆಜಿಗೆ 150ರೂಪಾಯಿನಂತೆ ಮೀನುಗಳ ಮಾರಾಟವಾದವು. ಖರೀದಿಸಿರುವ ಮೀನುಗಳನ್ನು ತುಂಡರಿಸಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪಿಲಿಕುಳದ ಐದು ಎಕರೆಯಷ್ಟು ವಿಸ್ತಾರವಿರುವ ಈ ಲೇಕ್ ಗಾರ್ಡನ್ ಕೆರೆಗೆ ಮೀನುಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಪ್ರತೀ ವರ್ಷ ಮೀನುಮರಿಗಳನ್ನು ಬಿಡಲಾಗುತ್ತದೆ. ಹಾಗೆಯೇ ವರ್ಷಂಪ್ರತಿ ಜುಲೈ ವೇಳೆಗೆ ಮತ್ಸ್ಯೋತ್ಸವ ನಡೆಸಲಾಗುತ್ತದೆ. ಈ ಬಾರಿ 2 ಟನ್‌ಗಳಷ್ಟು ಮೀನುಗಳು ಸಿಕ್ಕಿದೆ. ಜೊತೆಗೆ ಮೀನುಪ್ರಿಯರಿಗೆ ಅಲ್ಲೇ ಮೀನಿನ ಖಾದ್ಯವನ್ನು ತಯಾರಿಸುವ ವ್ಯವಸ್ಥೆಯನ್ನೂ ಮೀನುಗಾರಿಕೆ ಇಲಾಖೆ ಮಾಡಿತ್ತು. ಒಟ್ಟಿನಲ್ಲಿ ಮಳೆಗಾಲದಲ್ಲಿ ಪಿಲಿಕುಳದಲ್ಲಿ ನಡೆದ ಮತ್ಸ್ಯೋತ್ಸವಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಯಿತು.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…