ಕಾಲೇಜು ಯೂನಿಯನ್ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವನ್ನು ಪಸರಿಸುವುದರೊಂದಿಗೆ ಪ್ರತಿಯೊಬ್ಬರ ಸಮಸ್ಯೆ ಇಚ್ಛೆಗಳನ್ನು ಗಣನೆಗೆ ತೆಗೆದುಕೊಂಡು ಮುನ್ನಡೆಯುವ ಉತ್ತಮ ನಾಯಕತ್ವ ಗುಣ ಮಾತ್ರವಲ್ಲದೇ ವಿದ್ಯಾರ್ಥಿಗಳ ಸಾರ್ವತೋಮುಖ ಬೆಳವಣಿಗೆಗೆ, ಕಾಲೇಜಿನ ಅಭಿವೃದ್ಧಿಗೂ ಪೂರಕವಾಗಿಯೂ ಪ್ರವರ್ತಿಸುತ್ತದೆ ಎಂದು ಕಾಲೇಜು ಯೂನಿಯನ್ ಉದ್ಘಾಟಿಸಿ ಪ್ಲವರ್ಸ್ ಟಿವಿ ಕಾಮಿಡಿ ಉಲ್ಸವಂ ಖ್ಯಾತಿಯ ಗಾಯಕ ರತೀಶ್ ಕಂಡಡುಕ್ಕಂ ಹೇಳಿದರು.
ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್, ಮಂಜೇಶ್ವರ ಕಾಲೇಜು ಆವರಣದಲ್ಲಿ ನಡೆದ 2022 – 23ನೇ ಸಾಲಿನ ಕಾಲೇಜು ಯೂನಿಯನ್ ಉದ್ಘಾಟನಾ ಸಮಾರಂಭ “ಧ್ವನಿ 2ಕೆ23” ಯಲ್ಲಿ ಕಾಲೇಜು ಯೂನಿಯನ್ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳ ಧ್ವನಿಯಾಗುವ ಕಾಲೇಜು ಯೂನಿಯನ್ ಮತ್ತೊಂದೆಡೆ ಭವಿಷ್ಯದ ತಿಳಿವಳಿಕೆ ಹೊಂದಿದ ಜಾಗೃತ ಪೌರರ ಸೃಷ್ಟಿಗೂ ನಾಂದಿ ಹಾಡುತ್ತದೆ. ಮಾತ್ರವಲ್ಲದೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವ, ಇತರರ ಸಮಸ್ಯೆಗೆ ಸ್ವಂದಿಸುವ, ಒಳಿತನ್ನು ಪ್ರಶಂಸಿಸುವ ಗುಣವನ್ನು ಬೆಳೆಸುತ್ತದೆ.
ಮುಖ್ಯ ಅತಿಥಿ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್ ಮಾತನಾಡಿ, ಛಲವಿದ್ದರೆ ಸಾಧನೆ ಅಸಾಧ್ಯವಲ್ಲ. ಸೋಲನ್ನೇ ಗೆಲುವಿನ ಮೆಟ್ಟಿಳನ್ನಾಗಿಸಿ, ಹೀಯಾಳಿಕೆಗಳನ್ನೇ ಪ್ರೇರಣೆಯಾಗಿ ಸ್ವೀಕರಿಸಿ, ಯುವ ಜನಾಂಗ ಛಲ ಬಿಡದೆ ಮುನ್ನುಗಬೇಕಿದೆ, ತಮ್ಮ ವೈಯಕ್ತಿಕ ಬೆಳವಣಿಗೆಯೊಂದಿಗೆ ರಾಜ್ಯ, ರಾಷ್ಟ್ರದ ಬೆಳವಣಿಗೆಗೆಗೂ ಶ್ರಮಿಸಬೇಕಿದೆ.ನಿರುದ್ಯೋಗ ಸಮಸ್ಯೆಯ ಬಗ್ಗೆ ಚಿಂತಿಸುವ ಯುವಜನಾಂಗ ಇತರ ಕ್ಷೇತ್ರಗಳ ಮೇಲೆ ನೀಡುವ ಸಮಾನ ಆಸಕ್ತಿ, ಸ್ಥಾನಮಾನಗಳನ್ನು ಕೃಷಿ ಕ್ಷೇತ್ರಕ್ಕೂ ನೀಡಿದಲ್ಲಿ ಒಂದು ಮಟ್ಟಿಗೆ ನಿರುದ್ಯೋಗದ ಚಿಂತೆಯೂ ನಿವಾರಣೆಯಾಗುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದಲ್ಲೂ ಹಲವಾರು ಅವಕಾಶಗಳು ಅಡಕವಾಗಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಸಫಲತೆ ನಮ್ಮದಾಗಲಿದೆ ಎಂದರು.
ಕಾಲೇಜು ಪ್ರಿನ್ಸಿಪಾಲ್ ನಳಿನಿ ಕೆ. ವಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಮರ್ಸ್ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್ ಸಿ. ಎಚ್., ಸ್ಟಾಫ್ ಅಡ್ವೈಸರ್ ಸೌಮಿನಿ, ಸ್ಟಾಫ್ ಸೆಕ್ರೆಟರಿ ಸ್ವಾತಿ ದೇವರಾಜ್, ಕಾಲೇಜ್ ಸುಪೆರಿಂಡೆಂಟ್ ನಾಗವೇಣಿ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಯೂನಿಯನ್ ಅಧ್ಯಕ್ಷೆ ಸೀತಾರ ಪಿ. ಸ್ವಾಗತಿಸಿ ಕಾರ್ಯದರ್ಶಿ ಹರ್ಷಿಣಿ ಎಸ್. ವಂದಿಸಿದರು. ಕಂಪ್ಯೂಟರ್ ಅಸೋಸಿಯೇಷನ್ ಕಾರ್ಯದರ್ಶಿ ನಿಶಾ ನಿರೂಪಿಸಿದರು.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…