ಮಾನವ ಸಹಿತ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ | ರಾಕೆಟ್ ನಿಂದ ಬೇರ್ಪಟ್ಟು ಸಮುದ್ರಕ್ಕೆ ಬಂದಿಳಿದ 2 ಮಾಡೆಲ್’ಗಳು

October 21, 2023
12:49 PM

ಇಸ್ರೋದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ಯಶಸ್ವಿಯಾಗಿದೆ. ಕ್ರ್ಯೂ ಮಾಡೆಲ್, ಕ್ರ್ಯೂ ಎಸ್ಕೇಪ್​ ಮಾಡೆಲ್​​ ಒಳಗೊಂಡ ರಾಕೆಟ್​​ನಿಂದ ಬೇರ್ಪಟ್ಟು  ಮಾಡೆಲ್​ಗಳು ಪ್ಯಾರಚೂಟ್ ಮೂಲಕ ಭೂಮಿಗೆ ಬಂದಿಳಿದಿವೆ. ಮಾನವಸಹಿತ ಗಗನಯಾನ (Gaganyaan Mission) ಸಿದ್ಧತೆಯ ಭಾಗವಾಗಿ, ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡೆಸಿದ ಮಾನವ ರಹಿತ ಮೊದಲ ಪ್ರಾಯೋಗಿಕ ಪರೀಕ್ಷಾರ್ಥ ವಾಹನ ಯಶಸ್ವಿಯಾಗಿ ಉಡಾವಣೆಯಾಗಿದೆ.

Advertisement
Advertisement
3 ಬಾರಿ ವಿಫಲವಾದ ಬಳಿಕ ಮತ್ತೊಮ್ಮೆ ರಾಕೆಟ್ ಉಡಾವಣೆಗೆ ಪ್ರಯತ್ನಿಸಿದ ಇಸ್ರೋ, ತಾಂತ್ರಿಕ ದೋಷ ಸರಿಪಡಿಸಿದ ನಂತರ ಬೆಳಗ್ಗೆ 10 ಗಂಟೆ ವೇಳೆಗೆ TV-D1 ರಾಕೆಟ್‌ ಉಡಾವಣೆ ಮಾಡಲಾಯಿತು. ಯಶಸ್ವಿಯಾಗಿ ಹಾರಾಟ ನಡೆಸಿದ, ರಾಕೆಟ್‌ ಸೇಫ್‌ ಲ್ಯಾಂಡಿಂಗ್‌ ಆಗಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ. ಇಂದು ಬೆಳಗ್ಗೆ 8:45 ಗಂಟೆಗೆ ಮಾನವರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ಸಜ್ಜಾಗಿತ್ತು. ಅದಕ್ಕೂ ಮುನ್ನ 8:30 ಗಂಟೆಗೆ ಉಡ್ಡಯನಕ್ಕೆ ಇಸ್ರೋ ಸಮಯ ನಿಗದಿಪಡಿಸಿತ್ತು, ಆದ್ರೆ ಹವಾಮಾನ ವೈಪರಿತ್ಯದಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಟಕ್ಕೆ ರಾಕೆಟ್‌ ಉಡಾವಣೆ ಮಾಡಲಾಯಿತು. ಈ ಪರೀಕ್ಷೆಗೆ TV-D1 ಎಂದು ಹೆಸರಿಸಲಾಗಿದೆ. ಇಂತಹ ಉದ್ದೇಶಿತ ಮೂರು ಪರೀಕ್ಷೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏಕ ಹಂತದ ರಾಕೆಟ್ ʻಟಿವಿ-ಡಿ1ʼ ನಭಕ್ಕೆ ಚಿಮ್ಮಿದ್ದು, ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಂಡಿದೆ.

TV-D1 ಪರೀಕ್ಷಾರ್ಥ ಹಾರಾಟವು ಗಗನಯಾನ ಮಿಷನ್‌ನ ನಿರ್ಣಾಯಕ ಭಾಗವಾಗಿದೆ. ಇದು ಮೂರು ವ್ಯಕ್ತಿಗಳ ಸಿಬ್ಬಂದಿಯನ್ನು 3 ದಿನಗಳ ಕಾರ್ಯಾಚರಣೆಗಾಗಿ 400 ಕಿಲೋಮೀಟರ್ ಕಕ್ಷೆಗೆ ಕಳುಹಿಸುವುದು, ಈ ಮೂಲಕ ಹಿಂದೂ ಮಹಾಸಾಗರದ ನೀರಿನಲ್ಲಿ ಸೇಫ್ ಲ್ಯಾಂಡಿಂಗ್ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವುದು ಇದರೊಂದಿಗೆ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮರ್ಥ್ಯ ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

Advertisement
TV-D ವಾಹನವು ಮಾರ್ಪಡಿಸಿದ ವಿಕಾಸ್ (VIKAS) ಎಂಜಿನ್ ಒಳಗೊಂಡಿದ್ದು, ಕ್ರ‍್ಯೂ ಮಾಡ್ಯೂಲ್ ಮತ್ತು ಕ್ರ‍್ಯೂ ಎಸ್ಕೇಪ್ ಸಿಸ್ಟಂ ಅನ್ನು ಬಳಸುತ್ತದೆ. ಇದು 34.9 ಮೀಟರ್ ಎತ್ತರದಲ್ಲಿದೆ ಮತ್ತು 44 ಟನ್‌ಗಳಷ್ಟು ತೂಕ ಹೊಂದಿದೆ. ಒಂದು ವೇಳೆ ಈ ಮಿಷನ್ ಯಶಸ್ವಿಯಾದಲ್ಲಿ ಮಾನವಸಹಿತ ಬ್ಯಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡುವ ಸಾಮರ್ಥ್ಯವಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ.
– ಅಂತರ್ಜಾಲ ಮಾಹಿತಿ
Safety trial of ISRO's spacecraft successful. The models separated from the rocket including crew model, crew escape model and landed on earth by parachute. As part of preparations for the Gaganyaan Mission, the Indian Space Research Organization (ISRO) on Saturday successfully launched the first unmanned experimental test vehicle.
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Karnataka Weather |12-05-2024 | ಹಲವು ಕಡೆ ಮಳೆಯ ನಿರೀಕ್ಷೆ ಇದೆ |
May 12, 2024
11:56 AM
by: ಸಾಯಿಶೇಖರ್ ಕರಿಕಳ
ಕರ್ನಾಟಕದಾದ್ಯಂತ ಗೋಕೃಪಾಮೃತ ವಿತರಣೆ : ಗೋಕೃಪಾಮೃತ ಇರುವಾಗ ಮಾರುಕಟ್ಟೆಯಲ್ಲಿನ ದುಬಾರಿ ಕೃಷಿ ಗೊಬ್ಬರ & ಕ್ರಿಮಿನಾಶಕಗಳ ಹಂಗೇಕೆ?
May 12, 2024
11:53 AM
by: The Rural Mirror ಸುದ್ದಿಜಾಲ
ಪುತ್ತೂರಿನಲ್ಲಿ ಹಲಸು ಹಣ್ಣು ಮೇಳದ ಏಳನೇ ಆವೃತ್ತಿ : ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ
May 12, 2024
11:34 AM
by: The Rural Mirror ಸುದ್ದಿಜಾಲ
ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ : ರೈತರ ಮೊಗದಲ್ಲಿ ಸಂತಸ : ಕೆಲವೆಡೆ ಹಾನಿ
May 12, 2024
11:10 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror