Advertisement
MIRROR FOCUS

ಹಲಸು ಮೌಲ್ಯವರ್ಧನೆ | ಹಲಸು ಮೇಳದಲ್ಲಿ ರುಚರುಚಿಯಾದ ತಿಂಡಿ…! | ಅಡುಗೆ ಮನೆಗೆ ಯಾವಾಗ..?

Share

ಈಗ ಹಲಸು ಮೇಳ-ಮಾವು ಮೇಳದ ಗೌಜಿ. ಕರಾವಳಿ ಜಿಲ್ಲೆ ಮಾತ್ರವಲ್ಲ ಇದೀಗ ರಾಜ್ಯದೆಲ್ಲಡೆ ಹಲಸು-ಮಾವು ಮೇಳ ನಡೆಯುತ್ತಿದೆ. ಕಳೆದ ಎರಡು ವಾರದಲ್ಲಿ ಮಂಗಳೂರು, ಬೆಂಗಳೂರು,ಮೈಸೂರಿನಲ್ಲಿ ಹಲಸು ಮೇಳ ನಡೆದಿದೆ, ಪುತ್ತೂರಿನಲ್ಲಿ ಈಗ ನಡೆಯುತ್ತಿದೆ. ಹಲಸು ಮೇಳದಲ್ಲಿ ಪ್ರತೀ ಸಲವೂ ರುಚಿ ರುಚಿಯಾದ ಖಾದ್ಯದ ಪರಿಚಯವಾಗುತ್ತದೆ. ಈ ಖಾದ್ಯಗಳು ಮನೆಮನಗೆ ತಲಪಿದಾದ ಹಸಲು ಮೌಲ್ಯವರ್ಧನೆಯ ಗುರಿ ಸಾಕಾರವಾಗುತ್ತದೆ.

Advertisement
Advertisement
ಹಲಸು ಮೇಳದಲ್ಲಿ ಮಾರಾಟಕ್ಕೆ ಬಂದಿರುವ ಹಲಸು
ಪುತ್ತೂರಿನಲ್ಲಿ ಹಲಸು ಮೇಳ

ಕಳೆದ  ಕೆಲವು ವರ್ಷಗಳಿಂದ ಕೇರಳದಲ್ಲಿ ಹಲಸು ಮೌಲ್ಯವರ್ಧನೆ ಬಗ್ಗೆ ಕೆಲಸವಾಗುತ್ತಲೇ ಇತ್ತು. ಸಣ್ಣ ಸಣ್ಣ ಹಳ್ಳಿಯಲ್ಲೂ ಹಲಸು ಮೌಲ್ಯವರ್ಧನೆ ನಡೆದಿದೆ, ನಡೆಯುತ್ತಿದೆ. ಇದರ ಒಂದು ಭಾಗವೇ ಹಲಸು ಮೇಳ. ಹಲಸು ಮೇಳದ ಮೂಲಕ ಹಲಸು ಉತ್ಪನ್ನಗಳ ಪರಿಚಯ ಆ ಮೂಲಕ ಹಲಸಿನ ಮಾನ. ಆ ಹಲಸು ಉತ್ಪನ್ನಗಳನ್ನು ಮನೆ ಮನೆಗೂ ತಲಪಿ ಅಡುಗೆ ಮನೆಯವರೆಗೂ ಮೌಲ್ಯವರ್ಧನೆಯಾಗಬೇಕು. ಈ ಕೆಲಸ ನಡೆಯುತ್ತಿದೆ. ಈ ಬಗ್ಗೆ ರಾಜ್ಯದಲ್ಲಿ ಕೂಡಾ ಕಳೆದ ಹಲವು ಸಮಯಗಳಿಂದ ಕೆಲಸ ನಡೆಯುತ್ತಿದೆ.  5-6 ವರ್ಷಗಳಿಂದ ಹಲಸು ಮೌಲ್ಯವರ್ಧನೆ ಬಗ್ಗೆ  ಅಡಿಕೆ ಪತ್ರಿಕೆ ಎಚ್ಚರಿಸುತ್ತಿದೆ, ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಿತ್ತು. ಇದೀಗ ರಾಜ್ಯದಲ್ಲೂ ಹಲಸು ಮೇಳವು ಸ್ಥಾನ ಪಡೆದುಕೊಂಡಿದೆ. ಜನಾಕರ್ಷಣೆಯ ಕೇಂದ್ರವೂ ಆಗಿದೆ.

Advertisement

ಕಳೆದ ಒಂದು ವಾರದಲ್ಲಿ ಹಲವು ಕಡೆ ಹಲಸು ಮೇಳವಾಗಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 24 ರಂದು ಮಾವು ಹಾಗೂ ಹಲಸು ಮೇಳ ಆರಂಭವಾಗಿದೆ. ಇದು ಜೂನ್ 10ರವರೆಗೆ ನಡೆಯಲಿದೆ. ಮೇಳವನ್ನು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿದೆ. ಇಲ್ಲಿ 74 ಮಳಿಗೆಗಳನ್ನು ಮಾವು ಬೆಳೆಗಾರರಿಗೆ, 9 ಮಳಿಗೆ ಹಲಸು ಬೆಳೆಗಾರರಿಗೆ ಮತ್ತು 14 ಮಳಿಗೆಗಳನ್ನು ಇತರೆ ಹಣ್ಣಿನ ಉತ್ಪನ್ನಗಳ ಮಾರಾಟಕ್ಕೆ ಒದಗಿಸಲಾಗಿದೆ.

ಮೈಸೂರಿನಲ್ಲಿ ಕೂಡಾ ಹಲಸು ಮಾವು ಮೇಳ ನಡೆಯುತ್ತದೆ. ಈ ಬಾರಿ ನಗರದ ಕುಪ್ಪಣ್ಣ ಪಾರ್ಕ್‍ನಲ್ಲಿ ಮೇ 24ರಿಂದ 26ರವರೆಗೆ ಮಾವು ಮೇಳ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಮಾವಿನ ಹಣ್ಣುಗಳೊಂದಿಗೆ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ.

Advertisement

ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿರುವಂತ ಇದು ಏಳನೇ ವರ್ಷದ ಹಲಸಿನ ಹಬ್ಬ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದರು. ಇದೀಗ ಪುತ್ತೂರಿನಲ್ಲೂ 7 ನೇ ವರ್ಷದ ಹಲಸು ಮೇಳ ನಡೆಯುತ್ತಿದೆ. ಪುತ್ತೂರಿನ ಜೈನ್ ಭವನದಲ್ಲಿ ಮೇ 24ರ ಶುಕ್ರವಾರ ಮೇಳಕ್ಕೆ ಚಾಲನೆ ನೀಡಲಾಗಿದೆ. ಮೇ 26ರ ಭಾನುವಾರದ ವರೆಗೆ ಹಲಸು ಮೇಳ ನಡೆಯಲಿದೆ. ಮೇಳದಲ್ಲಿ  ಹಲಸಿನ ಹಣ್ಣಿನ ವಿವಿಧ ಖಾದ್ಯಗಳಾದ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ರೊಟ್ಟಿ, ಕೇಕ್, ಹಲ್ವಾ, ಸೇಮಿಗೆ, ಬನ್ಸ್ ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ ಕ್ರೀಮ್ ಸಹಿತ ಹಲವು ಬಗೆಯ ಖಾದ್ಯಗಳು  ಹಲಸುಪ್ರಿಯರ ಗಮನ ಸೆಳೆದವು.

ಪುತ್ತೂರಿನ ಹಲಸು ಮೇಳದಲ್ಲಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ , ಹಲಸು ಮೌಲ್ಯವರ್ಧನೆಯ ಬಗ್ಗೆ ಆರಂಭದಲ್ಲಿ ಅಡಿಕೆ ಪತ್ರಿಕೆ ಬಹಳಷ್ಟು ಕೆಲಸ ಮಾಡಿದೆ. ಹೀಗಾಗಿ ಈಗ ಮಾನ ಬರುತ್ತಿದೆ. ಹಲಸು ಮೇಳಗಳು ಕೇವಲ ವಾಣಿಜ್ಯ ಉದ್ದೇಶದಿಂದ ನಡೆದಲ್ಲಿ ಅದರ ಮಹತ್ವ ಕಳೆದುಕೊಳ್ಳುತ್ತದೆ. ಹಲಸು ಮೌಲ್ಯವರ್ಧನೆಯ ಜೊತೆಗೆ ಕೃಷಿಕರೂ ಕೂಡಾ ಉತ್ತಮ ತಳಿಯ ಆಯ್ಕೆ ಮಾಡಿ ಹಲಸು ಬೆಳೆಯುವುದು ಹಾಗೂ ಮಾರುಕಟ್ಟೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕೆ ಮೇಳಗಳು ನೆರವಾಗಬೇಕು ಎಂದು ಅವರು ಹೇಳಿದರು.

Advertisement

ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಮಾತನಾಡಿ, ಹಲಸು ಹಸಿದವರ ಹಣ್ಣು. ಹಲಸು ಮೌಲ್ಯವರ್ಧನೆಯಾದಾಗ ಕೃಷಿಯೂ ಬೆಳವಣಿಗೆ ಸಾಧ್ಯವಿದೆ. ಇದಕ್ಕಾಗಿ ನಿರಂತರ ಪ್ರಯತ್ನ ಅಗತ್ಯ ಎಂದು ಹೇಳಿದರು.


ಪುತ್ತೂರಿನ ಹಲಸು ಮೇಳದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ

Advertisement
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

Karnataka Weather | 26-06-2024 | ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ | ಉಳಿದೆಡೆ ಸಾಮಾನ್ಯ ಮಳೆ |

ಮುಂಗಾರು ಚುರುಕಾಗಿದ್ದು ಈಗಿನ ಪ್ರಕಾರ ಜೂನ್ 29ರಿಂದ ಕರಾವಳಿ ಭಾಗಗಳಲ್ಲಿ ಮಳೆ ಪ್ರಮಾಣ…

2 hours ago

ಪರೀಕ್ಷಾ ಅಕ್ರಮಗಳು.. | ಅರ್ಹರನ್ನು ಗುರುತಿಸಲಾರದಷ್ಟು ಭ್ರಷ್ಟಗೊಂಡ ವ್ಯವಸ್ಥೆ…

ಭಾರತ(India) ಈ ಕ್ಷಣದಲ್ಲಿ, ಅಂತರಾಷ್ಟ್ರೀಯ(International) ಮಟ್ಟದಲ್ಲಿ ಸಾಕಷ್ಟು ಮುಂದುವರಿಯುತ್ತಿದೆ, ಬೆಳೆಯುತ್ತಿದೆ, ಅಭಿವೃದ್ಧಿ(Developing) ಹೊಂದುತ್ತಿದೆ,…

3 hours ago

ರೈತರಿಗೋಸ್ಕರ ಹಾಲಿನ ದರ ಪರಿಷ್ಕರಣೆ | ದರ ಹೆಚ್ಚಳದ ಲಾಭ ರೈತರಿಗೆ ಸಿಗಲಿದೆ | ಡಿಸಿಎಂ ಡಿಕೆ ಶಿವಕುಮಾರ್

ಹಾಲಿನ ದರ ಏರಿಕೆಯಿಂದ ರೈತರಿಗೂ ಲಾಭದ ಪಾಲು ಸಿಗಲಿದೆ, ಸಂಕಷ್ಟದಲ್ಲಿರುವ ಹೈನುಗಾರರಿಗೆ ನೆರವಾಗಲು…

3 hours ago

ಲೋಕಸಭೆಯ ಸ್ಪೀಕರ್‌ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆ | ಚುನಾವಣೆ ಮೂಲಕ ನಡೆದ ಸಭಾಪತಿ ಆಯ್ಕೆ |

ಕಳೆದ ಒಂದು ವಾರದಿಂದ ಭಾರಿ ಕುತೂಹಲ ಮೂಡಿಸಿದ್ದ ಲೋಕಸಭೆ ಸ್ಪೀಕರ್‌(Lok sabha speaker)…

4 hours ago

ಮುಂಗಾರು ಚುರುಕು | ಕೆಆರ್‌ಎಸ್‌ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳ | ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ವರ ದುರ್ಮರಣ

ಕಾವೇರಿ ಜಲಾನಯನ(cauvery belt) ಪ್ರದೇಶದಲ್ಲಿ ಮುಂಗಾರು (Monsoon) ಚುರುಕು ಪಡೆದುಕೊಂಡಿದ್ದು, ಕೆಆರ್‌ಎಸ್ ಡ್ಯಾಂ…

4 hours ago

ಡೆಂಗ್ಯು ಬಳಿಕ ಏನೇನು ಆಹಾರ ಸ್ವೀಕರಿಸಬೇಕು ? | ಡಾ.ರವಿಕಿರಣ ಪಟವರ್ಧನ ಅವರ ಸಲಹೆಗಳು..

ಡೆಂಗ್ಯು ನಂತರ ಹೇಳಿದ ಆಹಾರವನ್ನು ಸ್ವೀಕರಿದರೆ ರೋಗ,ರೋಗದ ನಂತರದ ಹಲವು ತೊಂದರೆಗಳು ಸುಲಭ ನಿವಾರಣೆಯಾಗಬಹುದು.…

1 day ago