ಫುಟ್ಬಾಲ್ ಐಕಾನ್ ಡಿಗೋ ಮರಡೋನಾ ಇನ್ನಿಲ್ಲ

November 25, 2020
10:39 PM

ಫುಟ್ಬಾಲ್ ಐಕಾನ್ ಅರ್ಜೆಂಟೀನಾ ದೇಶದ ಮಾಜಿ ಆಟಗಾರ ಡಿಗೊ ಮರಡೋನಾ ನಿಧನರಾದರು.ಪ್ರಸಿದ್ದ ಫುಟ್ಬಾಲ್‌ ಆಟಗಾರನಾಗಿದ್ದ ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆಯಲು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅದಾದ ಬಳಿಕ ವಿಶ್ರಾಂತಿಯಲ್ಲಿದ್ದ ಅವರು ಹೃದಯಾಘಾತದಿಂದ ನಿಧನರಾದರು.

Advertisement
Advertisement

ಮರಡೋನಾ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬನೆಂದು ಗುರುತಿಸಲ್ಪಟ್ಟಿದೆ. 21 ವರ್ಷಗಳ ಕಾಲ ಫುಟ್ಬಾಲ್‌ ಆಟದಲ್ಲಿ ತೊಡಗಿಸಿಕೊಂಡಿದ್ದರು. ಮರಡೋನಾ ತನ್ನ ವೃತ್ತಿಜೀವನವನ್ನು ಅರ್ಜೆಂಟಿನೋಸ್ ಜೂನಿಯರ್ಸ್‌ ತಂಡದಲ್ಲಿ ಪಾದಾರ್ಪಣೆ ಮಾಡಿ 1976ರಿಂದ 1981ರವರೆಗೂ ಅಲ್ಲೇ ಆಡುತ್ತಿದ್ದರು.ಅರ್ಜೆಂಟಿನಾ ರಾಷ್ಟ್ರೀಯ ಫುಟ್‍ಬಾಲ್ ತಂಡಕ್ಕೆ, ತಮ್ಮ ಹದಿನಾರನೇ ವಯಸ್ಸಿನಲ್ಲಿ, ಹಂಗೇರಿ ದೇಶದ ವಿರುದ್ಧ ಆಡುವುದರ ಮೂಲಕ ಪಾದಾರ್ಪಣೆ ಮಾಡಿದರು.  ಆ ಬಳಿಕ ಅವರು ದೇಶದ ತಂಡದಲ್ಲಿ ಸ್ಥಾನ ಪಡೆದರು.ಒಟ್ಟು ನಾಲ್ಕು ವರ್ಲ್ಡ್ ಕಪ್ ಸರಣಿಗಳಲ್ಲಿ ಭಾಗವಹಿಸಿ, 1986 ರಲ್ಲಿ ತಂಡದ ಮುಂದಾಳತ್ವವನ್ನು ವಹಿಸಿ ಅಂತಿಮ ಸುತ್ತಿನಲ್ಲಿ ಪಶ್ಚಿಮ ಜರ್ಮನಿಯನ್ನು ಸದೆಬಡಿದು, ಸರಣಿಯ ಶ್ರೇಷ್ಠ ಆಟಗಾರರೆಂದು “ಗೋಲ್ಡನ್ ಬಾಲ್” ಪ್ರಶಸ್ತಿಯನ್ನು ಪಡೆದಿದ್ದರು.

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆ ಇಲ್ಲ, ನೀರಿಲ್ಲ, ಬರಗಾಲ ಎಂದು ಬೊಬ್ಬೆ ಹೊಡೆಯದಿರಿ : ಮಳೆ ನೀರನ್ನು ಹಿಡಿದಿಡುವ ಕಾರ್ಯ ಅಗತ್ಯ :
May 19, 2024
5:57 PM
by: The Rural Mirror ಸುದ್ದಿಜಾಲ
ಮಾನವರಾದ ನಮಗೆ ಪರಿಸರ ಎಷ್ಟು ಮುಖ್ಯ..? ಪರಿಸರಿದಿಂದ ನಮಗಾಗುವ ಪ್ರಯೋಜನವೇನು..?
May 19, 2024
5:28 PM
by: The Rural Mirror ಸುದ್ದಿಜಾಲ
ಸಮುದ್ರದ ಉಪ್ಪು, ಅಯೋಡಿಕರಿಸಿದ ಟೇಬಲ್ ಉಪ್ಪು, ಸೈಂಧವ ಉಪ್ಪು, ಕಪ್ಪು ಉಪ್ಪು : ಯಾವ ಉಪ್ಪು ಆರೋಗ್ಯಕ್ಕೆ ಒಳ್ಳೆಯದು?
May 19, 2024
5:08 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror