ವರ್ಕ್ ಫ್ರಂ ಹೋಮ್ ನಿಲ್ಲಿಸಿದ್ದಕ್ಕೆ ಮಹಿಳಾ ಟೆಕ್ಕಿಗಳಿಂದ ಸಾಮೂಹಿಕ ರಾಜೀನಾಮೆ |

June 14, 2023
1:09 PM

ಮಹಾಮಾರಿ ಕೊರೊನಾ ಹರಡಿದ ನಂತರ ದೇಶಾದ್ಯಂತ ವರ್ಕ್ ಫ್ರಂ ಹೋಮ್ ಜಾರಿಗೊಳಿಸಲಾಗಿತ್ತು. ಇದೀಗ ಕಂಪನಿಯೊಂದು ವರ್ಕ್ ಫ್ರಂ ಹೋಂ ಸಾಕು, ಆಫೀಸಿಗೆ ಬಂದು ಕೆಲಸ ಮಾಡಿ ಎಂದು ಸೂಚನೆ ನೀಡಿದೆ. ಈ ಬೆನ್ನಲ್ಲೇ ಮಹಿಳಾ ಟೆಕ್ಕಿಗಳು ನಾವು ಇದಕ್ಕೆ ಒಪ್ಪುವುದಿಲ್ಲ ಎಂದು  ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

Advertisement
Advertisement
Advertisement

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯು ಆಫೀಸಿಗೆ ಬಂದು ಕೆಲಸ ಮಾಡುವಂತೆ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ಟಿಸಿಎಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಮಿಲಿಂದ್ ಲಕ್ಕಡ್  ಮಾತನಾಡಿ, ಕಂಪನಿಯು ಮನೆಯಿಂದಲೇ ಕೆಲಸ ಮಾಡಿದ್ದು ಸಾಕು, ಕಚೇರಿಗೆ ಬಂದು ಕಾರ್ಯ ನಿರ್ವಹಿಸಿ ಎಂದು ಹೇಳಿದ ನಂತರ ಅನೇಕ ಮಂದಿ ಉದ್ಯೋಗಿಗಳಿಂದ ರಾಜೀನಾಮೆ ಪತ್ರಗಳು ಬಂದವು.

Advertisement

ಸಾಮಾನ್ಯವಾಗಿ ಟಿಸಿಎಸ್ ಕಂಪನಿಯಲ್ಲಿ ಹಿಂದೆಲ್ಲ ಪುರುಷರಿಗಿಂತ ಮಹಿಳೆಯರು ರಾಜೀನಾಮೆ ನೀಡುವ ಪ್ರಮಾಣ ಕಡಿಮೆ ಇತ್ತು. ಆದರೆ ಈ ಬಾರಿ ಮಾತ್ರ ಪುರುಷರಿಗಿಂತ ಮಹಿಳೆಯರೇ ಹೆಚ್ಚು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆಗೆ ಬೇರೆ ಬೇರೆ ಕಾರಣಗಳಿರಬಹುದಾದರೂ ಪ್ರಮುಖ ಕಾರಣ ಮಾತ್ರ ವರ್ಕ್ ಫ್ರಂ ಹೋಮ್ ರದ್ದತಿ ಎಂಬುದು ಹೇಳಿದ್ದಾರೆ.

ಟಿಸಿಎಸ್ ನಲ್ಲಿ 6,00,000 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ. ಅದರಲ್ಲಿ 35% ಮಹಿಳಾ ಉದ್ಯೋಗಿಗಳಿದ್ದಾರೆ. ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶವನ್ನು ಕಂಪನಿ ನಿಲ್ಲಿಸಿದ ನಂತರ ಮಹಿಳಾ ಟೆಕ್ಕಿಗಳು ಹೆಚ್ಚಾಗಿ ರಾಜೀನಾಮೆಗಳನ್ನು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.

Advertisement

ಒಟ್ಟಿನಲ್ಲಿ ಕೋವಿಡ್ ಕಾರಣಕ್ಕೆ ಉದ್ಯೋಗಿಗಳಿಗೆ ಪ್ರಪಂಚದಾದ್ಯಂತ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡಲಾಗಿತ್ತು. ಹಲವು ಸಮೀಕ್ಷೆಗ ಪ್ರಕಾರ, ಈ ಸೌಲಭ್ಯದಿಂದಾಗಿ ಕೆಲಸದ ಔಟ್‍ಪು‌ಟ್ ಹೆಚ್ಚಾಗಿದೆ. ಕಂಪನಿಗಳಿಗೂ ಕೆಲವೊಂದಿಷ್ಟು ಆಡಳಿತಾತ್ಮಕ ವೆಚ್ಚ ತಗ್ಗಿದೆ ಎನ್ನಲಾಗಿತ್ತು. ಆದರೆ ಮನೆಯಿಂದ ಕೆಲಸ ಮಾಡಿದರೆ ತಂಡಗಳನ್ನು ನಿರ್ವಹಿಸುವುದು ಕಷ್ಟ ಎಂಬುದು ಕೆಲ ಕಂಪನಿಗಳ ಮ್ಯಾನೇಜ್ಮೆಂಟ್ ವಾದವಾಗಿತ್ತು. ಆದರೆ ಹೆಚ್ಚಿನ ಉದ್ಯೋಗಿಗಳು ಈಗಲೂ ವರ್ಕ್ ಫ್ರಂ ಹೋಮ್ ಸೌಲಭ್ಯವನ್ನೇ ಇಷ್ಟಪಡುತ್ತಾ ಇದ್ದಾರಂತೆ. ಮ್ಯಾನೇಜ್ಮೆಂಟ್ ಬಲವಂತಕ್ಕೆ ಕಚೇರಿಗೆ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ
January 19, 2025
10:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror