ಉಡುಪಿ ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಮೀರ್ ಮುಹಮ್ಮದ್ ಗೌಸ್ 2021ನೇ ಸಾಲಿನ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕವನ್ನು ಸೋಮವಾರ ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಸ್ವೀಕರಿಸಿದರು.
1992ರಲ್ಲಿ ಅಗ್ನಿಶಾಮಕ ಇಲಾಖೆಗೆ ಸೇರ್ಪಡೆಗೊಂಡ ಇವರು, 30ವರ್ಷಗಳ ಸೇವಾ ಅವಧಿಯಲ್ಲಿ ಪ್ರಮುಖ ಅಗ್ನಿಶಾಮಕರಾಗಿ ಪದೋನ್ನತಿ ಹೊಂದಿ ಪ್ರಸ್ತುತ ಸಹಾಯಕ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಿಸ್ವಾರ್ಥ ಸೇವೆಯ ಗೌರವಾರ್ಥವಾಗಿ ಇವರಿಗೆ ಇಲಾಖೆಯು 33 ಬಾರಿ ನಗದು ಬಹುಮಾನಗಳು, 2 ಉತ್ತಮ ಸೇವೆ ಪತ್ರಗಳನ್ನು ನೀಡಲಾಗಿದೆ. ಇವರಿಗೆ 2012ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel